/newsfirstlive-kannada/media/post_attachments/wp-content/uploads/2024/10/ANMOL-BUFFALO.jpg)
ಮೀರತ್ನ ಸರ್ದಾರ್ ವಲ್ಲಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಮೂರು ದಿನದ ರೈತರ ಮೇಳ ಹಾಗೂ ಕೃಷಿ ಮೇಳದಲ್ಲಿ ಅಲ್ಲಿ ನೆರೆದಿದ್ದ ಎಲ್ಲರ ದೃಷ್ಟಿ ತಾಗುವ ಹಾಗೆ ಕಂಡಿದ್ದು ಅನ್ಮೋಲ್ ಎಂಬ ಒಂದು ಕೋಣ. ಕೃಷಿ ಮೇಳೆದಲ್ಲಿ ಪ್ರದರ್ಶನದಲ್ಲಿ ಭಾಗಿಯಾದ ಅನ್ಮೋಲ್ ಎಂಬ ಕೋಣ ಎಲ್ಲರ ದೃಷ್ಟಿ ಕೇಂದ್ರವಾಗಿತ್ತು. ಕಾರಣ ಅದರ ಬೆಲೆ.
ಹರಿಯಾಣದ ಸಿರ್ಸಾದಿಂದ ಬಂದಿದ್ದ ಈ ಕೋಣದ ಬೆಲೆ 2 ರೋಲ್ಸ್ ರಾಯ್ಸ್ ಹಾಗೂ 10 ಮರ್ಸಿಡಿಸ್ ಬೆಂಜ್ ಕಾರುಗಳು ಸೇರಿದರೆ ಎಷ್ಟು ಬೆಲೆಯಾಗುತ್ತದೆಯೋ ಅಷ್ಟು ಎನ್ನಲಾಗುತ್ತಿದೆ. ಅಷ್ಟು ಮಾತ್ರವಲ್ಲ ಈ ಒಂದು ಕೋಣಕ್ಕೆ ನೀಡುವ ದುಡ್ಡಿನಲ್ಲಿ ನೋಯ್ಡಾದಲ್ಲಿ ಸುಮಾರು 20 ಐಷಾರಾಮಿ ಮನೆಗಳನ್ನು ಖರೀದಿ ಮಾಡಬಹುದು ಎನ್ನಲಾಗುತ್ತಿದೆ. ಅನೇಕ ಜಿಲ್ಲೆಗಳಿಂದ ಬಂದಿದ್ದ ಜನರು ಈ ಅದ್ಭುತ ಕೋಣವನ್ನು ನೋಡಲು ಹಾಗೂ ಅದರ ಬೆಲೆ ತಿಳಿಯಲು ಹಿಂಡು ಹಿಂಡಾಗಿ ಬರುತ್ತಿದ್ದರು.
ಇದನ್ನೂ ಓದಿ:ಆಗ ಮಾಸ್ಟರ್ ಮೈಂಡ್ ಎಂದು ಕರೆಸಿಕೊಂಡ ವ್ಯಕ್ತಿ ಈಗ ನಿರುದ್ಯೋಗಿ! ಇವರ ಕಥೆ ಎಂತವರಿಗೂ ಕೂಡ ಸ್ಪೂರ್ತಿ
ಈ ಒಂದು ಕೋಣದ ಬೆಲೆ ಒಂದಲ್ಲ ಎರಡಲ್ಲ 23 ಕೋಟಿ ಎಂದು ಹೇಳಲಾಗುತ್ತಿದೆ.ಇದು 2 ರೋಲ್ಸ್ ರಾಯ್ಸ್ 12 ಕೋಟಿ ಮತ್ತು 10 ಮರ್ಸಿಡಿಸ್ ಬೆಂಜ್ ಕಾರು 15 ಕೋಟಿ ಎರಡು ಸೇರಿಸಿದರೆ 27 ಕೋಟಿ ರೂಪಾಯಿ ಆಗುತ್ತದೆ. ಈ ಕೋಣದ ಬೆಲೆಯೂ ಕೂಡ ಹತ್ತಿರತ್ತ ಅಲ್ಲಿಗೆ ಬಂದಂತಾಯ್ತು. ಈ ಕೋಣವನ್ನು ನೋಡಲು ಜನರು ಕೃಷಿ ಮೇಳದಲ್ಲಿ ಇದೇ ಕಾರಣದಿಂದ ನೋಡಲು ಮುಗಿಬಿದ್ದಿದ್ದರು.
ಈ ಅನ್ಮೋಲ್ ಎಂಬ ಕೋಣದ ಮಾಲೀಕ ಜಗತ್ ಸಿಂಗ್ ಮೂಲತಃ ಹರಿಯಾಣದವರು. ಅವರು ಹೇಳುವ ಪ್ರಕಾರ ಎಂಟು ವರ್ಷದ ಈ ಕೋಣೆ ಅನೇಕ ಪ್ರಶಸ್ತಿಗಳನ್ನು ಗಳಿಸಿದಕೊಂಡಿದೆ.
ಇದನ್ನು ಇಷ್ಟು ಆರೋಗ್ಯಕರವಾಗಿ ಸದೃಢವಾಗಿ ಇಡಲು ಅದಕ್ಕೆ ನೀಡುವ ಆಹಾರವೇ ಕಾರಣ ಎನ್ನುತ್ತಾರೆ ಜಗತ್ ಸಿಂಗ್. ನಿತ್ಯ ಈ ಕೋಣಕ್ಕೆ 5ಲೀಟರ್ ಹಾಲು, 4 ಕೆಜಿ ದಾಳಿಂಬೆ, 30 ಬಾಳೆಹಣ್ಣು, 20 ರಿಚ್ ಪ್ರೊಟೀನ್ ಇರುವ ಮೊಟ್ಟೆ ಹಾಗೂ ಮೇವು ಕೊಡುತ್ತೇವೆ. ಇದರ ಜೊತೆಗೆ ಕಾಲ್ ಕೆಜಿ ಬಾದಾಮಿಯನ್ನು ಗುಲ್ಕಂದ್ ಕೂಡ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಲಿಫ್ಟ್ಗಳಲ್ಲಿ ಕನ್ನಡಿಯನ್ನೇಕೆ ಫಿಟ್ ಮಾಡಿರುತ್ತಾರೆ.? ಕಾರಣ ತಿಳಿದ್ರೆ ನೀವು ಅಚ್ಚರಿಗೊಳ್ತೀರಿ
ಇದರ ಜೊತೆಗೆ ಇದರ ವಿರ್ಯಕ್ಕೂ ಕೂಡ ಭಾರೀ ಡಿಮ್ಯಾಂಡ್ ಇದೆಯಂತೆ. ತಿಂಗಳಿಗೆ ನಾಲ್ಕರಿಂದ ಐದು ಲಕ್ಷ ರೂಪಾಯಿವರೆಗೆ ಅದರಿಂದಲೇ ಗಳಿಸುತ್ತೇವೆ ಎಂದು ಜಗತ್ ಸಿಂಗ್ ಹೇಳಿದ್ದಾರೆ. ಸಿರ್ಸಾದಿಂದ ಆಗಾಗ ಒಂದು ಟೀಮ್ ಬಂದು ಈ ಕೋಣದ ವಿರ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ಹಾಗೂ ಎಲ್ಲಾ ಕಡೆ ಹಂಚುತ್ತಾರೆ. ಅನ್ಮೋಲ್ ಮುರಾಽ ಎಂಬ ತಳಿಗೆ ಸೇರಿದ ಕೋಣ. ಇದರ ವಿರ್ಯವು ಸಿಗುವುದು ಬಹಳ ಅಪರೂಪ, ಪ್ರತಿ ತಿಂಗಳಿಗೆ ಈ ಕೋಣಕ್ಕಾಗಿ 60 ಸಾವಿರ ರೂಪಾಯಿ ಖರ್ಚು ಮಾಡುತ್ತೇವೆ ಹಾಗೂ 4 ರಿಂದ 5 ಲಕ್ಷ ರೂಪಾಯಿ ಗಳಿಸುತ್ತೇವೆ ಎಂದು ಮಾಲೀಕ ಜಗತ್ ಸಿಂಗ್ ಹೇಳುತ್ತಾರೆ.