/newsfirstlive-kannada/media/post_attachments/wp-content/uploads/2025/05/India-Pakistan-War-2.jpg)
ಪಾಕಿಸ್ತಾನ ನಿರಂತರವಾಗಿ ಭಾರತದ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿಗೆ ಯತ್ನಿಸುತ್ತಿದೆ. ಪಾಕ್ನಿಂದ ಭಾರತದ ಮೇಲೆ ನೂರಕ್ಕೂ ಹೆಚ್ಚು ಕ್ಷಿಪಣಿಗಳು ದಾಳಿಗೆ ಯತ್ನ ನಡೆಸಿವೆ. ಭಾರತದ ಸೇನಾ ನೆಲೆಯನ್ನ ಟಾರ್ಗೆಟ್ ಮಾಡಿ ಪಾಕಿಸ್ತಾನ ದಾಳಿಗೆ ಯತ್ನಿಸಿದೆ.
ಚನಿ ಹಿಮತ್, ಆರ್‌ಎಸ್ ಪುರ, ಜಮ್ಮುವಿನಲ್ಲಿ ಪಾಕಿಸ್ತಾನದ ಕ್ಷಿಪಣಿಗಳು ದಾಳಿಗೆ ಯತ್ನಿಸಿವೆ. ಆದರೆ ಪಾಕಿಸ್ತಾನದ ಎಲ್ಲಾ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನ ಭಾರತ ಸೇನೆ ಹೊಡೆದುರುಳಿಸಿದೆ.
ಪಾಕಿಸ್ತಾನ ರಾಜಸ್ಥಾನ, ಪಂಜಾಬ್, ಜಮ್ಮುವನ್ನೇ ಗುರಿಯಾಗಿಸಿ ದಾಳಿಗೆ ಯತ್ನ ನಡೆಸಿದ್ದಾರೆ. ಪಾಕಿಸ್ತಾನದ 2 ಜೆಎಫ್-17, 1 ಎಫ್-16 ಫೈಟರ್ ಜೆಟ್ ಅನ್ನು ಭಾರತ ಧ್ವಂಸಗೊಳಿಸಿದೆ. ಒಟ್ಟು ಪಾಕಿಸ್ತಾನದ 8 ಕ್ಷಿಪಣಿಗಳನ್ನು ಭಾರತ ಸೇನೆ ಹೊಡೆದುಹಾಕಿದೆ.
ರಾಜಸ್ಥಾನದ ಜೈಸಲ್ಮೇರ್ ಮೇಲೂ ಪಾಕಿಸ್ತಾನ ಮಿಸೈಲ್ ದಾಳಿಗೆ ಯತ್ನ ನಡೆಸಿದೆ. ಆದರೆ ಭಾರತದ 4 ಏರ್ ಡಿಫೆನ್ಸ್ ಆ್ಯಕ್ಟಿವ್ ಆಗಿದ್ದು, ಪಾಕ್ ಮಿಸೈಲ್‌ಗಳನ್ನ ಹೊಡೆದುರುಳಿಸಿದೆ.
ಭಾರತದ ಪೃಥ್ವಿ ಏರ್ ಡಿಫೆನ್ಸ್ ಸಿಸ್ಟಮ್, ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್, ಆಕಾಶ್ ಏರ್ ಡಿಫೆನ್ಸ್ ಸಿಸ್ಟಮ್, ಎಸ್- 400 ಟ್ರಿಂಫ್ ಏರ್ ಡಿಫೆನ್ಸ್ ಸಿಸ್ಟಮ್‌ಗಳು ಫುಲ್ ಆ್ಯಕ್ಟಿವ್ ಆಗಿದೆ.
ಇದನ್ನೂ ಓದಿ: ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕ್ ಮಿಸೈಲ್ ದಾಳಿ; ರಕ್ಷಿಸಿದ್ದು S-400 ಏರ್ ಡಿಫೆನ್ಸ್ ಸಿಸ್ಟಮ್!
ಭಾರತದ ಏರ್ ಡಿಫೆನ್ಸ್ ಸಿಸ್ಟಮ್‌ನಿಂದಾಗಿ ಜಮ್ಮು, ಪಠಾಣ್‌ಕೋಟ್‌ನಲ್ಲಿ ಯಾವುದೇ ಹಾನಿಯಾಗಿಲ್ಲ. ನಿನ್ನೆಯಂತೆ ಇಂದು ಏರ್ ಡಿಫೆನ್ಸ್ ಸಿಸ್ಟಮ್‌ಗಳು ಭಾರತವನ್ನು ರಕ್ಷಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ