/newsfirstlive-kannada/media/post_attachments/wp-content/uploads/2024/12/5-CRORE-RUPEES.jpg)
ಆಲಿಯಾ ಭಟ್, ದೀಪಿಕಾ ಪಡುಕೊಣೆ, ಜಾಹ್ನವಿ ಕಪೂರ್ ಇಂತಹ ಸ್ಟಾರ್ ನಟಿಯರೆಲ್ಲಾ ಜಾಹೀರಾತಿಗಾಗಿ ಕೋಟಿ, ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ದೊಡ್ಡ ದೊಡ್ಡ ಬ್ರ್ಯಾಂಡ್ಗಳಿಗೆ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುತ್ತಾರೆ. ಇದು ಹೆಚ್ಚು ಕಡಿಮೆ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ಇವರೆಲ್ಲರಿಗಿಂತ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಅಂತ ಗೊತ್ತಿರೋದು ತುಂಬಾ ಕಡಿಮೆ ಜನರಿಗೆ. ಆ ನಟಿ ದಕ್ಷಿಣ ಭಾರತದವರು. ಈ ಬಹುಭಾಷಾ ನಟಿಯು 50 ಸೆಕೆಂಡ್ನ ಒಂದು ಜಾಹೀರಾತಿಗೆ 5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಆ ನಟಿ ಯಾರು ಅಂತ ನಿಮಗೆ ಗೊತ್ತಾ? ಅದು ಬೇರೆ ಯಾರು ಅಲ್ಲ ಬಹುಭಾಷಾ ತಾರೆ ನಯನತಾರಾ.
ಇದನ್ನೂ ಓದಿ:KGF2, RRR ರೆಕಾರ್ಡ್ ಬ್ರೇಕ್ ಮಾಡಿದ ಪುಷ್ಪ2.. ಅಲ್ಲು ಅರ್ಜುನ್ ಮುಂದಿನ ಟಾರ್ಗೆಟ್ ಪ್ರಭಾಸ್
ಹಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ನಯನತಾರಾ ಸದ್ಯಕ್ಕೆ ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಈ ನಟಿ ಜವಾನ್ ಒಂದು ಸಿನಿಮಾಗೆ 11 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇತ್ತೀಚೆಗೆ ಬಂದ ಒಂದು ವರದಿಯಲ್ಲಿ ನಯನತಾರಾ ಒಂದು ಆ್ಯಡ್ ಅಂದ್ರೆ ಜಾಹೀರಾತಿಗೆ 50 ಸೆಕೆಂಡ್ಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಈ ಸೂಪರ್ಸ್ಟಾರ್ ನಟಿ ಇತ್ತೀಚೆಗೆ ಟಾಟಾ ಸ್ಕೈ ಬ್ರ್ಯಾಂಡ್ ಆ್ಯಡ್ಗಾಗಿ ಸುಮಾರು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಒಂದು ಜಾಹೀರಾತು ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿತ್ತು.
ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮೊದಲು ನಯನತಾರಾ ಪಾರ್ಟ್ ಟೈಮ್ ಮಾಡಲಿಂಗ್ ಮಾಡುತ್ತಿದ್ದರು ಹಾಗೂ ನಿರೂಪಕಿಯಾಗಿಯೂ ಹಲವು ಶೋಗಳನ್ನು ನಡೆಸಿಕೊಡುತ್ತಿದ್ದರು. ಮೊದಲ ಬಾರಿ ಮನಸ್ಸಿನಕ್ಕರೆ ಅನ್ನೋ ಮಲಯಾಳಂ ಸಿನಿಮಾದ ಮೂಲಕ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದರು. ಮೊದಲ ಸಿನಿಮಾದಲ್ಲಿ ದೊಡ್ಡ ಹಿಟ್ ಆಗಿತ್ತು. ಮೊದಲ ಸಿನಿಮಾವೇ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವ ವಿಷಯದಲ್ಲಿ ನಯನತಾರಾ ಸಿನಿಮಾ ಮಾಡುವ ವಿಷಯದಲ್ಲಿ ಆಲಿಯಾ, ಕರೀನಾ ಕಪೂರ್, ಕತ್ರಿನಾ ಕೈಫ ಇವರೆಲ್ಲರಿಗಿಂತ ಮುಂದೆ ಇದ್ದಾರೆ. ಲಕ್ಷ್ಮೀ ತುಳಸಿ ಮತ್ತು ಸಿಂಹ ಸಿನಿಮಾದ ಬಳಿಕ ನಯನತಾರಾಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಬೆಳೆಯಿತು.
ಇನ್ನು ಅವರ ವೈಯಕ್ತಿಕ ಬದುಕಿನ ಬಗ್ಗೆ ನೋಡೊದಾದ್ರೆ, ನಯನತಾರಾ ಈಗ ಎರಡು ಮಕ್ಕಳ ತಾಯಿ. ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿದ್ದಾರೆ. ಅನೇಕರಿಗೆ ಗೊತ್ತಿಲ್ಲ ನಯನತಾರಾ ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಪಡೆದಿದ್ದಾರೆ ಅನ್ನೋ ವಿಚಾರ.
ಇದನ್ನೂ ಓದಿ:ಆಸ್ಪತ್ರೆಯಿಂದ ಮನೆಗೆ ಹೋಗದೆ ಸೆಷನ್ ಕೋರ್ಟ್‌ಗೆ ತೆರಳಿದ ನಟ ದರ್ಶನ್; ಕಾರಣವೇನು?
ನಯನತಾರಾ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿರುವ ಶಾರುಖ್ ನಟನೆಯ ಜವಾನ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಯನತಾರಾ 11 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸಿನಿಮಾಗಳಲ್ಲಿ ನಟನೆಯ ಜೊತೆ ಜೊತೆಗೆ ನಯನತಾರಾ 9ಸ್ಕಿನ್ ಎಂಬ ಬ್ಯೂಟಿ ಬ್ರ್ಯಾಂಡ್ಗೆ ಪ್ರಮೋಷನ್ ಕೂಡ ಮಾಡುತ್ತಾರೆ. ಮುಂಬೈನಲ್ಲಿ 4 ಬಿಹೆಚ್ಕೆ ಫ್ಲಾಟ್ ಹೊಂದಿರುವ ನಯನತಾರಾ ಅವರ ಪತಿ ವಿಘ್ನೇಶ್ ಅವರೊಂದಿಗೆ ವಾಸ ಮಾಡುತ್ತಾರೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ ಅವರು ವಾಸಿಸುತ್ತಿರುವ ಬಂಗಲೆ ಸುಮಾರು 100 ಕೋಟಿ ರೂಪಾಯಿ ಬೆಲೆ ಬಾಳುತ್ತೆ ಎಂದು ಹೇಳಲಾಗಿದೆ. ಜೊತೆಗೆ ನಯನತಾರಾ 50 ಕೋಟಿ ರೂಪಾಯಿ ಮೌಲ್ಯದ ಖಾಸಗಿ ವಿಮಾನವನ್ನು ಕೂಡ ಹೊಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ