/newsfirstlive-kannada/media/post_attachments/wp-content/uploads/2025/02/ROHIT_SHARMA_PANDYA.jpg)
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅಭಿಯಾನ ಇಂದಿನಿಂದ ಆರಂಭವಾಗ್ತಿದೆ. ಸೂಪರ್ ಸ್ಟಾರ್ ಆಟಗಾರರ ದಂಡೇ ಹೊಂದಿರೋ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ಹಾಟ್ ಫೇವರಿಟ್ ಎನಿಸಿದೆ. ಆದ್ರೆ, ಒಂದು ವೀಕ್ನೆಸ್ ಟೀಮ್ ಇಂಡಿಯಾದಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೂಮ್ರಾ ಇಲ್ಲದ ಬೌಲಿಂಗ್ ಅಟ್ಯಾಕ್ ಬಡವಾಗಿದೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿ ನಿಂತಿದೆ. ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದ 3 ದಿನಗಳಿಂದ ಸಮಾರಾಭ್ಯಾಸ ನಡೆಸಿದ ಇಂಡಿಯನ್ ಟೈಗರ್ಸ್, ಯುದ್ಧಭೂಮಿಯಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ. ಆದ್ರೆ, ಒಳಗೊಳಗೆ ಆತಂಕ ಇಡೀ ತಂಡವನ್ನ ಕಾಡ್ತಿದೆ. ಭರ್ಜರಿ ಅಭ್ಯಾಸ ನಡೆಸಿ, ಗೆಲ್ಲುವ ಹಾಟ್ ಫೇವರಿಟ್ಗಳಾಗಿ ಕದನಕ್ಕೆ ಸಜ್ಜಾಗಿದ್ರೂ ಬೌಲಿಂಗ್ ದೌರ್ಬಲ್ಯ ಟೀಮ್ ಇಂಡಿಯಾಗೆ ಹಿನ್ನಡೆಯಾಗಿದೆ.
ಬೂಮ್ರಾ ಇಲ್ಲದ ಭಾರತ.. ಬಲ ತುಂಬೋದ್ಯಾರು.?
ಈ ಟೂರ್ನಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಮೇಜರ್ ಸೆಟ್ಬ್ಯಾಕ್ ಆಗಿದೆ. ತಂಡದ ಮ್ಯಾಚ್ ವಿನ್ನರ್ ವೇಗಿ ಜಸ್ಪ್ರೀತ್ ಬೂಮ್ರಾ ಇಂಜುರಿಗೆ ತುತ್ತಾಗಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಬೂಮ್ರಾ ಇಲ್ಲದೇ ಟೀಮ್ ಇಂಡಿಯಾದ ಬೌಲಿಂಗ್ ಸಿಕ್ಕಾಪಟ್ಟೆ ದುರ್ಬಲವಾಗಿ ಕಾಣ್ತಿದೆ. ಬೂಮ್ರಾ ಅಲಭ್ಯತೆಯಲ್ಲಿ ಬೌಲಿಂಗ್ಗೆ ಬಲ ತುಂಬೋದ್ಯಾರು ಅನ್ನೋ ಪ್ರಶ್ನೆ ಇಡೀ ತಂಡವನ್ನ ಕಾಡ್ತಿದೆ.
ವೇಗಿ ಶಮಿ ಫಿಟ್ನೆಸ್ ಬಗ್ಗೆಯೂ ಇದೆ ಅನುಮಾನ.!
ಸದ್ಯ ತಂಡದಲ್ಲಿರೋ ಅನುಭವಿ ವೇಗಿ ಅಂದ್ರೆ ಮೊಹಮ್ಮದ್ ಶಮಿ. ನೋ ಡೌಟ್ ಶಮಿ ಒನ್ ಆಫ್ ದ ಗ್ರೆಟೆಸ್ಟ್ ಬೌಲರ್. ಕಳೆದ ಏಕದಿನ ವಿಶ್ವಕಪ್ನಲ್ಲಿ ಶಮಿ ಅದ್ಧೂರಿ ಪರ್ಫಾಮೆನ್ಸ್ ನೀಡಿದ್ರು. ಆದ್ರೆ, ಈಗ ಅದೇ ಶಮಿ ಇಲ್ಲ. ಏಕದಿನ ವಿಶ್ವಕಪ್ ಬಳಿಕ ಸರ್ಜರಿಗೆ ಒಳಗಾಗಿ ಲಾಂಗ್ ಗ್ಯಾಪ್ನ ಬಳಿಕ ಕಮ್ಬ್ಯಾಕ್ ಮಾಡಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ ಹಳೆ ಖದರ್ ಕಾಣಿಸಿಲ್ಲ. ಜೊತೆಗೆ ಚೇತರಿಸಿಕೊಂಡು ಕಮ್ಬ್ಯಾಕ್ ಮಾಡಿರುವ ಶಮಿ ಮೇಲೆ ಹೆಚ್ಚಿನ pressure ಕೂಡ ಹಾಕುವಂತಿಲ್ಲ. ಶಮಿ ಫಿಟ್ನೆಸ್ ಬಗ್ಗೆ ಅನುಮಾನಗಳಿರೋದು ಗೊಂದಲಕ್ಕೆ ಕಾರಣವಾಗಿದೆ.
ಏಕದಿನ ಫಾರ್ಮೆಟ್ನಲ್ಲಿ ಆರ್ಷ್ದೀಪ್ ಅನಾನುಭವಿ.!
ತಂಡದಲ್ಲಿರೋ ಇನ್ನೊರ್ವ ವೇಗಿ ಆರ್ಷ್ದೀಪ್ ಸಿಂಗ್ ಲೆಫ್ಟ್ ಆರ್ಮ್ ಪೇಸರ್ ಕಳೆದ ಟಿ20 ವಿಶ್ವಕಪ್ನಲ್ಲಿ ಸಾಲಿಡ್ ಪರ್ಫಾಮನ್ಸ್ ನೀಡಿದರು. ಚಾಂಪಿಯನ್ಸ್ ಟ್ರೋಫಿ ನಡಿತಿರುವ ದುಬೈನಲ್ಲೂ ಆಡಿದ ಅನುಭವ ಆರ್ಷ್ದೀಪ್ಗಿದೆ. ಆದ್ರೆ, ಏಕದಿನ ಫಾರ್ಮೆಟ್ನಲ್ಲಿ ಈತ ಆಡಿರೋದು ಕೇವಲ 9 ಪಂದ್ಯ ಮಾತ್ರ. ಅನಾನುಭವಿ ಆರ್ಷ್ದೀಪ್ ಬಿಗ್ ಟೂರ್ನಮೆಂಟ್ನಲ್ಲಿ ಒತ್ತಡಕ್ಕೆ ಒಳಗಾದ್ರೆ ಕಷ್ಟ.. ಕಷ್ಟ..!
ಇದನ್ನೂ ಓದಿ:ಪಾಕ್ ವಿರುದ್ಧದಷ್ಟೇ ಬಾಂಗ್ಲಾ ಜೊತೆಗಿನ ಪಂದ್ಯಗಳು ರೋಚಕ.. ಟೀಮ್ ಇಂಡಿಯಾದ ಗೆಲುವು ಹೇಗಿವೆ?
ಹರ್ಷಿತ್ ರಾಣಾಗಿಲ್ಲ ಬಿಗ್ ಟೂರ್ನಿ ಆಡಿದ ಅನುಭವ.!
ಬೂಮ್ರಾ ರಿಪ್ಲೇಸ್ಮೆಂಟ್ ಆಗಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಿರುವ ಹರ್ಷಿತ್ ರಾಣಾ ಅನಾನಭವಿ. ಈವರೆಗೆ ಒಂದೇ ಒಂದು ಐಸಿಸಿ ಟೂರ್ನಮೆಂಟ್ ಆಡಿಲ್ಲ. ಆಡಿರೋದು ಕೇವಲ 6 ಇಂಟರ್ನ್ಯಾಷನಲ್ ಪಂದ್ಯ, ಅದ್ರಲ್ಲಿ 3 ಒಡಿಐ. ಕೇವಲ 3 ಏಕದಿನ ಪಂದ್ಯ ಆಡಿರೋ ಹರ್ಷಿತ್ ರಾಣಾ, ಚಾಂಪಿಯನ್ಸ್ ಟ್ರೋಫಿಯಂತ ಬಿಗ್ಸ್ಟೇಜ್ನಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದು ಎಲ್ಲರನ್ನ ಕಾಡ್ತಿದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯನೇ ‘3ನೇ ವೇಗಿ’..!
ಅನುಭವಿ ಶಮಿಯಲ್ಲಿ ಹಳೆ ಖದರ್ ಮಾಯವಾಗಿದ್ರೆ, ಉಳಿದ ಸ್ಪೆಷಲಿಸ್ಟ್ ವೇಗಿಗಳಿಗೆ ಅನುಭವದ ಕೊರತೆಯಿದೆ. ಹೀಗಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೇಲೆ ಜವಾಬ್ದಾರಿ ಹೆಚ್ಚಿದೆ. ಉಳಿದವರಿಗೆ ಹೋಲಿಸಿದ್ರೆ, ಅನುಭವಿಯಾಗಿರೋ ಪಾಂಡ್ಯ ಪೇಸ್ ಅಟ್ಯಾಕ್ನ 3ನೇ ವೇಗಿ ರೋಲ್ನ ಪ್ಲೇ ಮಾಡಬೇಕಿದೆ. ಪವರ್ ಪ್ಲೇ ಹಾಗೂ ಡೆತ್ ಓವರ್ಗಳಲ್ಲಿ ಟೀಮ್ ಇಂಡಿಯಾ ಈಗ ಹಾರ್ದಿಕ್ ಮೇಲೆ ಡಿಪೆಂಡ್ ಆಗಿದೆ. ಹಾರ್ದಿಕ್ ಜವಾಬ್ದಾರಿಯನ್ನ ಹೇಗಿ ನಿಭಾಯಿಸ್ತಾರೆ ಅನ್ನೋದ್ರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ