ಐಫೋನ್ 15 ಪ್ರೊ ಖರೀದಿಸುತ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ಓದಿ
ಆ್ಯಪಲ್ ಐಫೋನ್ ತೆರಿಗೆ ಹೊರೆಯ ಬಗ್ಗೆ ಎಷ್ಟು ಜನಕ್ಕೆ ಗೊತ್ತಿದೆ?
ಭಾರತದಲ್ಲೇ ಉತ್ಪಾದನಾ ಘಟಕವಿದ್ದರೂ ಅಷ್ಟೊಂದು ಬೆಲೆ ಯಾಕೆ?
ಐಫೋನ್. ಭಾರತೀಯರ ನಿದ್ದೆ ಕೆಡಿಸಿದ ಸಾಧನ. ಅದರಲ್ಲೂ ಈಗಿನ ಜನರೇಶನ್ ಐಫೋನ್ ಮೊರೆ ಹೋಗೋದೆ ಜಾಸ್ತಿ. ಕಾಲೇಜು ಯುವಕ, ಯುವತಿಯರ ಕೈಯಲ್ಲೂ ಕೂಡ ಐಫೋನ್ ಕಾಣಬಹುದು. ಹಾಗಾಗಿ ಆ್ಯಂಡ್ರಾಯ್ಡ್ ನಡುವೆ ಭಾರತದಲ್ಲಿ ಐಫೋನ್ ಕೊಂಚ ಮೇಲೂಗೈ ಸಾಧಿಸುತ್ತಿದೆ.
ಅಚ್ಚರಿ ಸಂಗತಿ ಎಂದರೆ ಬಹುತೇಕ ಜನರು ಕುಪರ್ಟಿನೋ ಮೂಲದ ಆ್ಯಪಲ್ ಒಡೆತನದ ಐಫೊನ್ ಖರೀದಿಸುತ್ತಾರೆ. ಆದರೆ ಐಫೋನ್ ಮೂಲಕ ಭಾರತೀಯರು ಎಷ್ಟು ತೆರಿಗೆ ನೀಡುತ್ತಾರೆ ಎಂಬುದು ಗೊತ್ತಿದ್ಯಾ?. ಈ ಸ್ಟೋರಿ ಪೂರ್ತಿ ಓದಿ.
ಕಳೆದ ತಿಂಗಳು ಡಾಲರ್ ಎದುರು ಭಾರತೀಯ ರೂಪಾಯಿ ಕುಸಿದಿದೆ. ಹೀಗಾಗಿ ಐಫೋನ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಐಫೋನ್ 15 ಮತ್ತು ಐಫೊನ್ 15 ಪ್ಲಸ್ ಬೆಲೆಯನ್ನು ಮಿತಿಗೊಳಿಸಿದರೂ ಸಹ ಐಫೋನ್ ಪ್ರೊ ಬೆಲೆ ಮಾತ್ರ ಏರಿಕೆಯಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ 1,34,900 ರೂ.ಗೆ ಐಫೋನ್ 12 ಪ್ರೊ (128ಜಿಬಿ) ಸಿಗುತ್ತಿದೆ.
ಇದನ್ನೂ ಓದಿ: ರಾಜ್ಯದ 14 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ.. ಚಿಕ್ಕೋಡಿ ಅತಿ ಹೆಚ್ಚು! ಹಾಗಿದ್ರೆ ಅತಿ ಕಡಿಮೆ ಮತದಾನ ಮಾಡಿದ ಕ್ಷೇತ್ರ ಯಾವುದು?
ಅಮೆರಿಕಾದಲ್ಲಿ ಇದೇ ಐಫೋನ್ 15 ಪ್ರೊ ಬೆಲೆ 84 ಸಾವಿರ ರೂಪಾಯಿಯಾಗಿದೆ. ಹೆಚ್ಚೆಂದರೆ 90 ಸಾವಿರದ ಒಳಗೆ ಯುಎಸ್ಎಯಲ್ಲಿ ಹೊಸ ಐಫೋನ್ 15 ಪ್ರೊ ಖರೀದಿಸಬಹುದಾಗಿದೆ. ಭಾರತ ಮತ್ತು ಅಮೆರಿಕಾ ದೇಶವನ್ನು ಗಮನಿಸಿದಾಗ ಐಫೋನ್ 15 ಪ್ರೊ ಬೆಲೆ ವ್ಯತ್ಯಾಸದ ಬಗ್ಗೆ ಅನೇಕರು ದೂರುತ್ತಾರೆ. ಕೊನೆಗೆ ದೂರುತ್ತಲೇ ಖರೀದಿಸುತ್ತಾರೆ. ಆದರೆ ಭಾರತೀಯರು ಐಫೋನ್ಗಾಗಿ ದೊಡ್ಡ ಮೊತ್ತದಲ್ಲಿ ತೆರಿಗೆ ಪಾವತಿಸುತ್ತಿದ್ದಾರೆ ಎಂದರೆ ನಂಬಲೇ ಬೇಕು.
ಅಮೆರಿಕಾದಲ್ಲೆಷ್ಟು?
ಮೊದಲ ಹೇಳಿದಂತೆ ಅಮೆರಿಕಾದಲ್ಲಿ ಐಫೋನ್ 15 ಪ್ರೊ 84 ಸಾವಿರ ರೂಪಾಯಿಗೆ ಸಿಗುತ್ತದೆ. ಆದರೆ ಇದಕ್ಕೆ ಅಲ್ಲಿನ ರಾಜ್ಯ ತೆರಿಗೆ ಅನ್ವಯವಾಗೋದಿಲ್ಲ. ಆದರೆ ಕೆಲವು ದೇಶ ರಾಜ್ಯಗಳನ್ನು ಗಮನಿಸಿದಾಗ ಶೇ.7ರಷ್ಟು ತೆರಿಗೆ ಹೆಚ್ಚಾಗುತ್ತಾ ಹೋಗುತ್ತದೆ.
ನೀವೆಷ್ಟು ತೆರಿಗೆ ಪಾವತಿಸುತ್ತೀರಿ?
ಭಾರತದಲ್ಲಿ ಐಫೋನ್ 15 ಪ್ರೊ ತೆರಿಗೆಯನ್ನು ಗಮನಿಸುವುದಾದರೆ. ಬೆಲೆ 1,34,900 ರೂಪಾಯಿಯಾಗಿದೆ. ಇದಕ್ಕೆ ಶೇ18ರಷ್ಟು ಜಿಎಸ್ಟಿ ಅನ್ವಯವಾಗುತ್ತದೆ. ಅಂದರೆ 20,577 ರೂಪಾಯಿ. ಇನ್ನು ಇದರ ಆಮದು, ಟ್ಯಾಕ್ಸ್ ಶೇ 22ರಷ್ಟು ಸೇರಿಸುವ ಮೂಲಕ 20,615 ರೂಪಾಯಿ ಆಗುತ್ತದೆ. ಒಟ್ಟಿನಲ್ಲಿ ಭಾರತೀಯರು 41,193 ರೂಪಾಯಿಯನ್ನು ತೆರಿಗೆ ರೂಪಾದಲ್ಲಿ ಐಫೋನ್ 15 ಪ್ರೊಗೆ ನೀಡಬೇಕಿದೆ. ಅದಕ್ಕಾಗಿ 1,34,900 ರೂಪಾಯಿ ಕೊಡಬೇಕಿದೆ.
ಇನ್ನು ಭಾರತದಲ್ಲೇ ಐಫೋನ್ ಘಟನವಿದ್ದರೂ ಸಹ ಶೇ2.5 ರಿಂದ ಶೇ.12ರವರೆಗೆ ಸುಂಕವನ್ನು ಎರಿಳಿತ ಮಾಡುತ್ತಿರುತ್ತದೆ. ಇನ್ನು ದೇಶಕ್ಕೆ ಆಮದು ಮಾಡುವುದಾದರೆ ಪ್ರತಿಶತ 20ರಷ್ಟು ಕಸ್ಟಂ ಸುಂಕ, 2 ಪ್ರತಿಶತ ಸೆಸ್ ನೀಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ