ಟೀಂ ಇಂಡಿಯಾ ಸೋಲಿಗೆ ಕಾರಣ ರಿವೀಲ್; ಸಚಿನ್ ನಿವೃತ್ತಿ ಬಳಿಕ ಇದೊಂದೇ ದೊಡ್ಡ ಪ್ರಾಬ್ಲಂ..!

author-image
Ganesh
Updated On
ಟೀಂ ಇಂಡಿಯಾ ಸೋಲಿಗೆ ಕಾರಣ ರಿವೀಲ್; ಸಚಿನ್ ನಿವೃತ್ತಿ ಬಳಿಕ ಇದೊಂದೇ ದೊಡ್ಡ ಪ್ರಾಬ್ಲಂ..!
Advertisment
  • ಟೀಮ್​ ಇಂಡಿಯಾಗೆ ಚೇಸಿಂಗ್​ ದೊಡ್ಡ ಪ್ರಾಬ್ಲಂ
  • ಸಚಿನ್​ ನಿರ್ಗಮನದ ಬಳಿಕ ಶುರುವಾಗಿದ್ದು ಸಮಸ್ಯೆ
  • 2013ರ ಬಳಿಕ ಗೆದ್ದಿರೋದು 2 ಪಂದ್ಯ ಮಾತ್ರ

ಟಾರ್ಗೆಟ್​ ದೊಡ್ಡ ಸವಾಲಿನದ್ದೇನಾಗಿರಲಿಲ್ಲ. ಸುಮಾರು 100ಕ್ಕೂ ಅಧಿಕ ಓವರ್​ಗಳು ಬಾಕಿ ಉಳಿದಿದ್ವು. ಒಂದು ಇಡೀ ದಿನ ಟೈಮ್​ ಕೂಡ ಇತ್ತು. ಟೀಮ್​ ಇಂಡಿಯಾ ಲಾರ್ಡ್ಸ್​​ ಟೆಸ್ಟ್​ನಲ್ಲಿ ವಿರೋಚಿತ ಸೋಲಿಗೆ ಗುರಿಯಾಯ್ತು. ಇದೇನು ಮೊದಲ ಬಾರಿಯಲ್ಲ, ಕಳೆದೊಂದು ದಶಕದ ವ್ಯಥೆ ಇದು. ಚೇಸಿಂಗ್​ ಬಂದ್ರೆ ಟೀಮ್​ ಇಂಡಿಯಾ ಪದೇ ಪದೆ ಮಕಾಡೆ ಮಲಗ್ತಿದೆ.

ಇಂಡೋ-ಇಂಗ್ಲೆಂಡ್​ ಲಾರ್ಡ್ಸ್​​ ಟೆಸ್ಟ್​ ಪಂದ್ಯ ಈಗ ಮುಗಿದ ಅಧ್ಯಾಯ. ಐಕಾನಿಕ್​ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಟೀಮ್​ ಇಂಡಿಯಾ ಪವರ್​ಫುಲ್​ ಹೋರಾಟ ನಡೆಸ್ತು. ಗೆಲುವಿನ ಗಡಿ ತಲುಪದೇ ಅಂತಿಮವಾಗಿ ನಿರಾಸೆ ಅನುಭವಿಸಿತು. ಹೋರಾಟ ನಡೆಸಿದ್ದು ಎಷ್ಟು ಸತ್ಯವೋ, ಸೋತಿದ್ದು ಕೂಡ ಅಷ್ಟೇ ಸತ್ಯ! ಕೇವಲ 193 ರನ್​ಗಳ ಟಾರ್ಗೆಟ್​ನ ವಿಶ್ವಶ್ರೇಷ್ಠ ತಂಡದ ಕೈಯಲ್ಲಿ ಬೆನ್ನತ್ತೋಕೆ ಆಗಲಿಲ್ಲ ಅಂದ್ರೆ ಏನ್ ಅರ್ಥ.

ಇದನ್ನೂ ಓದಿ: ಸೋತರೂ ಹೃದಯ ಗೆದ್ದ ಜಡೇಜಾ.. ಎಲ್ಲರಿಗೂ ಜಡ್ಡುನೇ ಬೇಕು, ಕ್ಯಾಪ್ಟನ್ಸ್​ ಫೇವರಿಟ್​​..!

ಟೀಮ್​ ಇಂಡಿಯಾಗೆ ಚೇಸಿಂಗ್​ ದೊಡ್ಡ ಪ್ರಾಬ್ಲಂ

ಲಾರ್ಡ್ಸ್​ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ತಂಡವನ್ನ ಟೀಮ್​ ಇಂಡಿಯಾ 192 ರನ್​ಗಳಿಗೆ ಯಶಸ್ವಿಯಾಗಿ ಕಟ್ಟಿ ಹಾಕಿತು. 4ನೇ ದಿನದಾಟದ ಕೊನೆಯ ಸೆಷನ್​ ಆರಂಭದಲ್ಲೇ ಇಂಗ್ಲೆಂಡ್​ನ ಆಲೌಟ್​ ಮಾಡಿದ ಟೀಮ್​ ಇಂಡಿಯಾಗೆ 193 ರನ್​ಗಳ ಟಾರ್ಗೆಟ್​ ಬೆನ್ನತ್ತೋಕೆ ಸುದೀರ್ಘ ಸಮಯವಿತ್ತು. 100ಕ್ಕೂ ಹೆಚ್ಚು ಓವರ್ಸ್​​ಗಳಿದ್ವು. ಏನ್​ ​ಮಾಡೋದು ವಿಕೆಟ್​ ಉಳಿಸಿಕೊಳ್ಳಲಿಲ್ಲ. ಪರಿಣಾಮ ಸೋಲಿಗೆ ಶರಣಾಗಬೇಕಾಯ್ತು. ಅಂದ್ಹಾಗೆ ಲಾರ್ಡ್ಸ್​ ಟೆಸ್ಟ್​ ಮಾತ್ರವಲ್ಲ.. ದಶಕದಿಂದಲೂ ಚೇಸಿಂಗ್​ ಬಂತಂದ್ರೆ, ಟೀಮ್​ ಇಂಡಿಯಾದ್ದು ಇದೇ ಕಥೆ.

ಸಚಿನ್​ ನಿರ್ಗಮನದ ಬಳಿಕ ಶುರುವಾಗಿದ್ದು ಸಮಸ್ಯೆ

ಸಚಿನ್​ ತೆಂಡುಲ್ಕರ್​ 2013ರಲ್ಲಿ ನಿವೃತ್ತಿ ಆದ್ರಲ್ವಾ ಆಗಿನಿಂದ ಈ ಚೇಸಿಂಗ್​ ಪ್ರಾಬ್ಲಂ ಟೀಮ್​ ಇಂಡಿಯಾಗಿದೆ. ನೀವು ನಂಬ್ತಿರೋ ಇಲ್ವೋ.. 2013ರ ಬಳಿಕ ಟೀಮ್​ ಇಂಡಿಯಾ 150+ ಟಾರ್ಗೆಟ್​ ಅನ್ನ ಟೆಸ್ಟ್​ನಲ್ಲಿ ಸಕ್ಸಸ್​​ಫುಲ್​ ಆಗಿ ಚೇಸ್​​ ಮಾಡಿರೋದು ಜಸ್ಟ್​ 2 ಬಾರಿ ಮಾತ್ರ. 2021ರಲ್ಲಿ ಬ್ರಿಸ್ಬೇನ್​ನಲ್ಲಿ ಆಸಿಸ್​ ವಿರುದ್ಧ ಒಂದಾದ್ರೆ, 2024ರ ಇಂಗ್ಲೆಂಡ್​​ ವಿರುದ್ಧದ ರಾಂಚಿ ಟೆಸ್ಟ್​ ಮತ್ತೊಂದು.

2013ರ ಬಳಿಕ ಭಾರತದ 150+ ಚೇಸ್​

2013 ಬಳಿಕ ಒಟ್ಟು 26 ಪಂದ್ಯಗಳಲ್ಲಿ ಟೀಮ್​ ಇಂಡಿಯಾ 150ಕ್ಕೂ ಹೆಚ್ಚಿನ ಟಾರ್ಗೆಟ್​ ಚೇಸ್​ ಮಾಡಿದೆ. ಈ ಪೈಕಿ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಬಿಟ್ರೆ 17 ಪಂದ್ಯಗಳಲ್ಲಿ ಸೋಲುಂಡಿದೆ. ಇನ್ನುಳಿದ 7 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

ಇದನ್ನೂ ಓದಿ: ಕರುಣ್ ನಾಯರ್​ ಸ್ಥಾನಕ್ಕಾಗಿ ರೇಸ್​​ನಲ್ಲಿ 4 ಯಂಗ್​ ಪ್ಲೇಯರ್ಸ್​.. ವಿಶ್ವಾಸ ಕಳೆದುಕೊಂಡ್ರಾ ಕನ್ನಡಿಗ?

ಕೆಲ ಬ್ಯಾಟ್ಸ್​ಮನ್​ಗಳ ಮೇಲೆ ಮಾತ್ರ ಡಿಪೆಂಡ್

ಟೀಮ್​ ಇಂಡಿಯಾ ಚೇಸಿಂಗ್​ನಲ್ಲಿ ಪದೇಪದೆ ಫೇಲ್​ ಆಗ್ತಿರೋದಕ್ಕೆ ಬಹು ಮುಖ್ಯ ಕಾರಣವೇ ಇದು. ಲಾರ್ಡ್ಸ್​ ಟೆಸ್​​ ಕೂಡ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​​. ಟೀಮ್​ ಇಂಡಿಯಾದ ಬ್ಯಾಟಿಂಗ್​ ಯುನಿಟ್​ನಿಂದ ಸಂಘಟಿತ ಹೋರಾಟವೇ ಬರ್ತಿಲ್ಲ. ಕೆಲವೇ ಕೆಲವು ಬ್ಯಾಟ್ಸ್​ಮನ್​ಗಳ ಮೇಲೆ ಡಿಪೆಂಡ್​ ಆಗ್ತಿದೆ. ಈ ಹಿಂದೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾರಂತಾ ಆಟಗಾರರಾದ್ರೆ, ಈಗ ಶುಭ್​ಮನ್​ ಗಿಲ್​, ಕೆ.ಎಲ್​ ರಾಹುಲ್​, ರಿಷಭ್​ ಪಂತ್​ ರಂತಾ ಆಟಗಾರರ ಮೇಲೆ ತಂಡ ಡಿಪೆಂಡ್​ ಆಗಿದೆ.

ದಿಢೀರ್​ ಕುಸಿತ, ಒತ್ತಡ ನಿಭಾಯಿಸುವಲ್ಲಿ ವಿಫಲ

ಚೇಸಿಂಗ್​ ವೇಳೆ ಟೀಮ್​ ಇಂಡಿಯಾಗೆ ದೊಡ್ಡ ಹೊರೆಯಾಗ್ತಿರೋದೆ ಈ ದಿಢೀರ್​ ಕುಸಿತ. ಇಂಗ್ಲೆಂಡ್​ ಪ್ರವಾಸದಲ್ಲೂ ಇದು ಪದೇ ಪದೇ ಕಾಣ್ತಿದೆ. ದಿಢೀರ್​ ಕುಸಿತವಾದ್ರೆ, ಉಳಿದ ಆಟಗಾರರ ಒತ್ತಡ ಹೆಚ್ಚಾಗ್ತಿದೆ. ಒತ್ತಡ ಅಂತಿಮವಾಗಿ ಸೋಲಿನೊಂದಿಗೆ ಅಂತ್ಯವಾಗ್ತಿದೆ. ಲಾರ್ಡ್ಸ್​ ಟೆಸ್ಟ್​ನಲ್ಲೂ ಆಗಿದ್ದು ಇದೇ. 4ನೇ ದಿನದಾಟದ ಅಂತ್ಯದಲ್ಲೇ 4 ವಿಕೆಟ್​ ಕಳೆದುಕೊಂಡ ಪರಿಣಾಮ ಉಳಿದ ಆಟಗಾರರ ಮೇಲೆ ಒತ್ತಡ ಹೆಚ್ಚಾಯ್ತು. ಆ ಒತ್ತಡವನ್ನ ನಿಭಾಯಿಸುವಲ್ಲಿ ಆಟಗಾರರು ಫೇಲ್​ ಆದ್ರು.

ದೊಡ್ಡ ಜೊತೆಯಾಟಗಳ ಕೊರತೆ

ಟೆಸ್ಟ್​ ಕ್ರಿಕೆಟ್​ನಲ್ಲಿ ಪಾರ್ಟನರ್​ಶಿಪ್​ಗಳೇ ಕೀ. ಒಂದೊಳ್ಳೆ ಜೊತೆಯಾಟ ಬಂದ್ರೆ ಒಂದಿಡಿ ಸೆಷನ್​ನ ಡಾಮಿನೇಟ್​ ಮಾಡಬಹುದು. ಎದುರಾಳಿ ತಂಡವನ್ನ ಒತ್ತಡಕ್ಕೆ ಸಿಲುಕಿಸಬಹುದು. ಟೀಮ್​ ಇಂಡಿಯಾಗೆ ಪಾರ್ಟ್​​ನರ್​​ಶಿಪ್​ನ ಕೊರತೆ ಕಾಡ್ತಿದೆ. ಈ ಹಿಂದಿನ ಎಡ್ಜ್​ಬಾಸ್ಟನ್​ ಟೆಸ್ಟ್​ನಲ್ಲಿ ಜೊತೆಯಾಟಗಳು ಗೆಲುವಿಗೆ ದಾರಿ ಮಾಡಿಕೊಟ್ಟಿದ್ವು. ಲಾರ್ಡ್ಸ್​ ಟೆಸ್ಟ್​ನಲ್ಲೂ ಕೆ.ಎಲ್.ರಾಹುಲ್​-ರಿಷಭ್​ ಪಂತ್​​ ಜೊತೆಯಾಟ ಫಸ್ಟ್​ ಇನ್ನಿಂಗ್ಸ್​ನಲ್ಲಿ ಮೇಲುಗೈ ತಂದುಕೊಟ್ಟಿತ್ತು. 2ನೇ ಇನ್ನಿಂಗ್ಸ್​ನಲ್ಲಿ ಇಂತಹ ಪಾರ್ಟ್​​ನರ್​​ಶಿಪ್​ ಬರಲೇ ಇಲ್ಲ.

ಕ್ರಿಕೆಟ್​ ಅನ್ನೋದು ಟೀಮ್​ ಗೇಮ್​. ಸಂಘಟಿತ ಹೋರಾಟಕ್ಕೆ ಯಶಸ್ಸು ಸಿಗುತ್ತೆ. ಟೀಮ್​ ಇಂಡಿಯಾ ಕೆಲವರ ಮೇಲೆ ಮಾತ್ರ ಡಿಪೆಂಡ್​ ಆಗಿರೋದು ಓಪನ್​ ಸೀಕ್ರೆಟ್​​. ಗೆಲುವಿಗಾಗಿ ತಂಡದಲ್ಲಿರೋ ಕೆಲ ಆಟಗಾರರನ್ನ ಮಾತ್ರ ಕಳೆದೊಂದು ದಶಕದಿಂದ ನೆಚ್ಚಿಕೊಂಡಿದೆ ಅನ್ನೋದನ್ನ ಚೇಸಿಂಗ್​ನ ಅಂಕಿ-ಅಂಶಗಳೇ ರಿವೀಲ್​ ಮಾಡ್ತಿವೆ. ಲಾರ್ಡ್ಸ್​​ ಟೆಸ್ಟ್​ ತಪ್ಪುಗಳನ್ನ ಮತ್ತೊಮ್ಮೆ ಎತ್ತಿ ಹಿಡಿದಿದೆ. ಮುಂದಾದ್ರೂ ಈ ವಿಚಾರದಲ್ಲಿ ಟೀಮ್​ ಇಂಡಿಯಾ ಎಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ಓದಿ: ಲಾರಿಗೆ ಡಿಕ್ಕಿ.. ಹೊಸೂರಲ್ಲಿ ಮೂವರು ವಿದ್ಯಾರ್ಥಿಗಳು ದುರಂತ ಅಂತ್ಯ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment