Advertisment

3 ವರ್ಷ ಲಾಟರಿ ಟಿಕೆಟ್ ತೆಗೆದುಕೊಳ್ತಿದ್ದವನಿಗೆ 33 ಕೋಟಿ ಜಾಕ್‌ಪಾಟ್‌; ಅದೃಷ್ಟ ಅಂದ್ರೆ ಇದು ಅಲ್ವಾ!

author-image
admin
Updated On
3 ವರ್ಷ ಲಾಟರಿ ಟಿಕೆಟ್ ತೆಗೆದುಕೊಳ್ತಿದ್ದವನಿಗೆ 33 ಕೋಟಿ ಜಾಕ್‌ಪಾಟ್‌; ಅದೃಷ್ಟ ಅಂದ್ರೆ ಇದು ಅಲ್ವಾ!
Advertisment
  • ಬಿಗ್‌ ಟಿಕೆಟ್ ಲಾಟರಿಯ ಈ ವಾರದ ವಿನ್ನರ್ ಆದ ಭಾರತೀಯ
  • ಕಳೆದ 3 ವರ್ಷದಿಂದ ಲಾಟರಿ ಟಿಕೆಟ್ ತೆಗೆದುಕೊಳ್ಳುತ್ತಿದ್ದ ವ್ಯಕ್ತಿ
  • 33 ಕೋಟಿ 19 ಜನರಿಗೆ ಸಮನಾಗಿ ಹಂಚುತ್ತೇನೆ ಎಂದ ವಿನ್ನರ್!

ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗೆ ಬರೋಬ್ಬರಿ 33 ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ರಾಜೀವ್ ಅರಿಕ್ಕಾಟ್ ಎಂಬ ಬಹಳ ದಿನಗಳಿಂದ ಲಾಟರಿ ಟಿಕೆಟ್ ತೆಗೆದುಕೊಳ್ಳುತ್ತಿದ್ದು ಕೊನೆಗೂ ಜಾಕ್‌ಪಾಟ್ ಹೊಡೆದಿದೆ.

Advertisment

ಬಿಗ್‌ ಟಿಕೆಟ್ ಅಬುಧಾಭಿ ಎಂಬ ಸಂಸ್ಥೆ ಈ ಲಾಟರಿ ಟಿಕೆಟ್ ಆಯೋಜಿಸಿತ್ತು. ಬಿಗ್‌ ಟಿಕೆಟ್ ಲಾಟರಿಯ ಈ ವಾರದ ವಿನ್ನರ್ ಆಗಿ ರಾಜೀವ್ ಆಯ್ಕೆಯಾಗಿದ್ದಾರೆ. ರಾಜೀವ್ ತೆಗೆದುಕೊಂಡ ಲಾಟರಿ ಟಿಕೆಟ್ ನಂಬರ್ 037130ಗೆ ಬಂಪರ್ ಬಹುಮಾನ ಸಿಕ್ಕಿದೆ.

publive-image

ಇನ್ನೂ ಆಶ್ಚರ್ಯ ಏನಂದ್ರೆ ರಾಜೀವ್ ಅರಿಕ್ಕಾಟ್ ತನ್ನ ಮಕ್ಕಳ ಹುಟ್ಟಿದ ದಿನಾಂಕದ ಮೇಲೆ ತೆಗೆದುಕೊಂಡ ಲಾಟರಿ ವಿನ್ ಆಗಿದೆ. ಅಂದ್ರೆ 037130 ನಂಬರ್ ರಾಜೀವ್ ಅವರ ಮಕ್ಕಳ ಜನ್ಮ ದಿನಾಂಕ ಆಗಿದ್ದು, ಲಾಟರಿ ಟಿಕೆಟ್‌ನಲ್ಲಿ ಗೆಲುವು ತಂದುಕೊಟ್ಟಿದೆ. ಕೇರಳದಿಂದ ದುಬೈಗೆ ವಲಸೆ ಹೋಗಿದ್ದ ರಾಜೀವ್ ಅರಿಕ್ಕಾಟ್ ಅವರು ಕಳೆದ 3 ವರ್ಷದಿಂದ ಲಾಟರಿ ಟಿಕೆಟ್ ತೆಗೆದುಕೊಳ್ಳುತ್ತಿದ್ದಾರೆ. ದುಬೈನ ಅಲ್ ಐನ್‌ನಲ್ಲಿರುವ ಅರ್ಕಿಟೆಕ್ಟರಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಂಡತಿ, 5 ವರ್ಷ ಹಾಗೂ 8 ವರ್ಷದ ಇಬ್ಬರು ಮಕ್ಕಳು ರಾಜೀವ್ ಜೊತೆ ನೆಲೆಸಿದ್ದಾರೆ.

ಇದನ್ನೂ ಓದಿ: ಪಳ ಪಳ ಹೊಳೆಯೋ ರಾಮಲಲ್ಲಾ ಕಣ್ಣು ತಯಾರು ಆಗಿದ್ಹೇಗೆ? ಫೋಟೋ ಹಂಚಿಕೊಂಡ ಅರುಣ್​ ಯೋಗಿರಾಜ್‌!

Advertisment

publive-image

33 ಕೋಟಿ ರೂಪಾಯಿ 19 ಜನಕ್ಕೆ ಹಂಚುವೆ!
33 ಕೋಟಿ ರೂಪಾಯಿ ಲಾಟರಿ ಗೆದ್ದ ಮೇಲೆ ರಾಜೀವ್ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂತೋಷದಲ್ಲಿ ಲಾಟರಿಯಲ್ಲಿ ಗೆದ್ದ ಹಣವನ್ನು ನಾನು 19 ಜನರಿಗೆ ಸಮನಾಗಿ ಹಂಚುತ್ತೇನೆ ಎಂದಿದ್ದಾರೆ. ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಹೀಗಾಗಿ ನನ್ನ ಒಳ್ಳೆಯದನ್ನು ಬಯಸಿದ ಮತ್ತು ನನ್ನ ಖುಷಿಗೆ ಕಾರಣರಾದ 19 ಜನರಿಗೂ 33 ಕೋಟಿ ರೂಪಾಯಿ ಅನ್ನು ಸಮಾನಾಗಿ ಹಂಚುತ್ತೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment