ಗಿಲ್, ಪಾಂಡ್ಯಗೆ ಕೊಕ್.. ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಂ ಇಂಡಿಯಾಗೆ ಹೊಸ ಉಪನಾಯಕ

author-image
Ganesh
Updated On
ಗಿಲ್, ಪಾಂಡ್ಯಗೆ ಕೊಕ್.. ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಂ ಇಂಡಿಯಾಗೆ ಹೊಸ ಉಪನಾಯಕ
Advertisment
  • ರೋಹಿತ್ ನೇತೃತ್ವದಲ್ಲಿ ಚಾಂಪಿಯನ್ಸ್​ ಟ್ರೋಫಿ ಆಡಲಿದೆ
  • ಮೂರ್ನಾಲ್ಕು ದಿನದಲ್ಲಿ ಟೀಂ ಇಂಡಿಯಾ ಪ್ರಕಟವಾಗಲಿದೆ
  • ದ್ರಾವಿಡ್ ಅವಧಿಯಲ್ಲಿ ಪಾಂಡ್ಯ ಉಪನಾಯಕರಾಗಿದ್ದರು

ಐಸಿಸಿ ಚಾಂಪಿಯನ್ಸ್​ ಟ್ರೋಫಿ (ICC Champions Trophy 2025 ) ಟೂರ್ನಿಗಾಗಿ ಟೀಂ ಇಂಡಿಯಾ ಪ್ರಕಟಗೊಳ್ಳಲಿದೆ. ಬಿಸಿಸಿಐನ ಆಯ್ಕೆ ಸಮಿತಿ ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಪ್ರಕಟಿಸಲಿದೆ.

ತಂಡದ ಉಪನಾಯಕ ವಿಚಾರಕ್ಕೆ ಸಂಬಂಧಿಸಿ ಬಿಗ್​ ಅಪ್​ಡೇಟ್ಸ್​ ಸಿಕ್ಕಿದೆ. ಶುಬ್ಮನ್ ಗಿಲ್ ಅಥವಾ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟುವ ಬದಲು, ಜಸ್​ಪ್ರೀತ್ ಬುಮ್ರಾಗೆ ಆ ಜವಾಬ್ದಾರಿ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.

2024ರಲ್ಲಿ ಟೀಂ ಇಂಡಿಯಾ ಕೇವಲ ಮೂರು ಏಕದಿನ ಪಂದ್ಯವನ್ನ ಮಾತ್ರ ಆಡಿದೆ. ಏಕದಿನ ಪಂದ್ಯದಲ್ಲಿ ಭಾರತ ಹೆಚ್ಚು ಬದಲಾವಣೆ ಅಥವಾ ಯಾವುದೇ ಪ್ರಯೋಗ ಕೂಡ ಮಾಡಿಲ್ಲ. 2023ರಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ಫೈನಲ್ ಪ್ರವೇಶ ಮಾಡಿತ್ತು. ಈ ಅವಧಿಯಲ್ಲಿ ಭಾರತ ತಂಡದ ಬ್ಯಾಟಿಂಗ್ ಶಕ್ತಿ ತುಂಬಾ ಅದ್ಭುತವಾಗಿತ್ತು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ.. 53 ಕ್ಕೂ ಹೆಚ್ಚು ಮಂದಿಯ ಜೀವ ಹೋಗಿದೆ, ಹೆಚ್ಚಿದ ಆತಂಕ..

ರಾಹುಲ್ ದ್ರಾವಿಡ್ ಕೋಚಿಂಗ್ ಅವಧಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಏಕದಿನ ಪಂದ್ಯಗಳ ಟೂರ್ನಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿತ್ತು. ಕೆಎಲ್ ರಾಹುಲ್, ಶುಬ್ಮನ್ ಗಿಲ್ ಕೂಡ ಉಪನಾಯಕರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಇದೀಗ ತಂಡದಲ್ಲಿ ಗಂಭೀರ್ ಹಿಡಿತ ಸಾಧಿಸಿದ್ದು, ಉಪನಾಯಕನ ಜವಾಬ್ದಾರಿ ಬುಮ್ರಾಗೆ ನೀಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಬುಮ್ರಾ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ತಂಡವನ್ನು ಅದ್ಭುತವಾಗಿ ಹ್ಯಾಂಡಲ್ ಮಾಡಿದ್ದಾರೆ.

ಇದನ್ನೂ ಓದಿ:ಗಾನ ಗಂಧರ್ವ ಆಡಿ ಬೆಳೆದ ಮನೆ ಈಗ ಅನಾಥ.. SPB ಕನಸಿನ ‘ಸಂಗೀತ ದೇಗುಲ’ದಲ್ಲೀಗ ಸ್ವರವಿಲ್ಲ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment