/newsfirstlive-kannada/media/post_attachments/wp-content/uploads/2025/05/India-Brahmos-missile-1.jpg)
ನವದೆಹಲಿ: ಭಾರತದ ತಾಕತ್ತು ಈಗ ಇಡೀ ಜಗತ್ತಿಗೆ ಗೊತ್ತಾಗಿದೆ. ಕ್ಯಾತೆ ತೆಗೆದ ವೈರಿ ರಾಷ್ಟ್ರಕ್ಕೆ ಭಾರತ ಆತ್ಮನಿರ್ಭರದ ಅಸ್ತ್ರಗಳಿಂದಲೇ ಮುಟ್ಟಿ ನೋಡಿಕೊಳ್ಳುವ ಪೆಟ್ಟು ಕೊಡಲಾಗಿದೆ. ಭಾರತ ದೇಶಕ್ಕಾಗಿ ಹೋರಾಡಿದ ರೀತಿ ಕಂಡು ಅಮೆರಿಕಾ, ಚೀನಾದಂತಹ ದೈತ್ಯ ರಾಷ್ಟ್ರಗಳೇ ದಂಗಾಗಿ ಹೋಗಿವೆ.
ಆಪರೇಷನ್ ಸಿಂಧೂರ ಬಳಿಕ ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಭಾರೀ ಬೇಡಿಕೆ ಬಂದಿದೆ. ಬ್ರಹ್ಮೋಸ್ ಕ್ಷಿಪಣಿ ಪಾಕ್ ಏರ್ ಬೇಸ್, ಉಗ್ರ ನೆಲೆಯನ್ನ ಛಿದ್ರ, ಛಿದ್ರ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.
ಭಾರತದ ಬ್ರಹ್ಮೋಸ್ ಕ್ಷಿಪಣಿಗಾಗಿ ಜಗತ್ತಿನ 17 ದೇಶಗಳಿಂದ ಈಗ ಬೇಡಿಕೆ ಬಂದಿದೆ.
17 ದೇಶಗಳಿಂದ ಬೇಡಿಕೆ
1. ಫಿಲಿಪೈನ್ಸ್
2. ಇಂಡೋನೇಷ್ಯಾ
3. ವಿಯೆಟ್ನಾಂ
4. ಮಲೇಷ್ಯಾ
5. ಥೈಲ್ಯಾಂಡ್
6. ಸಿಂಗಾಪುರ
7. ಬ್ರೂನಿ
8. ಬ್ರೆಜಿಲ್
9. ಚಿಲಿ
10. ಅರ್ಜೆಂಟೈನಾ
11. ವೆನೆಜುವೆಲಾ
12. ಈಜಿಪ್ಟ್
13. ಸೌದಿ ಅರೇಬಿಯಾ
14. ಯುಎಇ
15. ಕತಾರ್
16. ದಕ್ಷಿಣ ಆಫ್ರಿಕಾ
17. ಬಲ್ಗೇರಿಯಾ
ಭೂಮಿಯ ಮೇಲಿನ ಅತ್ಯಂತ ವೇಗದ ಕ್ರೂಸ್ ಮಿಸೈಲ್ ಬ್ರಹ್ಮೋಸ್
ಭೂಮಿ, ಸಮುದ್ರ, ವಾಯು ನೆಲೆಯಿಂದ ನಿಖರವಾದ ದಾಳಿ ಮಾಡುತ್ತೆ
ಭಾರತದ ಬ್ರಹ್ಮಾಸ್ತ್ರ ಅಂತಲೇ ಕರೆಸಿಕೊಳ್ಳುವ ಬ್ರಹ್ಮೋಸ್ ಬರೋಬ್ಬರಿ 800 ಕಿಲೋ ಮೀಟರ್ ರೇಂಜ್ ಹೊಂದಿದೆ. ನಿಮಿಷಗಳಲ್ಲಿ 300 ಕಿಲೋ ಮೀಟರ್ ಸಾಗುವ ಸಾಮರ್ಥ್ಯವಿದೆ. ಒಂದೇ ಸಾರಿ 300 ಕೆಜಿಯ ಸ್ಫೋಟಕ ಹೊತ್ತೊಯ್ಯಬಲ್ಲ ಸಾಮರ್ಥ್ಯವಿದ್ದು, ಜಿಪಿಎಸ್ ಆಧಾರಿತ ಗೈಡೆಡ್ ಸಿಸ್ಟಮ್ ಬ್ರಹ್ಮೋಸ್ನಲ್ಲಿದೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ 52ನೇ ಮುಖ್ಯ ನ್ಯಾಯಮೂರ್ತಿಯಾಗಿ BR ಗವಾಯಿ ಪ್ರಮಾಣ ವಚನ ಸ್ವೀಕಾರ
ಇನ್ನೂ ವಿಶೇಷ ಏನಂದ್ರೆ ಸ್ವಯಂ ರಕ್ಷಣೆಯ ಸಿಗ್ನಲ್ ಜಾಮಿಂಗ್ ವ್ಯವಸ್ಥೆ ಕೂಡ ಬ್ರಹ್ಮೋಸ್ನಲ್ಲಿದೆ. 8.4 ಮೀಟರ್ ಉದ್ದ, 6 ಮೀಟರ್ ಅಗಲವಿರೋ ಮಿಸೈಲ್ ಗುರಿಯಿಟ್ರೆ ಟಾರ್ಗೆಟ್ ಮಿಸ್ಸೇ ಆಗಲ್ಲ. ಬ್ರಹ್ಮೋಸ್ನಲ್ಲಿ ಸ್ಟೆಲ್ತ್ ಫೀಚರ್ ಇದ್ದು, ರಾಡಾರ್ ಕಣ್ಣಿಗೆ ಬೀಳುವ ಸಾಧ್ಯತೆ ಕಡಿಮೆ ಮಾಡು ರೀತಿಯಲ್ಲಿ ಕ್ಷಿಪಣಿಯನ್ನ ಅಭಿವೃದ್ಧಿ ಪಡಿಸಲಾಗಿದೆ. ಶತ್ರುದೇಶದ ರಾಡಾರ್ನಲ್ಲೇ ಸಾಗಿ ನಿಶ್ಚಿತ ಗುರಿಯನ್ನ ಈ ಬ್ರಹ್ಮೋಸ್ ಹೊಡೆದುರುಳಿಸುತ್ತೆ. ನೀರು ನೆಲ ಆಕಾಶ ಮಾತ್ರವಲ್ಲ ಹಡಗು, ಪೈಟರ್ ಜೆಟ್, ಸಬ್ ಮರೀನ್ ಮೂಲಕ ಹೇಗ್ ಬೇಕಾದ್ರೂ ದಾಳಿ ನಡೆಸಬಹುದು.
ಬ್ರಹ್ಮೋಸ್ ಹೆಸರು ಹೇಗೆ ಬಂತು?
ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕವಾ ನದಿಗಳ ಹೆಸರಿನಿಂದ ಇದಕ್ಕೆ ಬ್ರಹ್ಮೋಸ್ ಅಂತ ಹೆಸರಿಡಲಾಗಿದೆ. ಇದು ಭಾರತ ಹಾಗೂ ರಷ್ಯಾದ ಸ್ನೇಹ ಸಂಬಂಧಕ್ಕೆ ಉದಾಹರಣೆಯಾಗಿದೆ. ಈ ಕ್ಷಿಪಣಿಯ ಪರಿಕಲ್ಪನೆಯು 1990ರ ದಶಕದಲ್ಲಿ ರೂಪುಗೊಂಡಿತ್ತು.
ಭಾರತದ DRDO ಮತ್ತು ರಷ್ಯಾದ NPO ಜಂಟಿಯಾಗಿ ಅಧ್ಯಯನ ನಡೆಸಿ ಬ್ರಹ್ಮೋಸ್ ಕ್ಷಿಪಣಿಯನ್ನ ಅಭಿವೃದ್ಧಿಪಡಿಸಿವೆ. ಹೈದರಾಬಾದ್, ನಾಗ್ಪುರದಲ್ಲಿ ಈಗಾಗಲೇ ಬ್ರಹ್ಮೋಸ್ ತಯಾರಿಕಾ ಘಟಕ ಇವೆ. ಇದೀಗ ಉತ್ತರ ಪ್ರದೇಶದ ಲಕ್ನೋದಲ್ಲಿನ ತಯಾರಿಕಾ ಘಟಕವನ್ನ ಮೊನ್ನೆ ಮೊನ್ನೆಯಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದರು. ಲಕ್ನೋ ಘಟಕವು ವಾರ್ಷಿಕವಾಗಿ 100 ಕ್ಷಿಪಣಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ ಫಸ್ಟ್ ಚಾನೆಲ್ ಲಭ್ಯ