newsfirstkannada.com

ಕರ್ನಾಟಕ ಮೂಲದ ಡಾ. ವಿವೇಕ್ ಮೂರ್ತಿಗೆ WHO ಜವಾಬ್ದಾರಿ ನೀಡಲು ಜೋ ಬೈಡನ್ ಶಿಫಾರಸು..!

Share :

Published January 11, 2024 at 8:38am

    ಅಮೆರಿಕದ ಸರ್ಜನ್ ಜನರಲ್ ಆಗಿರುವ ಡಾ. ವಿವೇಕ್ ಮೂರ್ತಿ

    ಎರಡೇ ಬಾರಿಗೆ ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿರುವ ಅಮೆರಿಕ

    ಅಮೆರಿಕ ಪಾರ್ಲಿಮೆಂಟ್​ನಿಂದ ಮಹತ್ವದ ನಿರ್ಧಾರ ಪ್ರಕಟ

ವಿಶ್ವಸಂಸ್ಥೆಯ ಆರೋಗ್ಯ ಮಂಡಳಿಯಲ್ಲಿ (WHO) ಕರ್ನಾಟಕ ಮೂಲದ ವೈದ್ಯರನ್ನು ನೇಮಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದಾರೆ. WHOನಲ್ಲಿ ಅಮೆರಿಕದ ಪ್ರತಿನಿಧಿಯಾಗಿ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಅವರನ್ನು ಸೇರಿಸಲು ಅಮೆರಿಕ ನಿರ್ಧರಿಸಿದೆ.

ಈ ಸಂಬಂಧ ಅಮೆರಿಕ ಪಾರ್ಲಿಮೆಂಟ್​ ಸೆನೆಟ್​ಗೆ ಪ್ರಸ್ತಾವನೆ ಕಳುಹಿಸಿಕೊಟ್ಟಿದೆ. ಅಂದ್ಹಾಗೆ ಅಮೆರಿಕವು ಎರಡನೇ ಬಾರಿ ವಿಶ್ವಸಂಸ್ಥೆಗೆ ಈ ಪ್ರಸ್ತಾವನೆಯನ್ನು ಸಲ್ಲಿಸಿದೆ. 46 ವರ್ಷದ ಡಾ.ಮೂರ್ತಿ ಹೆಸರನ್ನು ಅಕ್ಟೋಬರ್ 2022ರಲ್ಲಿಯೂ ಅಮೆರಿಕ ಪ್ರಸ್ತಾವನೆ ಮಾಡಿತ್ತು. ಈ ಪ್ರಸ್ತಾವನೆಯು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯಲ್ಲಿ ಬಾಕಿ ಉಳಿದುಕೊಂಡಿದೆ. ಹೀಗಾಗಿ ಮತ್ತೊಮ್ಮೆ ಶಿಫಾರಸು ಮಾಡಲಾಗಿದೆ.

2021ರಲ್ಲಿ ಡಾ. ವಿವೇಕ್ ಮೂರ್ತಿ ಅವರನ್ನು ಅಮೆರಿಕದ 21ನೇ ಸರ್ಜನ್ ಜನರಲ್ ಆಗಿ ಅನುಮೋದಿಸಿದೆ. ಅದಕ್ಕೂ ಮೊದಲು ಅವರು ಬರಾಕ್ ಒಬಮಾ ಅಧ್ಯಕ್ಷತೆಯಲ್ಲಿ 19ನೇ ಸರ್ಜನ್ ಜನರಲ್ ಆಗಿದ್ದರು. ಶ್ವೇತಭವನದ ಪ್ರಕಾರ, ಸರ್ಜನ್ ಜನರಲ್ ಅಮೆರಿಕದ ಉನ್ನತ ವೈದ್ಯ. ಆ ದೇಶಕ್ಕೆ ಉತ್ತಮ ಆರೋಗ್ಯ ನೀತಿಯನ್ನು ಸಿದ್ಧಪಡಿಸುವುದು ಅಮೆರಿಕ ಸರ್ಜನ್ ಜನರಲ್ ಜವಾಬ್ದಾರಿ. ವಿವೇಕ್ ಮೂರ್ತಿ ಅವರು ಅಮೆರಿಕ ಪಬ್ಲಿಕ್ ಹೆಲ್ತ್​ ಸರ್ವೀಸ್ ಕಮಿಷನ್ಡ್​ ಕಾರ್ಪ್ಸ್​ನ ವೈಸ್ ಅಡ್ಮಿರಲ್ ಕೂಡ ಆಗಿದ್ದಾರೆ. ಇದರಲ್ಲಿ ಆರು ಸಾವಿರಕ್ಕೂ ಹೆಚ್ಚು ಆರೋಗ್ಯಾಧಿಕಾರಿಗಳಿದ್ದು, ಡಾ.ಮೂರ್ತಿ ನೇತೃತ್ವದಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ.

ಡಾ.ವಿವೇಕ್ ಮೂರ್ತಿ ಕರ್ನಾಟಕದವರು..!

ಕರ್ನಾಟಕದ ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮ ಇವರ ಮೂಲ ಸ್ಥಳವಾಗಿದೆ. ಇವರ ಪೂರ್ವಜರು ಇಂಗ್ಲೆಂಡ್​ನಲ್ಲಿ ನೆಲೆಸಿದ್ದರು. ಡಾ.ಮೂರ್ತಿ ಮೂರು ವರ್ಷ ಇದ್ದಾಗ ಅವರ ಕುಟುಂಬ ಅಮೆರಿಕದ ಮಿಯಾಮಿಗೆ ಹೋಗಿ ಆಶ್ರಯ ಪಡೆದಿತ್ತು. ನಂತರ ಅವರು ಯೇಲ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್​ನಿಂದ ಹೆಚ್ಚಿನ ಪದವಿಗಳನ್ನು ಪಡೆದುಕೊಂಡರು. ಇಂದು ಅವರು ಪ್ರಸಿದ್ಧ ವೈದ್ಯ, ಸಂಶೋಧನಾ ವಿಜ್ಞಾನಿ, ಉದ್ಯಮಿ ಕೂಡ ಆಗಿದ್ದಾರೆ. ಸದ್ಯ ಪತ್ನಿ ಡಾ ಆಲಿಸ್ ಚೆನ್ ಮತ್ತು ಇಬ್ಬರು ಮಕ್ಕಳೊಂದಿಗೆ ವಾಷಿಂಗ್ಟನ್​​ನಲ್ಲಿ ಅವರು ವಾಸಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕ ಮೂಲದ ಡಾ. ವಿವೇಕ್ ಮೂರ್ತಿಗೆ WHO ಜವಾಬ್ದಾರಿ ನೀಡಲು ಜೋ ಬೈಡನ್ ಶಿಫಾರಸು..!

https://newsfirstlive.com/wp-content/uploads/2024/01/Vivek-murthy.jpg

Load More