/newsfirstlive-kannada/media/post_attachments/wp-content/uploads/2025/05/Indians-boycott-Turkey.jpg)
ನವದೆಹಲಿ: ಪಹಲ್ಗಾಮ್ ಉಗ್ರರಿಗೆ ನೆರವಾದ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಉಗ್ರರ ನೆಲೆಗಳನ್ನು ಧ್ವಂಸ ಮಾಡೋ ಮೂಲಕ ಸಿಂಧೂರಕ್ಕೆ ಪ್ರತೀಕಾರದ ನೆತ್ತರು ಹರಿಸಿತು. ಭಯೋತ್ಪಾದಕರ ವಿರುದ್ಧ ಭಾರತ ಹೋರಾಡುವಾಗ ಪಾಕಿಸ್ತಾನಕ್ಕೆ ಟರ್ಕಿ ಬಹಿರಂಗವಾಗಿ ಬೆಂಬಲ ನೀಡಿ ತಪ್ಪು ಮಾಡಿದೆ.
ಪಾಕಿಸ್ತಾನವನ್ನು ಬೆಂಬಲಿಸಿದ ತಪ್ಪಿಗೆ ಭಾರತೀಯರು ಟರ್ಕಿ ವಿರುದ್ಧ ಭಾರತದಲ್ಲಿ ಬಾಯ್ಕಾಟ್ ಟರ್ಕಿ ಅಭಿಯಾನ ಆರಂಭಿಸಿದ್ದಾರೆ. ಟರ್ಕಿ ಪ್ರವಾಸ, ಟರ್ಕಿ ದೇಶದ ಉತ್ಪನ್ನ ಸೇರಿದಂತೆ ಎಲ್ಲವನ್ನೂ ಬಹಿಷ್ಕಾರ ಮಾಡಲಾಗುತ್ತಿದೆ.
ಭಾರತ- ಪಾಕ್ ಸಂಘರ್ಷದ ವೇಳೆ ಟರ್ಕಿ ದೇಶ ಭಾರತದ ವೈರಿಗೆ ಡ್ರೋನ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ನೀಡಿತ್ತು. ಪಾಕಿಸ್ತಾನ ಟರ್ಕಿ ಡ್ರೋನ್ ಬಳಸಿ ಭಾರತದ ಮೇಲೆ ವಾಯುದಾಳಿಯನ್ನು ಮಾಡಲು ಯತ್ನಿಸಿತ್ತು. ಆದರೆ ಟರ್ಕಿ ಡ್ರೋನ್‌ಗಳು ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಮುಂದೆ ಪುಡಿ, ಪುಡಿಯಾಗಿದೆ.
ಪಾಕಿಸ್ತಾನಕ್ಕೆ ನೆರವು ನೀಡಿದ್ದ ಟರ್ಕಿಗೆ ಈಗ ಭಾರತದಲ್ಲಿ ಬಾಯ್ಕಾಟ್ ಬಿಸಿ ತಟ್ಟಿದೆ. ಭಾರತೀಯರು ಈಗ ಟರ್ಕಿ ದೇಶದ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಟರ್ಕಿಗೆ 2024ರಲ್ಲಿ 3.3 ಲಕ್ಷ ಭಾರತೀಯ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ಪಾಕ್ ಬೆಂಬಲಿಸುವ ಅಜರಬೈಜಾನ್ ದೇಶಕ್ಕೆ 2024 ರಲ್ಲಿ 2.43 ಲಕ್ಷ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ಅಜರಬೈಜಾನ್ ದೇಶದ ಪ್ರವಾಸಿಗರ ಪೈಕಿ ಶೇ.8.9ರಷ್ಟು ಭಾರತೀಯ ಪ್ರವಾಸಿಗರೇ ಇದ್ದಾರೆ.
ಇನ್ನು ಮುಂದೆ ಟರ್ಕಿ, ಅಜರಬೈಜಾನ್ ದೇಶಗಳೆರಡಕ್ಕೂ ಭಾರತದಲ್ಲಿ ಬಾಯ್ಕಾಟ್ ಅಭಿಯಾನದ ಬಿಸಿ ತಟ್ಟಲಿದೆ. ಈ ಎರಡು ದೇಶಗಳು ಪಾಕಿಸ್ತಾನವನ್ನು ಬೆಂಬಲಿಸಿದ ತಪ್ಪಿಗೆ ಎರಡು ದೇಶಗಳಿಗೂ ಆರ್ಥಿಕ ಹೊಡೆತ ನೀಡಲು ಭಾರತೀಯರು ನಿರ್ಧರಿಸಿದ್ದಾರೆ. ನಮ್ಮ ಹಣ ನಿಮಗೆ ಬೇಕು. ಆದರೆ ಬೆಂಬಲ ಮಾತ್ರ ಪಾಕಿಸ್ತಾನಕ್ಕೆ ಕೊಡುತ್ತೀರಿ ಎಂದು ಭಾರತೀಯರು ಸಿಟ್ಟು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Operation Keller ಮೂಲಕ ಮೂವರು ಉಗ್ರರು ಉಡೀಸ್.. ಏನಿದು ಆಪರೇಷನ್ ಕೆಲ್ಲರ್..?
ಮಹಾರಾಷ್ಟ್ರದ ಪುಣೆಯಲ್ಲಿ ಚಿಲ್ಲರೆ, ಹೋಲ್ ಸೇಲ್ ವ್ಯಾಪಾರಸ್ಥರು ಈಗ ಟರ್ಕಿ ಆ್ಯಪಲ್ ಖರೀದಿಸುತ್ತಿಲ್ಲ. ಟರ್ಕಿ ದೇಶದ ಸೇಬನ್ನು ಮಹಾರಾಷ್ಟ್ರದಲ್ಲಿ ಬಹಿಷ್ಕಾರ ಮಾಡಲಾಗುತ್ತಿದೆ. ಈ ಹಿಂದೆ ಭಾರತದಲ್ಲಿ ಚೀನಾದ ಉತ್ಪನ್ನಗಳನ್ನು ಇದೇ ರೀತಿ ಬಾಯ್ಕಾಟ್ ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ