ಮದ್ವೆಗೆ ಅಂತಾ ಅಮೆರಿಕಗೆ ಹೋಗಿದ್ದ ಮಹಿಳೆ ನಾಪತ್ತೆ.. ಆಕೆಯ ನಡೆ ಮೇಲೆ ಅನುಮಾನ ಇದೆ ಎಂದ ಪೊಲೀಸರು

author-image
Ganesh
Updated On
ಮದ್ವೆಗೆ ಅಂತಾ ಅಮೆರಿಕಗೆ ಹೋಗಿದ್ದ ಮಹಿಳೆ ನಾಪತ್ತೆ.. ಆಕೆಯ ನಡೆ ಮೇಲೆ ಅನುಮಾನ ಇದೆ ಎಂದ ಪೊಲೀಸರು
Advertisment
  • ಕುಟುಂಬಸ್ಥರು ಯಾರೂ ಇಲ್ಲ, ಇಂಗ್ಲಿಷ್ ಬರಲ್ಲ..
  • ಅಮೆರಿಕ ಪೊಲೀಸರ ಸಹಾಯ ಕೇಳಿದ ಕುಟುಂಬಸ್ಥರು
  • ಮದುವೆ ನೆಪದಲ್ಲಿ ಅಮೆರಿಕಗೆ ಹೋದರಾ ಮಹಿಳೆ..?

ಮದುವೆಗಾಗಿ ಅಮೆರಿಕಕ್ಕೆ ಹೋಗಿದ್ದ 24 ವರ್ಷದ ಭಾರತೀಯ ಮಹಿಳೆಯ ನಾಪತ್ತೆಯಾಗಿದ್ದಾಳೆ. ಸಿಮ್ರಾನ್ (Simran Simran) ಎಂಬ ಮಹಿಳೆ ಜೂನ್ 20 ರಂದು ಮದುವೆಗೆ ಅಂತಾ ನ್ಯೂಜರ್ಸಿಗೆ (New Jersey ) ಹೋಗಿದ್ದಳು. ಅಲ್ಲಿಗೆ ಹೋದ ನಂತರ ಆಕೆ ನಾಪತ್ತೆ ಆಗಿದ್ದಾಳೆ ಎನ್ನಲಾಗಿದೆ. ಈ ಪ್ರಕರಣ ಭಾರೀ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸದ್ಯ ಕುಟುಂಬಸ್ಥರು ಅಮೆರಿಕ ಪೊಲೀಸರ ಸಹಾಯ ಪಡೆಯುತ್ತಿದ್ದಾರೆ. ಯುಎಸ್ ಪೊಲೀಸರು ಘಟನಾ ಸ್ಥಳದಲ್ಲಿದ್ದ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಸಿಮ್ರಾನ್ ಕಾಣೆಯಾಗುವ ಸ್ವಲ್ಪ ಸಮಯದ ಮೊದಲು ಫೋನ್ ನೋಡುತ್ತ, ಯಾರಿಗೋ ಕಾಯುತ್ತಿರುವಂತೆ ಕಂಡು ಬಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಐದು ಹುಲಿಗಳ ಜೀವ ತೆಗೆದಿದ್ದು ಹೇಗೆ..? ತನಿಖೆ ವೇಳೆ ಇಂಚಿಂಚೂ ಮಾಹಿತಿ ಕಕ್ಕಿದ ಆರೋಪಿ ಮಾದ..!

ಇನ್ನು ಸಿಮ್ರಾನ್ ನಾಪತ್ತೆ ಪ್ರಕರಣವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅವರು ಅಮೆರಿಕಕ್ಕೆ ಮದುವೆಗಾಗಿ ಬಂದಿದ್ದಾರೆಯೇ ಅಥವಾ ಉಚಿತ ವಿಮಾನ ಪ್ರಯಾಣಕ್ಕಾಗಿ ಮದುವೆಯ ಪಾತ್ರ ನಿರ್ವಹಿಸುತ್ತಿದ್ದಾರೆಯೇ ಅನ್ನೋದ್ರ ಬಗ್ಗೆ ಅಮೇರಿಕ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿರುವ ಸಿಮ್ರಾನ್ ಕುಟುಂಬ, ಅಲ್ಲಿರುವ ಸಂಬಂಧಿಕರ ಸಂಪರ್ಕಿಸುತ್ತಿದ್ದರೂ ಯಾವುದೇ ವಿವರಗಳು ಸಿಕ್ಕಿಲ್ಲ. ಇನ್ನು ಅಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಕೂಡ ಇಲ್ಲ ಎನ್ನಲಾಗಿದೆ.

ಸಿಮ್ರಾನ್ 5 ಅಡಿ 4 ಇಂಚು ಎತ್ತರವಿದ್ದು, 68 ಕೆಜಿ ತೂಕ ಹೊಂದಿದ್ದಾರೆ. ಇನ್ನು, ಹಣೆಯ ಮೇಲೆ ಸಣ್ಣ ಗಾಯದ ಗುರುತಿದೆ ಅಂತಾ ಪೊಲೀಸರು ತಿಳಿಸಿದ್ದಾರೆ. ಸಿಮ್ರಾನ್ ಬೂದು ಬಣ್ಣದ ಸ್ವೆಟ್‌ಪ್ಯಾಂಟ್, ಬಿಳಿ ಟಿ-ಶರ್ಟ್ ಮತ್ತು ಸಣ್ಣ ವಜ್ರದ ಕಿವಿಯೋಲೆಗಳನ್ನು ಧರಿಸಿರುವುದು ಕಂಡುಬಂದಿದೆ. ಇನ್ನು ಸಿಮ್ರಾನ್ ಇಂಗ್ಲಿಷ್ ಮಾತನಾಡುವುದಿಲ್ಲ. ಆಕೆಗೆ ಅಮೆರಿಕದಲ್ಲಿ ಯಾವುದೇ ಸಂಬಂಧಿಕರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಟೆಸ್ಲಾ ಹೊಸ ಚಮತ್ಕಾರ.. ಚಾಲಕನಿಲ್ಲದೇ 30 ನಿಮಿಷ ನಗರ ಸುತ್ತಿ ಗ್ರಾಹಕನ ಮನೆ ತಲುಪಿದ ಟೆಸ್ಲಾ ಕಾರು..! VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment