/newsfirstlive-kannada/media/post_attachments/wp-content/uploads/2024/12/INDIAN-DEPORTION.jpg)
ಯುಎಸ್ನಲ್ಲಿ ಆಯ್ಕೆಗೊಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರವಹಿಸಿಕೊಂಡ ಮೇಲೆ ಹಲವು ದೇಶಗಳಿಗೆ ಗಡಿಪಾರಿನ ಶಾಕ್ ನೀಡಲಿದ್ದಾರೆ. ಅಮೆರಿಕಾ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಅತಿದೊಡ್ಡ ಗಡಿಪಾರು ಕಾರ್ಯವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿ ಈಗ ಆಚೆ ಬರುತ್ತಿದೆ. ಜನವರಿ 20, 2025 ರಂದು ಡೊನಾಲ್ಡ್ ಟ್ರಂಪ್ ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅಂದೇ ಈ ಒಂದು ಮಹಾ ಗಡಿಪಾರು ಕಾರ್ಯಕ್ಕೆ ಸಹಿ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಯುಎಸ್ನ ಇಮ್ಮಿಗ್ರೇಷನ್ ಅಂಡ್ ಕಸ್ಟಮ್ ಎನ್ಫೊರ್ಸ್ಮೆಂಟ್(ಐಸಿಇ) ಒಂದು ಲಿಸ್ಟ್ ಮಾಡಿಕೊಂಡು ರೆಡಿಯಾಗಿದೆ. ಐಸಿಇ ರೆಡಿ ಮಾಡಿರುವ ಲಿಸ್ಟ್ನಲ್ಲಿ ಬರೋಬ್ಬರಿ 10 ಲಕ್ಷ 50 ಸಾವಿರ ಜನರು ಇದ್ದಾರೆ. ಇವರೆಲ್ಲರನ್ನೂ ಯುಎಸ್ನಿಂದ ಗಡಿಪಾರು ಮಾಡುವ ಸಿದ್ಧತೆಯೊಂದು ಈಗ ನಡೆದಿದೆ. ಈ ಒಂದು ಪಟ್ಟಿಯಲ್ಲಿ ಸುಮಾರು 18 ಸಾವಿರದಷ್ಟು ಭಾರತೀಯರು ಇದ್ದಾರೆ ಎನ್ನುವುದು ಇನ್ನೊಂದು ಆತಂಕದ ಮಾಹಿತಿ.
ಐಸಿಇ ಸಂಗ್ರಹಿಸಿರುವ ದಾಖಲೆಗಳು ಹೇಳುವ ಪ್ರಕಾರ ನವೆಂಬರ್ 2024ರಲ್ಲಿ ಸಿದ್ಧಗೊಂಡಿರುವ ಪಟ್ಟಿಯಲ್ಲಿ ಸುಮಾರು 17,940 ಜನ ಭಾರತೀಯರು ಗಡಿಪಾರಿಗೆ ಒಳಗಾಗುವ ಸಂಭವವು ಇದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಪೆವ್ ರಿಸರ್ಚ್ ಸೆಂಟರ್ ಸಂಗ್ರಹಿಸಿರುವ ದಾಖಲೆಯ ಪ್ರಕಾರ ಯುಎಸ್ನಲ್ಲಿ ಸುಮಾರು 7 ಲಕ್ಷ 25 ಸಾವಿರ ಜನರು ಕಾನೂನು ಬಾಹಿರವಾಗಿ ವಲಸೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅಂದ್ರೆ ಯುಎಸ್ನಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿರುವವರ ಸಂಖ್ಯೆಯಲ್ಲಿ ಮೆಕ್ಸಿಕೋ, ಇಎಲ್ ಸಲ್ವಾಡೊರ್ನ ಬಳಿಕ ಮೂರನೇ ಅತಿಹೆಚ್ಚು ಜನಸಂಖ್ಯೆ ಭಾರತಿಯರದ್ದೇ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಚಿನ್ನದಿಂದ ಸಿದ್ಧವಾಯ್ತು 10 ಅಡಿ ಕ್ರಿಸ್ಮಸ್ ಟ್ರೀ! ಇದಕ್ಕೆ ತಗುಲಿದ ವೆಚ್ಚ ಎಷ್ಟು ಕೋಟಿ ಗೊತ್ತಾ?
ಮುಂದಿನ ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿರುವ ದಾಖಲೆಯ ಪ್ರಕಾರ ಯುಎಸ್ ಚಾರ್ಟೆಡ್ ಫ್ಲೈಟ್ ಸಜ್ಜುಗೊಳಿಸಿ ಅಮೆರಿಕಾದಲ್ಲಿ ಕಾನೂನನು ಬಾಹಿರವಾಗಿ ನೆಲೆಸಿರುವ ಭಾರತೀಯರನ್ನು ಗಡಿಪಾರು ಮಾಡಲಿದೆ ಎಂದು ಹೇಳಲಾಗುತ್ತಿದೆ. ಭಾರತ ಸರ್ಕಾರದೊಂದಿಗೆ ಸಹಕಾರ ಪಡೆದುಕೊಂಡೇ ಈ ಒಂದು ಗಡಿಪಾರು ಕಾರ್ಯವನ್ನು ಮಾಡುವ ಉದ್ದೇಶ ಹೊಂದಿದ್ದು. ಅಕ್ಟೋಬರ್ 22 ರಂದು ಭಾರತಕ್ಕೆ ಚಾರ್ಟೆಟ್ ಫ್ಲೈಟ್ನ್ನು ಕಳುಹಿಸಲಿದ್ದಾರೆ.
ಯುಎಸ್ನಲ್ಲಿ ತಮ್ಮ ಕಾನೂನಾತ್ಮಕ ನೆಲೆಗಾಗಿ ಸಾವಿರಾರು ಜನರು ಈಗಲೂ ಹೋರಾಡುತ್ತಿದ್ದಾರೆ. ಐಸಿಇಯ ಕ್ಲೀಯರನ್ಸ್ಗಾಗಿ ಸಾವಿರಾರು ಭಾರತೀಯರು ಕಾಯುತ್ತಿದ್ದಾರೆ. 90 ಸಾವಿರ ಭಾರತೀಯರು ಕಳೆದ ಎರಡು ವರ್ಷದಲ್ಲಿ ಕಾನೂನು ಬಾಹಿರವಾಗಿ ಅಮೆರಿಕಾದ ಗಡಿಯನ್ನು ಅಕ್ರಮವಾಗಿ ನುಸುಳುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ವಿಶ್ವದ ಶೇ. 16ರಷ್ಟು ಆಸ್ತಿ ಹೊಂದಿರೋ ಕುಟುಂಬ; ಅರಬ್ ರಾಜನ ಆಸ್ತಿಯನ್ನೇ ಮೀರಿಸುತ್ತೆ ಇವ್ರ ಸಂಪತ್ತು
ಇನ್ನು ಭಾರತದ ಮೇಲೆ ಯುಎಸ್ನ ಐಸಿಇ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದೆ. ಗಡಿಪಾರು ಕಾರ್ಯ ಉದ್ದೇಶಕ್ಕಾಗಿ ನಮ್ಮ ಅಧಿಕಾರಿಗಳು ನಡೆಸುತ್ತಿರುವ ಪ್ರಯತ್ನಕ್ಕೆ ಭಾರತ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದೆ. ಕೇವಲ ಭಾರತ ಮಾತ್ರವ್ಲಲ ಒಟ್ಟು 15 ರಾಷ್ಟ್ರಗಳು ಈ ಒಂದು ನಮ್ಮ ಪ್ರಯತ್ನಕ್ಕೆ ಕೈ ಜೋಡಿಸುತ್ತಿಲ್ಲ ಎಂದು ಹೇಳಿದೆ. ಭಾರತ, ಭೂತಾನ್, ಬರ್ಮಾ, ಕ್ಯೂಬಾ ಹೀಗೆ ಒಟ್ಟು 15 ರಾಷ್ಟ್ರಗಳು ನಮ್ಮ ಈ ಮಹಾಗಡಿಪಾರು ಕಾರ್ಯಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಐಸಿಇ ದೂರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ