/newsfirstlive-kannada/media/post_attachments/wp-content/uploads/2025/07/US-BUNKER-3.jpg)
ಅಮೆರಿಕಾದ ಬಳಿ GBU-57/A ಹೆಸರಿನ ಬಂಕರ್ ಬಸ್ಟರ್ ಬಾಂಬ್ಗಳಿವೆ. ಭೂಮಿಯ ಅಳಕ್ಕೆ ಹೋಗಿ ಸ್ಫೋಟವಾಗುವ ಶಕ್ತಿ, ಸಾಮರ್ಥ್ಯ ಈ ಬಾಂಬ್‌ಗೆ ಇದೆ. ಅಮೆರಿಕಾವು ಜೂನ್ 22 ರಂದು ಇರಾನ್‌ನ ಫೋರ್ಡೋ ಪರಮಾಣು ಘಟಕಗಳ ಮೇಲೆ ಈ ಬಂಕರ್ ಬಸ್ಟರ್ ಬಾಂಬ್ಗಳನ್ನು ಬಳಸಿ ಅವುಗಳನ್ನು ನಾಶಪಡಿಸುವ ಯತ್ನ ಮಾಡಿತ್ತು. ಈಗ ಭಾರತವು ಅಂಥದ್ದೇ ಬಂಕರ್ ಬಸ್ಟರ್ ಬಾಂಬ್ಗಳನ್ನು ಸ್ವದೇಶಿಯಾಗಿ ಅಭಿವೃದ್ದಿಪಡಿಸುವ ಯತ್ನ ಚುರುಕುಗೊಳಿಸಿದೆ. ಇತ್ತೀಚಿನ ಜಾಗತಿಕ ಸಂಘರ್ಷಗಳಿಂದ ಪಾಠ ಕಲಿತು, ಭಾರತವು ಭೂಗತ ಗುರಿಯನ್ನು ಬೇಧಿಸಲು ಹೊಸ ಶಕ್ತಿ, ಸಾಮರ್ಥ್ಯದ ಹೊಸ ಕ್ಷಿಪಣಿಯನ್ನು ನಿರ್ಮಿಸುವ ಮೂಲಕ ಭವಿಷ್ಯದ ಯುದ್ಧಗಳಿಗೆ ತಯಾರಿ ನಡೆಸುತ್ತಿದೆ.
ಇದನ್ನೂ ಓದಿ: ಈ ವಿಷಯಗಳನ್ನು ChatGPTಗೆ ಎಂದಿಗೂ ಕೇಳಬೇಡಿ.. ಕೇಳಿದ್ರೆ ತೊಂದರೆಗೆ ಸಿಲುಕುತ್ತೀರಿ..!
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಗ್ನಿ-5 ಖಂಡಾಂತರ ಕ್ಷಿಪಣಿಯ ಮಾಡಿಫೈ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ. 5000 ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುವ ಮತ್ತು ಸಾಮಾನ್ಯವಾಗಿ ಪರಮಾಣು ಸಿಡಿತಲೆಗಳನ್ನು ಹೊಂದಿರುವ ಮೂಲಕ್ಕಿಂತ ಭಿನ್ನವಾಗಿದೆ. ಹೊಸ ರೂಪಾಂತರವು 7500-ಕಿಲೋಗ್ರಾಂಗಳಷ್ಟು ಬೃಹತ್ ಬಂಕರ್-ಬಸ್ಟರ್ ಸಿಡಿತಲೆಯನ್ನು ಸಾಗಿಸುವ ಸಾಮರ್ಥ್ಯವಿರುವ ಸಾಂಪ್ರದಾಯಿಕ ಆಯುಧವಾಗಿರುತ್ತದೆ.
ಬಲವರ್ಧಿತ ಕಾಂಕ್ರೀಟ್ ಪದರಗಳ ಅಡಿಯಲ್ಲಿ ಹುದುಗಿರುವ ಗಟ್ಟಿಮುಟ್ಟಾದ ಶತ್ರುವಿನ ಮಿಲಿಟರಿ ಸೌಲಭ್ಯ ಹೊಡೆದುರುಳಿಸಲು ಹೊಸ ಕ್ಷಿಪಣಿ ವಿನ್ಯಾಸಗೊಳಿಸಲಾಗುತ್ತಿದೆ. ಈ ಕ್ಷಿಪಣಿಯು ಸ್ಫೋಟಗೊಳ್ಳುವ ಮೊದಲು ಭೂಮಿಯೊಳಗೆ 80 ರಿಂದ 100 ಮೀಟರ್ ಆಳಕ್ಕೆ ಹೋಗಿ ಭೇದಿಸುವ ನಿರೀಕ್ಷೆಯಿದೆ. 240 ರಿಂದ 300 ಅಡಿ ಅಳದವರೆಗೂ ಮಿಸೈಲ್ ಹೋಗಿ ಸ್ಫೋಟವಾಗಲಿದೆ. ಭೂಗರ್ಭದಲ್ಲಿ ಇರಾನ್ ರೀತಿ, ಮಿಸೈಲ್ ಕಾರ್ಖಾನೆ ಇದ್ದರೂ ಅದನ್ನು ನಾಶಪಡಿಸಲಿದೆ. ಭೂಮಿಯೊಳಗೆ ಪಾಕಿಸ್ತಾನವು ಪರಮಾಣು ಅಸ್ತ್ರ, ಬಾಂಬ್ ಗಳನ್ನ ಇಟ್ಟಿದೆ. ಅವುಗಳನ್ನು ನಾಶಪಡಿಸುವ ಉದ್ದೇಶದಿಂದಲೇ ಭಾರತ ಈ ಹೊಸ ಬಂಕರ್ ಬಸ್ಟರ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿದೆ.
ಇದನ್ನೂ ಓದಿ: ಟೆಸ್ಲಾ ಹೊಸ ಚಮತ್ಕಾರ.. ಚಾಲಕನಿಲ್ಲದೇ 30 ನಿಮಿಷ ನಗರ ಸುತ್ತಿ ಗ್ರಾಹಕನ ಮನೆ ತಲುಪಿದ ಟೆಸ್ಲಾ ಕಾರು..! VIDEO
ಅಮೆರಿಕಾದ ಬಂಕರ್ ಬಸ್ಟರ್ ಬಾಂಬ್ನ ಸಾಮರ್ಥ್ಯಕ್ಕೆ ಹೊಂದಿಕೆಯಾಗುವಂತೆ ಭಾರತದ ಹೊಸ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಭಾರತ ಹೊಂದಿದೆ. ಜಿಬಿಯು-43 ಬಾಂಬ್ ಅನ್ನು ಎಲ್ಲ ಬಾಂಬ್ ಗಳ ತಾಯಿ ಎಂದು ಕರೆಯಲಾಗುತ್ತೆ. ಈಗ ಭಾರತವು ಇದಕ್ಕಿಂತ ಹೆಚ್ಚಿನ ಶಕ್ತಿ, ಸಾಮರ್ಥ್ಯದ ಬಾಂಬ್ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಅಮೆರಿಕಾದಂತೆ ವಿಮಾನದಲ್ಲಿ ಹೊತ್ತೊಯ್ಯುವ ಬಾಂಬ್ ಬದಲು, ಭಾರತವು ಮಿಸೈಲ್ ಮೂಲಕವೇ ಶತ್ರುವಿನ ಗುರಿಯನ್ನು ಭೂಮಿಯೊಳಕ್ಕೆ ನುಗ್ಗಿ ಹೊಡೆದುರುಳಿಸುವ ಉದ್ದೇಶ ಹೊಂದಿದೆ. ಇದರಿಂದ ಪ್ಲೆಕ್ಸಿಬಲ್ ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮವಾದ, ಶಕ್ತಿಶಾಲಿಯಾದ ಮಿಸೈಲ್ ನಿರ್ಮಿಸುವುದು ಭಾರತದ ಉದ್ದೇಶ. ಇದರಿಂದಾಗಿ ಈ ವಲಯದಲ್ಲಿ ಕಾರ್ಯತಂತ್ರವನ್ನು ಮರುರೂಪಿಸುವ ಅಗತ್ಯ ಇದೆ. ಅಗ್ನಿ-5 ರ ಎರಡು ಹೊಸ ವರ್ಷನ್ ಮಿಸೈಲ್ಗಳು ಅಭಿವೃದ್ಧಿಯ ಹಂತದಲ್ಲಿವೆ.
ಒಂದು ನೆಲದ ಮೇಲಿನ ಗುರಿಗಳಿಗಾಗಿ ಏರ್‌ಬರ್ಸ್ಟ್ ವಾರ್ ಹೆಡ್ ಅನ್ನು ಒಳಗೊಂಡಿರುತ್ತದೆ. ಆದರೆ ಇನ್ನೊಂದು ಗಟ್ಟಿಯಾದ ಭೂಗತ ಮೂಲಸೌಕರ್ಯವನ್ನು ಕೊರೆಯಲು ವಿನ್ಯಾಸಗೊಳಿಸಲಾದ ಆಳಕ್ಕೆ -ನುಗ್ಗುವ ಕ್ಷಿಪಣಿಯಾಗಿರುತ್ತದೆ. ಪರಿಕಲ್ಪನೆಯಲ್ಲಿ GBU-57 ಗೆ ಹೋಲುತ್ತದೆ. ಪ್ರತಿಯೊಂದು ವಾರ್ ಹೆಡ್ 8 ಟನ್ ತೂಕ ಇರುತ್ತೆ.
ಇದನ್ನೂ ಓದಿ: ಉದ್ಯಮ ಆರಂಭಿಸುವ ಆಸೆ ನಿಮಗಿದ್ಯಾ..? ಹಾಗಾದ್ರೆ ಬ್ಯುಸಿನೆಸ್ ಮಾಡೋ ವಿಧಾನ ತಿಳಿದುಕೊಳ್ಳಿ..!
ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಶಕ್ತಿಶಾಲಿ ಬಾಂಬ್ ಹಾಗೂ ಸಿಡಿತಲೆಯಾಗಿರಲಿದೆ. ಹೊಸ ವರ್ಷನ್ ಕ್ಷಿಪಣಿಯಲ್ಲಿ 2,500 ಕಿಮೀ ವರೆಗೂ ಹೋಗುವ ಕ್ಷಿಪಣಿಯನ್ನು ಅಭಿವೃದ್ದಿಪಡಿಸುತ್ತಿದ್ದರೂ, ನಾಶಪಡಿಸುವ ಶಕ್ತಿ, ನಿಖರ ಗುರಿ, ದಾಳಿಯಲ್ಲಿ ಭಾರತದ ರಕ್ಷಣಾ ಬತ್ತಳಿಕೆಯ ಪ್ರಮುಖ ಅಸ್ತ್ರವಾಗಲಿದೆ. ವೈರಿಗಳ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್, ಮಿಸೈಲ್, ಪ್ರಮುಖವಾದ ಮಿಲಿಟರಿ ಮೂಲಸೌಕರ್ಯವನ್ನು ಟಾರ್ಗೆಟ್ ಮಾಡಿ ನಾಶಪಡಿಸುತ್ತವೆ. ಹೊಸ ಮಿಸೈಲ್ ಮ್ಯಾಕ್ 8 ಮತ್ತು ಮ್ಯಾಕ್ 20 ಸ್ಪೀಡ್ ಮಧ್ಯೆ ವೇಗವಾಗಿ ಹೋಗುವ ಮಿಸೈಲ್ ಆಗಿರಲಿದೆ. ಹೀಗಾಗಿ ಇದು ಹೈಪರ್ ಸಾನಿಕ ಅಸ್ತ್ರವಾಗಲಿದೆ. ಭಾರತವು ಸ್ವದೇಶಿ ಬಂಕರ್ ಬಸ್ಟರ್ ಮಿಸೈಲ್ ಅನ್ನು ಅಭಿವೃದ್ದಿಪಡಿಸುತ್ತಿರುವುದು ಭಾರತದ ಮಿಲಿಟರಿ ಶಕ್ತಿ, ಸಾಮರ್ಥ್ಯ ವೃದ್ಧಿಯ ಸಂಕೇತ. ಜೊತೆಗೆ ಡಿಫೆನ್ಸ್ ಟೆಕ್ನಾಲಜಿಯಲ್ಲಿ ಆತ್ಮನಿರ್ಭರವಾಗುತ್ತಿರುವುದರ ಸಂಕೇತ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ