/newsfirstlive-kannada/media/post_attachments/wp-content/uploads/2024/12/FERTILITY-RATE-DECLINED.jpg)
ಭಾರತವು ಅಧಿಕ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಆದರೂ ಕೂಡ ಒಂದು ಕಳವಳಕಾರಿ ಸಂಗತಿಯನ್ನು ಯುನೈಟೆಡ್ ನೇಷನ್ ಹೊರ ಹಾಕಿದೆ. ದೇಶದಲ್ಲಿ ಸಂತಾನೋತ್ಪತ್ತಿಯ ಶಕ್ತಿ ಅಥವಾ ಫಲವಂತಿಕೆಯ ಮಟ್ಟ ಕಡಿಮೆಯಾಗುತ್ತಿದೆ ಎಂದು ಹೇಳಿದೆ. 1950 ರಿಂದ 2024ರ ಅವಧಿಯಲ್ಲಿ 6.2 ರಷ್ಟು ಇದರ ಮಟ್ಟ ಕುಸಿತ ಕಂಡಿದೆ ಎಂದು ಹೇಳಲಾಗುತ್ತಿದೆ. ಅಂದ್ರೆ ಒಬ್ಬ ಮಹಿಳೆಯರಲ್ಲಿ ಇಬ್ಬರು ಮಕ್ಕಳನ್ನು ಸೃಷ್ಟಿಸುವ ಫಲವಂತಿಕೆ ಕಡಿಮೆ ಆಗಿದೆ ಎಂದು ಯುಎನ್ ಹೇಳುತ್ತಿದೆ. ಇದು ಅವಕಾಶ ಹಾಗೂ ಸಮಸ್ಯೆ ಎರಡನ್ನು ಏಕಕಾಲಕ್ಕೇ ಸೃಷ್ಟಿ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಫಲವಂತಿಕೆ ಕಡಿಮೆ ಆಗಲು ಕಾರಣವೇನು
ಕ್ಷೇತ್ರ ಎಷ್ಟು ಫಲವತ್ತಾಗಿರುತ್ತದೆಯೋ ಬಿತ್ತಿದ ಬೀಜವೂ ಕೂಡ ಅಷ್ಟೇ ಆರೋಗ್ಯಯುತವಾಗಿ ಮೊಳಕೆಯೊಡೆಯುತ್ತದೆ. ಫಲವತ್ತತೆ ಕಳೆದುಕೊಂಡ ಕ್ಷೇತ್ರ ಹಾಗೂ ಬಲಿಷ್ಠತೆ ಕಳೆದುಕೊಂಡ ಬೀಜದಿಂದ ಉತ್ತಮ ಬೆಳೆಯನ್ನು ಪಡೆಯಲು ಸಾಧ್ಯವಿಲ್ಲ. ಅದೇ ಗಂಡು ಹೆಣ್ಣಿನ ಮಿಲನವೂ ಕೂಡ ಇದೇ ಮಾದರಿಯಲ್ಲಿ ಇರುತ್ತದೆ. ಸದ್ಯ ಯುಎನ್ ಹೇಳುವ ಪ್ರಕಾರ ಭಾರತದಲ್ಲಿ ಫಲವಂತಿಕೆಯಲ್ಲಿ ವಿಪರೀತ ಇಳಿಕೆಯಾಗಿದೆ ಎನ್ನಲಾಗುತ್ತಿದೆ. ಅದಕ್ಕೆ ಕಾರಣಗಳನ್ನು ಕೂಡ ನೀಡಲಾಗಿದೆ.
ಇದನ್ನೂ ಓದಿ:2 ಮಕ್ಕಳ ತಾಯಿಯಾದ ಮೇಲೂ ತರುಣಿಯಂತೆ ಕಾಣ್ತಾರೆ.. ನಯನತಾರಾ ಡಯಟ್ ಸಿಕ್ರೇಟ್ ರಿವೀಲ್..!
ನಗರೀಕರಣ ಹಾಗೂ ಆಧುನಿಕ ಜೀವನ ಪದ್ಧತಿ: ಶಿಕ್ಷಣದಲ್ಲಿ ಹಾಗೂ ಜ್ಞಾನ ಗಳಿಕೆಯಲ್ಲಾಗುತ್ತಿರುವ ಬದಲಾವಣೆ, ವೃತ್ತಿ ಮತ್ತು ಆರೋಗ್ಯದ ಬಗ್ಗೆ ಕಾಳಜಿಗಳು ನಗರಪ್ರದೇಶದಲ್ಲಿ ಹೆಚ್ಚುತ್ತಿದೆ. ಹೀಗಾಗಿ ನಗರದ ಹೆಣ್ಣು ಮಕ್ಕಳು ಆದಷ್ಟು ಚಿಕ್ಕ ಕುಟುಂಬವನ್ನು ಹೊಂದಲು ಇಚ್ಛೆ ಪಡುತ್ತಾರೆ.
ವಿಳಂಬಗೊಳ್ಳುವ ಮದುವೆಗಳು: ಮೊದಲು ಒಂದು ಜಾಬ್ ಗಳಿಸಿ ತಮ್ಮನ್ನು ತಾವು ಆ ವೃತ್ತಿಯಲ್ಲಿ ಏನಾದರೂ ಒಂದು ಸಾಬೀತುಪಡಿಸಿಕೊಂಡ ಮೇಲೆ ಮದುವೆ ಎನ್ನುವ ವಿಚಾರಗಳು ಕೂಡ ಈ ಒಂದು ಫಲವಂತಿಕೆ ಕುಸಿಯಲು ಕಾರಣವಾಗಿದೆ ಎನ್ನಲಾಗುತ್ತಿದೆ. ಈ ರೀತಿ ವಿಳಂಬ ಮದುವೆಯಿಂದಾಗಿ ಸಂತಾನೋತ್ಪತ್ತಿಯ ಅವಧಿ ಕುಸಿಯುತ್ತದೆ. ಈ ಕಾರಣದಿಂದಲೂ ಬಂಜೆತನದ ಮಟ್ಟ ಹೆಚ್ಚಾಗಲು ಕಾರಣವಾಗಿದೆ.
ಕುಟುಂಬ ಯೋಜನೆ ಮತ್ತು ಜಾಗೃತಿ: ಇದು ಬದಲಾದ ಕಾಲಮಾನ, ಜನರಲ್ಲಿ ಹೆಚ್ಚು ಅರಿವು ಇರುವುದರಿಂದ ಜೋಡಿಗಳು ಫ್ಯಾಮಿಲಿ ಪ್ಲಾನಿಂಗ್ ಮೊರೆ ಹೋಗುತ್ತಾರೆ. ಎಷ್ಟು ಮಕ್ಕಳು ಬೇಕು ಎಂಬುದನ್ನು ಮೊದಲೇ ನಿರ್ಧರಿಸುತ್ತಾರೆ ಅದರಂತೆ ಒಂದು ಮಗುವಿನ ನಂತರ ಮತ್ತೊಂದನ್ನು ಹೊಂದಲು ನಡುವೆ ಎಷ್ಟು ವರ್ಷಗಳ ಅಂತರ ಇರಬೇಕು ಎಂಬುದನ್ನು ಮೊದಲೇ ನಿರ್ಧಾರ ಮಾಡುವುದರಿಂದ ಈ ಫಲವಂತಿಕೆಯ ಮಟ್ಟದಲ್ಲಿ ಕುಂಠಿತವನ್ನು ನಾವು ಕಾಣಬಹುದು.
ಆರ್ಥಿಕ ಒತ್ತಡಗಳು: ಇಂದಿನ ದಿನಮಾನಗಳಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚವೂ ಇದಕ್ಕೆ ಒಂದು ಕಾರಣ. ಅದರಲ್ಲೂ ನಗರಗಳಲ್ಲಿ ಅತಿಹೆಚ್ಚು ಮಕ್ಕಳನ್ನು ಹೊಂದುವುದು ಅತಿಹೆಚ್ಚು ಭಾರವನ್ನು ತಲೆಯ ಮೇಲೆ ತಂದುಕೊಂಡಂತೆ ಎಂಬ ಅನುಭವ ಆಗುತ್ತದೆ. ಹೀಗಾಗಿ ಕುಟುಂಬವನ್ನು ಸಣ್ಣದು ಮಾಡಿಕೊಳ್ಳುವತ್ತ ಅವರ ಗಮನವಿರುತ್ತದೆ.
ಇದನ್ನೂ ಓದಿ:ರೆಹಮಾನ್- ಸೈರಾ ಬಾನುವಿನಿಂದ ಬಿಲ್ಗೇಟ್ಸ್ವರೆಗೆ ; ದೀರ್ಘಕಾಲದ ದಾಂಪತ್ಯಗಳು ಮುರಿದು ಬೀಳುತ್ತಿರುವುದೇಕೆ?
ಫಲವಂತಿಕೆಯ ಮಟ್ಟ ಜಾರುತ್ತಿರುವುದು ಒಂದು ರೀತಿಯಲ್ಲಿ ದೇಶಕ್ಕೆ ಪಾಸಿಟಿವ್ ಅಂಶವು ಕೂಡ ಹೌದು
ಬದುಕಿನ ಗುಣಮಟ್ಟವನ್ನು ಸುಧಾರಿಸುತ್ತದೆ: ಚಿಕ್ಕ ಕುಟುಂಬ ಚೊಕ್ಕ ಕುಟುಂಬವು ನಮ್ಮ ಬದುಕಿನ ಶೈಲಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಕುಟುಂಬಗಳು ಉತ್ತಮ ಶಿಕ್ಷಣ, ಆರೋಗ್ಯ ಹಾಗೂ ಮನೆಯನ್ನು ಹೊಂದಲು ಇದು ಅನುಕೂಲ
ಸಂಪನ್ಮೂಲಗಳ ಸರಿಯಾದ ಸದ್ಭಳಕೆ: ಜನಸಂಖ್ಯೆಯ ಪ್ರಮಾಣ ಕುಸಿತ ಕಂಡಷ್ಟು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಬೀಳುವ ಒತ್ತಡಗಳು ಕಡಿಮೆಯಾಗುತ್ತವೆ. ಉದಾಹರಣೆಗೆ ನೀರಿನ ಪೂರೈಕೆ, ಮನೆಗಳಿಗಾಗಿ ಬೇಕಾಗುವ ಜಮೀನು ಹಾಗೂ ಇಂಧನ ಇವುಗಳನ್ನು ಪೂರೈಸುವ ಒತ್ತಡಗಳು ನಿರ್ಮೂಲನೆ ಆಗುತ್ತವೆ.
ಮಹಿಳಾ ಸಬಲೀಕರಣದ ಮೇಲೆ ಹೆಚ್ಚು ಗಮನ: ಸಣ್ಣ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಇರುವುದರಿಂದ ಅವರನ್ನು ಶೈಕ್ಷಣಿಕವಾಗಿ ಹೆಚ್ಚು ಬೆಳೆಸುವ ಶಕ್ತಿ ಬರುತ್ತದೆ. ಹೀಗಾಗಿ ದೇಶದಲ್ಲಿ ಮಹಿಳಾ ಸಬಲೀಕರಣ ಹೆಚ್ಚಾಗುತ್ತದೆ.
ಇನ್ನು ಫಲವಂತಿಕೆಯ ಮಟ್ಟ ಕುಸಿಯುವುದರಿಂದ ದೇಶಕ್ಕೆ ಹಲವು ಸಮಸ್ಯೆಗಳು ಕೂಡ ಇವೆ
ವಯಸ್ಸಾದವರ ಸಂಖ್ಯೆ ಹೆಚ್ಚಳ: ಇದೇ ಪರಿಸ್ಥಿತಿ ಮುಂದುವರಿದರೆ ಭಾರತದಲ್ಲಿ 2050ರ ವೇಳೆಗೆ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗಲಿದ್ದು ಇದು ಆರೋಗ್ಯ ಸಂಸ್ಥೆಗಳ ಮೇಲೆ ಹೆಚ್ಚು ಒತ್ತಡ ಬೀಳಲಿದೆ ಎಂದು ಹೇಳಲಾಗುತ್ತದೆ.
ದುಡಿಯುವ ಕೈಗಳ ಕೊರತೆ: ಫಲವಂತಿಕೆಯ ಕುಸಿತ ಉಂಟು ಮಾಡುವ ದೊಡ್ಡ ಸಮಸ್ಯೆ ಅಂದ್ರೆ ಅದು ಭವಿಷ್ಯದಲ್ಲಿ ದೇಶದಲ್ಲಿ ದುಡಿಯುವ ಕೈಗಳ ಕೊರತೆಯನ್ನುಂಟು ಮಾಡುತ್ತದೆ. ಅದರಲ್ಲೂ ಕೈಗಾರಿಕೋದ್ಯಮವು ಈ ಒಂದು ಹೊಡೆತದಿಂದ ಬಳಲುವುದು ನಿಶ್ಚಿತ
ದೇಶದಲ್ಲಿ ಯುವಜನರ ಕೊರತೆ: ಒಂದು ವೇಳೆ ಇದೇ ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ 25 ವರ್ಷದೊಳಗಿನ ಯುವಕರ ಕೊರೆತೆಯನ್ನು ದೇಶ ಭವಿಷ್ಯದಲ್ಲಿ ಎದುರಿಸಲಿದೆ. ಈಗಾಗಲೇ ಭಾರತ ತನ್ನ ಯುವ ಜನಸಂಖ್ಯಾ ಲಾಭವನ್ನು ಅತಿಯಾಗಿ ಪ್ರಯೋಜನ ಪಡೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಫಲವಂತಿಕೆ ಕೊರತೆಯಿಂದ ಅಥವಾ ಜನಸಂಖ್ಯೆಯ ಕುಸಿತದಿಂದ ಯುವಜನರ ಕೊರತೆ ದೇಶದಲ್ಲಿ ಉಂಟಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ