/newsfirstlive-kannada/media/post_attachments/wp-content/uploads/2024/12/Luxury-car-boom1.jpg)
ಭಾರತದಲ್ಲಿ ಈ ವರ್ಷ ಲಕ್ಸುರಿ ಕಾರುಗಳ ಮಾರಾಟ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಕಳೆದ 5 ವರ್ಷಗಳಲ್ಲಿ ಲಕ್ಸುರಿ ಕಾರುಗಳ ಮಾರಾಟ ಡಬಲ್ ಆಗಿದೆ. ಭಾರತದಲ್ಲಿ ಜನರು ಈಗ luxury ಕಾರುಗಳನ್ನೇ ಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಭಾರತ ಈಗ ಬಡ ದೇಶವಲ್ಲ, ಭಾರತದಲ್ಲೀಗ ಲಕ್ಸುರಿ ಕಾರುಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ನಾವು ಈಗ ಅಂಕಿಅಂಶ ಸಮೇತ ನಿಮ್ಮ ಮುಂದೆ ಇಡುತ್ತೇವೆ ತಪ್ಪದೇ ಮುಂದೆ ಓದಿ.
ಇದನ್ನೂ ಓದಿ:BBK11: ಬಿಗ್ಬಾಸ್ ಮನೆಯಲ್ಲಿ ದುರಹಂಕಾರದ ದರ್ಬಾರ್; ಉಗ್ರಂ ಮಂಜುಗೆ ಭವ್ಯಾ ಗೌಡ ಸಖತ್ ಟಾಂಗ್
ಭಾರತದಲ್ಲಿ ಈಗ ಲಕ್ಸುರಿ ಕಾರುಗಳು ಬೂಮ್ ಶುರುವಾಗಿದೆ. ಭಾರತದಲ್ಲಿ 2023ರಲ್ಲಿ 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಬಾಳುವ ಲಕ್ಸುರಿ, ದುಬಾರಿ ಕಾರುಗಳು ಪ್ರತಿ ಗಂಟೆಗೆ 6 ಸೇಲ್ ಆಗಿವೆ. 5 ವರ್ಷದ ಹಿಂದೆ 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಬಾಳುವ ಕಾರ್‌ಗಳು ಪ್ರತಿ ಗಂಟೆಗೆ 2 ಮಾತ್ರ ಮಾರಾಟ ಆಗಿವೆ. ಅಂದರೆ ಕೇವಲ 5 ವರ್ಷದಲ್ಲಿ ಲಕ್ಸುರಿ ಕಾರುಗಳ ಮಾರಾಟ ಡಬಲ್ ಆಗಿರೋದು ಈ ಅಂಕಿ ಅಂಶದಿಂದಲೇ ಖಚಿತವಾಗುತ್ತೆ. 2024ರಲ್ಲೂ ಲಕ್ಸುರಿ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆಯಾಗಿದೆ.
ಇದನ್ನೂ ಓದಿ: ಇಡೀ ದೇಶದಲ್ಲಿ ಕಿಟಕಿ ಇಲ್ಲದ ಮನೆ ಕಟ್ಟಲು ಆದೇಶ ಹೊರಡಿಸಿದ ಸರ್ಕಾರ; ಕಾರಣವೇನು?
2024ರಲ್ಲಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಮರ್ಸಿಡಿಸ್ ಬೆಂಜ್ ಕಂಪನಿಯ 14,379 ಕಾರುಗಳು ಮಾರಾಟವಾಗಿವೆ. 2023ಕ್ಕೆ ಹೋಲಿಸಿದರೆ ಮರ್ಸಿಡಿಸ್ ಬೆಂಜ್ ಕಂಪನಿಯ ಕಾರುಗಳ ಮಾರಾಟದಲ್ಲಿ ಶೇ.13 ರಷ್ಟು ಏರಿಕೆಯಾಗಿದೆ. ಡಿಸೆಂಬರ್ ಅಂತ್ಯದವರೆಗೂ 20 ಸಾವಿರಕ್ಕೂ ಹೆಚ್ಚಿನ ಮರ್ಸಿಡಿಸ್ ಬೆಂಜ್ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ಬಿಎಂಡಬ್ಲೂ ಕಂಪನಿ ಕೂಡ 2024ರಲ್ಲಿ ಸೆಪ್ಟೆಂಬರ್ ಅಂತ್ಯದವರೆಗೂ 10,556 ಕಾರುಗಳನ್ನು ಮಾರಾಟ ಮಾಡಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಬಿಎಂಡಬ್ಲ್ಯೂ ಕಂಪನಿಯ ಕಾರುಗಳ ಮಾರಾಟದಲ್ಲಿ ಶೇ.5ರಷ್ಟು ಏರಿಕೆಯಾಗಿದೆ. ಆದರೆ ಔಡಿ ಕಂಪನಿಯ ಕೆಲ ಮಾಡೆಲ್‌ಗಳು ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಔಡಿ ಕಂಪನಿಯ ಕಾರುಗಳ ಮಾರಾಟ ಮಾತ್ರವೇ ಶೇ.16 ರಷ್ಟು ಕುಸಿದಿದೆ ಅಂತ ಕಂಪನಿ ಹೇಳಿದೆ.
ಆದರೆ 2025ರಲ್ಲಿ ಸಾಕಷ್ಟು ಹೊಸ ಮಾಡೆಲ್ ಕಾರುಗಳನ್ನು ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ಲ್ಯಾನ್ ಅನ್ನು ಔಡಿ ಕಂಪನಿ ಹಾಕಿಕೊಂಡಿದೆ. ಹೀಗಾಗಿ 2025 ರಲ್ಲಿ ಔಡಿ ಕಂಪನಿಯ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆ ಇದೆ. ಭಾರತದಲ್ಲಿ 2020ರಲ್ಲಿ ಲಕ್ಸುರಿ ಕಾರುಗಳ ಮಾರಾಟ ಕಡಿಮೆ ಇತ್ತು ಭಾರತದಲ್ಲಿ 2020ರಲ್ಲಿ 20, 500 ಲಕ್ಸುರಿ ಕಾರುಗಳು ಮಾತ್ರ ಮಾರಾಟವಾಗಿದ್ದವು. ಆದರೆ 2023ರಲ್ಲಿ 48 ಸಾವಿರ ಲಕ್ಸುರಿ ಕಾರುಗಳು ಮಾರಾಟವಾಗಿವೆ. 2024ರಲ್ಲಿ 50 ಸಾವಿರಕ್ಕೂ ಹೆಚ್ಚಿನ ಲಕ್ಸುರಿ ಕಾರುಗಳು ಮಾರಾಟವಾಗಿವೆ.
ಕಳೆದ 5 ವರ್ಷದಲ್ಲಿ ಲಕ್ಸುರಿ ಕಾರುಗಳ ಮಾರಾಟ ಡಬಲ್ ಆಗಿದೆ. 2025ರಲ್ಲಿ ಶೇ.5ರಷ್ಟು ಲಕ್ಸುರಿ ಕಾರುಗಳ ಮಾರಾಟ ಹೆಚ್ಚಳವಾದರೂ 54 ಸಾವಿರದಿಂದ 55 ಸಾವಿರ ಲಕ್ಸುರಿ ಕಾರುಗಳ ಮಾರಾಟವಾಗುವ ನಿರೀಕ್ಷೆ ಇದೆ. ಭಾರತದಲ್ಲಿ ಮಾರಾಟವಾಗುವ ಕಾರುಗಳ ಪೈಕಿ ಲಕ್ಸುರಿ ಕಾರುಗಳ ಪಾಲು ಶೇ.1 ರಷ್ಟು ಮಾತ್ರ. ಆದರೆ ಭಾರತದಲ್ಲಿ ಈಗ ಮಿಲಿಯನೇರ್, ಬಿಲಿಯನೇರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಲಕ್ಸುರಿ ಕಾರುಗಳ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜನರ ಆದಾಯ ಏರಿಕೆ, ಕಂಫರ್ಟ್ ಕಾರಣಕ್ಕಾಗಿ ಜನರು ಲಕ್ಸುರಿ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ತಾವು ದುಡಿದಿದ್ದನ್ನು ತಾವೇ ಅನುಭವಿಸಬೇಕು ಅನ್ನೋ ಮನೋಭಾವ ಜನರಲ್ಲಿದೆ. ಹೀಗಾಗಿ 50 ಲಕ್ಷ ಕೊಟ್ಟಾದರೂ ಸರಿ, ಲಕ್ಸುರಿ ಕಾರುಗಳನ್ನು ಜನರು ಖರೀದಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ