/newsfirstlive-kannada/media/post_attachments/wp-content/uploads/2025/02/Abhishek_Sharma.jpg)
ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಡೇಜ್ ಪಂದ್ಯ ದುಬೈನ ಅಂತರರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿದೆ. ಪಾಕ್ ಕ್ಯಾಪ್ಟನ್ ರಿಜ್ವಾನ್ ಟಾಸ್ ಗೆದ್ದು ಟೀಮ್ ಇಂಡಿಯಾವನ್ನು ಫೀಲ್ಡಿಂಗ್ಗೆ ಆಹ್ವಾನಿಸಿದ್ದರು. ಸದ್ಯ ಎರಡು ಟೀಮ್ಗಳು ಗೆಲುವಿಗಾಗಿ ಪೈಪೋಟಿ ನಡೆಸಿದ್ದು ಮಹತ್ವ ಪಂದ್ಯ ವೀಕ್ಷಣೆಗೆ ಯುವ ಪ್ಲೇಯರ್ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಜಸ್ಪ್ರಿತ್ ಬೂಮ್ರಾ ಹಾಗೂ ನಟ ಚಿರಂಜೀವಿ ಕೂಡ ಆಗಮಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯ ಎಂದರೆ ವಿಶ್ವದ ಎಂತಹ ವ್ಯಕ್ತಿಗೆ ಆಗಿರಲಿ ಸಖತ್ ಕುತೂಹಲ ಇರುತ್ತದೆ. ಇದೇ ಮ್ಯಾಚ್ ಗೆಲ್ಲುತ್ತದೆ ಎಷ್ಟೋ ಜನ ಕೋಟಿಗಟ್ಟಲೇ ಬೆಟ್ ಕಟ್ಟಿರುತ್ತಾರೆ. ಕ್ರಿಕೆಟ್ನಲ್ಲಿ ಬೇರೆ ಬೇರೆ ರಾಷ್ಟ್ರಗಳು ಆಡುವುದಕ್ಕಿಂತ ಇಂಡಿಯಾ- ಪಾಕಿಸ್ತಾನ ಪಂದ್ಯಕ್ಕೆ ಹೆಚ್ಚಿನ ಮಹತ್ವ ಇದೆ. ಈ ಎರಡು ಟೀಮ್ಗಳು ಆಡುವುದನ್ನು ಸಾಕಷ್ಟು ಜನ ವೀಕ್ಷಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ ಯುವ ಆಲ್ರೌಂಡರ್.. ಶರವೇಗದ ಫೀಲ್ಡಿಂಗ್ಗೆ ಮೊದಲ ವಿಕೆಟ್ ರನೌಟ್
ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂ ಗ್ಯಾಲರಿಯಲ್ಲಿ ಟಿ20ಯ ಹೊಡಿಬಡಿ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಜೊತೆಯಲ್ಲೇ ಕಾಣಿಸಿಕೊಂಡಿದ್ದಾರೆ. ಇನ್ನು ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಪಕ್ಕದಲ್ಲೇ ಅಭಿಷೇಕ್ ಶರ್ಮಾ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿರುವುದು ವಿಶೇಷ ಎನಿಸಿದೆ. ಈ ಸ್ಟಾರ್ಸ್ ಮ್ಯಾಚ್ ನೋಡುವಾಗ ಕ್ಯಾಮೆರಾಮ್ಯಾನ್ ಜೂಮ್ ಮಾಡಿ ತೋರಿಸಿದ್ದಾರೆ. ಸದ್ಯ ಇವರು ಪಂದ್ಯ ವೀಕ್ಷಣೆ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಸದ್ಯ ಇಂಜುರಿಗೆ ಒಳಗಾಗಿರುವ ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಅವರು ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ನು ನೋವಿನ ಗಾಯಕ್ಕೆ ಒಳಗಾಗಿರುವ ಅವರು ಚಾಂಪಿಯನ್ ಟ್ರೋಫಿಗೆ ಆಯ್ಕೆ ಆಗಿಲ್ಲ. ಪಂದ್ಯ ವೀಕ್ಷಣೆಗೆ ಆಗಮಿಸಿದ ಬೆನ್ನಲ್ಲೇ ಬೂಮ್ರಾಗೆ 2024ರ ಸಾಲಿನ 4 ಐಸಿಸಿ ಪ್ರಶಸ್ತಿಗಳನ್ನು ಇದೇ ವೇಳೆ ಜಯ್ ಶಾ ಅವರು ಪ್ರದಾನ ಮಾಡಿದರು.
ಬೂಮ್ರಾಗೆ ಸಿಕ್ಕ 2024ರ ಪ್ರಶಸ್ತಿಗಳು
ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ
ಐಸಿಸಿ ವರ್ಷದ ಪುರುಷರ ಟೆಸ್ಟ್ ಕ್ರಿಕೆಟಿಗ
ಐಸಿಸಿ ವರ್ಷದ ಪುರುಷರ ಟೆಸ್ಟ್ ತಂಡದ ಪ್ಲೇಯರ್
ಐಸಿಸಿ ಪುರುಷರ T20I ವರ್ಷದ ತಂಡದ ಪ್ಲೇಯರ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ