/newsfirstlive-kannada/media/post_attachments/wp-content/uploads/2025/07/hydrogen_trains.jpg)
ಚೆನ್ನೈ: ದೇಶದ ಮೊಟ್ಟ ಮೊದಲ ಹೈಡ್ರೋಜನ್ ಚಾಲಿತ ರೈಲು ಪರೀಕ್ಷೆಯನ್ನು ಭಾರತದ ರೈಲ್ವೆ ಇಲಾಖೆಯೂ ಯಶಸ್ವಿಯಾಗಿ ನೆರವೇರಿಸಿದೆ. ಈ ವರ್ಷದ ಕೊನೆಯಲ್ಲಿ ಉತ್ತರ ರೈಲ್ವೆ ಮಾರ್ಗದಲ್ಲಿ ಹೈಡ್ರೋಜನ್ ಚಾಲಿತ ರೈಲು ಸಂಚಾರ ಮಾಡಲಿದೆ. ಈ ಮೂಲಕ ಭಾರತ ರೈಲ್ವೆ ಇಲಾಖೆಯೂ ಹೊಸ ಇತಿಹಾಸ ಬರೆಯಲಿದೆ.
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಮೊದಲ ಹೈಡ್ರೋಜನ್ ಚಾಲಿತ ಕೋಚ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಇನ್ನೊಂದು ವಿಶೇಷ ಎಂದರೆ ಇದು ಸ್ವದೇಶಿಯವಾಗಿ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಲಾಗಿದೆ. ಈಗೀರುವ ಎಲ್ಲ ರೈಲುಗಳಿಗಿಂತ ಇದು ಹೆಚ್ಚು ಪರಿಸರಕ್ಕೆ ಉಪಯುಕ್ತ ಟ್ರೈನ್ ಆಗಿದೆ. ಅಂದರೆ ಪರಿಸರಕ್ಕೆ ಹೆಚ್ಚಿನ ಮಾಲಿನ್ಯವನ್ನ ಉಂಟು ಮಾಡುವುದಿಲ್ಲ. ಹೈಡ್ರೋಜನ್ ಇಂಧನ ಕೋಶದ ತಂತ್ರಜ್ಞಾನ (Hydrogen Fuel Cell Technology)ದ ಆಧಾರದ ಮೇಲೆ ಹೈಡ್ರೋಜನ್ ರೈಲು ಕಾರ್ಯನಿರ್ವಹಿಸುತ್ತದೆ.
ಎಷ್ಟು ದೂರ ಈ ರೈಲನ್ನು ಪರೀಕ್ಷೆ ಮಾಡಲಾಗಿದೆ?
ಈಗಾಗಲೇ ಈ ಹೈಡ್ರೋಜನ್ ಟ್ರೈನ್ಗಳು ವಿಶ್ವದಲ್ಲಿ ಕೆಲವು ದೇಶಗಳಲ್ಲಿ ಸಂಚಾರ ಮಾಡುತ್ತಿವೆ. ಸ್ವೀಡನ್, ಜರ್ಮನಿ, ಚೀನಾ ಮತ್ತು ಫ್ರಾನ್ಸ್ ಹೈಡ್ರೋಜನ್ ಚಾಲಿತ ರೈಲುಗಳು ಸಂಚಾರ ಮಾಡುತ್ತಿದ್ದು ಈ ಸಾಲಿಗೆ ಈಗ ಭಾರತ ಕೂಡ ಸೇರಿಕೊಳ್ಳಲಿದೆ. ಭಾರತ ಸದ್ಯ 1200 ಹಾರ್ಸ್ಪವರ್ (Horse Power) ಹೊಂದುವಂತಹ ಅತ್ಯಾಧುನಿ ತಂತ್ರಜ್ಞಾನ ಇರುವ ರೈಲನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿದೆ.
ಇನ್ನು ಹೈಡ್ರೋಜನ್ ಚಾಲಿತ ರೈಲನ್ನು ಹರಿಯಾಣದ ಜಿಂದ್-ಸೋನಿಪಾತ್ವರೆಗೆ ಟೆಸ್ಟ್ ಮಾಡಲಾಗಿದೆ. ಒಟ್ಟು 89 ಕಿಲೋ ಮೀಟರ್ ಅಷ್ಟು ದೂರ ಈ ಪರೀಕ್ಷೆ ಮಾಡಲಾಗಿದ್ದು ಎಲ್ಲದರಲ್ಲೂ ಫಲಿತಾಂಶ ಉತ್ತಮ ಮಟ್ಟದಲ್ಲಿ ಬಂದಿದೆ. ಹೀಗಾಗಿ ಈ ವರ್ಷದ ಕೊನೆಯಲ್ಲಿ 8 ಬೋಗಿಗಳನ್ನು ಹೊಂದಿರುವಂತಹ ನಾನ್ ಎಸಿ ಹೈಡ್ರೋಜನ್ ಚಾಲಿತ ರೈಲು ಉತ್ತರ ರೈಲ್ವೆ ಮಾರ್ಗದಲ್ಲಿ ಸಂಚಾರ ಮಾಡಲಿದೆ.
ಇದನ್ನೂ ಓದಿ:ಅಚ್ಚರಿ ಅನಿಸಿದರೂ ಇದು ಸತ್ಯ.. 1 ವರ್ಷದ ಮಗು ಕಚ್ಚಿದ್ದಕ್ಕೆ ಸ್ಥಳದಲ್ಲೇ ಜೀವ ಬಿಟ್ಟ ನಾಗರ ಹಾವು!
ಪ್ರತಿ ಹೈಡ್ರೋಜನ್ ಟ್ರೈನ್ ಬೆಲೆ ಎಷ್ಟು?
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 2023ರಲ್ಲಿ ರಾಜ್ಯಸಭೆಯಲ್ಲಿ ಮಾತನಾಡುತ್ತ, 35 ಹೈಡ್ರೋಜನ್ ರೈಲುಗಳನ್ನು ಗುಡ್ಡಾಗಾಡು ಪ್ರದೇಶಗಳಲ್ಲಿ ಸಂಚಾರ ಮಾಡಲಿವೆ. ಇದರಲ್ಲಿ ಪ್ರತಿ ರೈಲಿಗೆ 80 ಕೋಟಿ ರೂಪಾಯಿ ಖರ್ಚು ಆಗಲಿದೆ. ಅದರಂತೆ ರೈಲು ಓಡಾಡಲು ಬೇಕಾದ ನೆಲದ ಮೂಲ ಸೌಕರ್ಯ ಕಾಮಗಾರಿಗೆ 70 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಪ್ರಸ್ತುತ ಈ ಯೋಜನೆಗೆ ಬಜೆಟ್ನಲ್ಲಿ 2,800 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ. ಸದ್ಯಕ್ಕೆ 111.83 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಹೇಳಿದ್ದರು.
ಸಾಂಪ್ರದಾಯಿಕ ಡೀಸೆಲ್ ಮತ್ತು ವಿದ್ಯುತ್ ಲೋಕೋಮೋಟಿವ್‌ಗಳಿಗೆ ಹೋಲಿಸಿದರೆ ಹೈಡ್ರೋಜನ್ ರೈಲುಗಳು ಅತ್ಯಂತ ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ಆಗಿವೆ. ಸಾಂಪ್ರದಾಯಿಕ ರೈಲುಗಳಿಗಿಂತ ಭಿನ್ನವಾಗಿವೆ. ಹೈಡ್ರೋಜನ್ ಚಾಲಿತ ರೈಲು ಇಂಗಾಲದ ಡೈಆಕ್ಸೈಡ್‌ನಂತಹ ಹಾನಿಕಾರಕ ಅನಿಲ ಹೊರಸೂಸುವುದಿಲ್ಲ. ಏಕೆಂದರೆ ಈ ರೈಲಿನಲ್ಲಿ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ