newsfirstkannada.com

ಫೇಸ್​ಬುಕ್​ನಲ್ಲಿ ಪರಿಚಯ; ಲವ್ವರ್​​ಗಾಗಿ ಭಾರತದ ಗಡಿ ದಾಟಿ ಪಾಕ್​ಗೆ ಹೋದ 2 ಮಕ್ಕಳು ತಾಯಿ!

Share :

24-07-2023

    ಎರಡು-ಮೂರು ದಿನಗಳಲ್ಲಿ ಬರುತ್ತೇನೆ ಎಂದವಳು ಜೂಟ್​

    2020ರಲ್ಲೇ ಪಾಸ್​ಪೋರ್ಟ್ ಮಾಡಿಸಿಕೊಂಡಿದ್ದ ಅಂಜು

    29 ವರ್ಷದ ಪಾಕ್​ ಸ್ನೇಹಿತನ ಪ್ರೀತಿಗೆ ಬಿದ್ದಳು 2 ಮಕ್ಕಳ ತಾಯಿ

ಪಬ್​ಜಿ ಇನಿಯನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್​ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಚಿನ್​ಗಾಗಿ ತನ್ನ ಮಾಜಿ ಪತಿಯನ್ನು ಬಿಟ್ಟು ನಾಲ್ಕು ಮಕ್ಕಳನ್ನು ಕರೆದುಕೊಂಡು ಭಾರತದ ಗಡಿದಾಟಿದ ಸಂಗತಿ ಸದ್ಯ ಎಲ್ಲರಿಗೂ ತಿಳಿದಿದೆ. ಆದರೆ ಪಾಕ್​ನಲ್ಲಿರುವ ಸ್ನೇಹಿತನಿಗಾಗಿ ಭಾರತದ ಗಡಿದಾಟಿದ ಮಹಿಳೆಯ ಕಥೆ ಗೊತ್ತಿದ್ಯಾ?. ಇಲ್ಲಿದೆ ನೋಡಿ.

ಫೇಸ್​ಬುಕ್​ನಲ್ಲಿ ಪರಿಚಯ

ರಾಜಸ್ಥಾನದ ಭಿವಾಡಿ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಘಟನೆ ಇದಾಗಿದೆ. ವಿವಾಹಿತ ಮಹಿಳೆ ಅಂಜು ಎಂಬಾಕೆ ತಾನು ಫೇಸ್​ಬುಕ್​ನಲ್ಲಿ ಪರಿಚಯಗೊಂಡ ವ್ಯಕ್ತಿಯೊಬ್ಬನ ಜೊತೆಗೆ ಸ್ನೇಹ ಬೆಳೆದು ಕೊನೆಗೆ ಸ್ನೇಹ ಪ್ರೀತಿಗೆ ತಿರುಗಿ ಆತನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗಿದ್ದಾಳೆ. ಪಾಕ್​ನ ವಾಯುವ್ಯ ಖೈಬರ್​ ಫಖ್ತುಂಕ್ವಾ ಪ್ರಾಂತ್ಯಕ್ಕೆ ತೆರಳಿದ್ದಾಳೆ.

ಜೈಪುರಕ್ಕೆ ಹೋಗಿ ಬರ್ತೇನೆ

ಅಂಜು ತನ್ನ ಪತಿ ಅರವಿಂದ್​​ಗೆ ನಾನು ಜೈಪುರಕ್ಕೆ ಹೋಗಿ ಬರುತ್ತೇನೆಂದು ಪ್ರಾರಂಭದಲ್ಲಿ ಹೇಳಿದ್ದಾಳೆ. ಆದರೆ ಭಾನುವಾರದಂದು ಅರವಿಂದ್​ಗೆ ಅಂಜು ಭಾರತದ ಗಡಿ ದಾಟಿ ಹೋಗಿದ್ದಾಳೆ ಎಂಬ ಸುದ್ದಿ ಮಾಧ್ಯಮದ ಮೂಲಕ ತಿಳಿಯುತ್ತದೆ.

ಇನ್ನು ಅಂಜು ವಾಟ್ಸ್ಆ್ಯಪ್​ ಮೂಲಕ ಅರವಿಂದ್​​ ಜೊತೆ ಸಂಪರ್ಕದಲ್ಲಿದ್ದಳು. ಭಾನುವಾರದಂದು ಸಂಜೆ ಕರೆ ಮಾಡಿ ನಾನು ಲಾಹೋರ್​​ನಲ್ಲಿ ಇದ್ದೇನೆ. ಎರಡು-ಮೂರು ದಿನಗಳಲ್ಲಿ ಬರುತ್ತೇನೆ ಎಂದು ಹೇಳಿದ್ದಳು.

ಪಾಸ್​ಪೋರ್ಟ್​​ ಮಾಡಿಸಿಕೊಂಡಿದ್ದಳು

ಅರವಿಂದ್​​ ಭಿವಾಡಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ. ಅಂಜು ಖಾಸಗಿ ಸಂಸ್ಥೆಯೊಂದರಲ್ಲಿ ಬಯೋಡೇಟಾ ಎಂಟ್ರಿ ಆಪರೇಟರ್​ ಆಗಿ ಕೆಲಸ ಮಾಡಿಕೊಂಡಿದ್ದಳು. ಆಕೆ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು 2020ರಲ್ಲಿ ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

ಮತಾಂತರ

ಅರವಿಂದ್​ ಕ್ರಿಶ್ಚಿಯನ್​ ಆಗಿದ್ದು ಅಂಜು ಕೂಡ ಅದೇ ಧರ್ಮಕ್ಕೆ ಮತಾಂತರ ಆಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಆದರೀಗ ತನ್ನ ಪ್ರಿಯಕರನಿಗಾಗಿ ಗಡಿದಾಟಿದ ಅಂಜುಗಾಗಿ ಆಕೆಯ ಫ್ಯಾಮಿಲಿ ಭಾರತದಲ್ಲಿ ಕಾಯುತ್ತಿದೆ.

29 ವರ್ಷದ ಸ್ನೇಹಿತನ ಪ್ರೀತಿಗೆ ಬಿದ್ದ ವಿವಾಹಿತೆ

ಅಂಜುಗೆ ಫೇಸ್​ಬುಕ್​ನಲ್ಲಿ 29 ವರ್ಷದ ಸ್ನೇಹಿತ ನಸ್ರುಲ್ಲಾ ಎಂಬಾತನ ಪರಿಚಯವಾಯಿತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿದೆ. ಇದೀಗ ಆತನಿಗಾಗಿ ಭಾರತ ಬಿಟ್ಟು ಪಾಕ್​ ಗಡಿದಾಟಿದ್ದಾಳೆ. ನಸ್ರುಲ್ಲಾ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೇಸ್​ಬುಕ್​ನಲ್ಲಿ ಪರಿಚಯ; ಲವ್ವರ್​​ಗಾಗಿ ಭಾರತದ ಗಡಿ ದಾಟಿ ಪಾಕ್​ಗೆ ಹೋದ 2 ಮಕ್ಕಳು ತಾಯಿ!

https://newsfirstlive.com/wp-content/uploads/2023/07/Anju-Pak.jpg

Load More