newsfirstkannada.com

ಸಂಜು, ಪ್ರಸಿದ್ಧ್ ಕೃಷ್ಣಗೆ ಇಲ್ಲ ಚಾನ್ಸ್​; ಗಂಗೂಲಿ ಪ್ರಕಟಿಸಿದ ವಿಶ್ವಕಪ್ ತಂಡದಲ್ಲಿ ಯಾರಿಗೆಲ್ಲ ಅವಕಾಶ..?

Share :

26-08-2023

  ಅಕ್ಟೋಬರ್ 5 ರಿಂದ ಭಾರತದಲ್ಲಿ ವಿಶ್ವಕಪ್ ಹಬ್ಬ

  ತಂಡದ ಆಯ್ಕೆ ಬಗ್ಗೆ ಶುರುವಾಗಿ ಬಿಸಿಬಿಸಿ ಚರ್ಚೆ

  ಗಂಗೂಲಿ ಅಭಿಪ್ರಾಯದಲ್ಲಿ ಯಾರೆಲ್ಲ ಇರಬೇಕು?

ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಆಯ ದೇಶಗಳ ತಂಡಗಳಲ್ಲಿ ಲೆಕ್ಕಾಚಾರಗಳು ಶುರುವಾಗಿದೆ. ಈ ಬಾರಿ ವಿಶ್ವಕಪ್ ಮುತ್ತಿಡಲು ಯಾವೆಲ್ಲ ಆಟಗಾರನನ್ನು ಹಾಕಿಕೊಳ್ಳಬೇಕು? ಯಾರೆಲ್ಲ ಬೇಡ ಹೇಗೆ ತಂಡವನ್ನು ಮ್ಯಾನೇಜ್ ಮಾಡಬೇಕು ಅನ್ನೋದ್ರ ಕುರಿತು ಚರ್ಚೆ ನಡೆಯುತ್ತಿವೆ.

ಇದು ಭಾರತದಲ್ಲೂ ಹೊರತಾಗಿಲ್ಲ. ಇದೀಗ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಭಾರತ ವಿಶ್ವಕಪ್ ಗೆಲ್ಲಲು ಯಾರೆಲ್ಲ ಇರಬೇಕು ಎಂದು ತಿಳಿಸಿದ್ದಾರೆ. ಖಾಸಗಿ ವಾಹಿನಿ ಒಂದಕ್ಕೆ ಮಾತನಾಡಿರುವ ಗಂಗೂಲಿ, ತಮ್ಮ ಪ್ರಕಾರ ತಂಡದಲ್ಲಿ ಯಾರೆಲ್ಲ ಇರಬೇಕು ಎಂದು ತಿಳಿಸಿದ್ದಾರೆ.

ಹೇಗಿದೆ ಗಂಗೂಲಿ ತಂಡ..?

ರೋಹಿತ್ ಶರ್ಮಾ, ಶುಬ್​ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಜಸ್​​ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಸಿರಾಜ್ ಮತ್ತು ಶಾರ್ದುಲ್ ಠಾಕೂರ್​​ ಗಂಗೂಲಿ ತಂಡದಲ್ಲಿದ್ದಾರೆ.

ವಿಶೇಷ ಅಂದರೆ ಏಷ್ಯಾಕಪ್​​ಗೆ ಆಯ್ಕೆ ಆಗಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್​​ಗೆ ಗಂಗೂಲಿ ಸ್ಥಾನ ನೀಡಿಲ್ಲ. ಇನ್ನು, ಗಾಯದ ಸಮಸ್ಯೆ ಉಂಟಾದರೆ ತಿಲಕ್ ವರ್ಮಾ ಹಾಗೂ ಪ್ರಸಿದ್ಧ್ ಕೃಷ್ಣ ಅವರನ್ನು ಬೆಂಚ್​​ಗೆ ಕಾದಿರಸಬಹುದು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್​ ಆಗಿ ಪರಿಗಣಿಸಿದ್ದಾರೆ, ಆದರೆ ಕೆ.ಎಲ್​.ರಾಹುಲ್ ಅನುಪಸ್ಥಿತಿಯಲ್ಲಿ ಅವರನ್ನು ಆಡಿಸಬಹುದು ಎಂದಿದ್ದಾರೆ. ಅಂದಹಾಗೆ ಭಾರತ ತಂಡದ ವಿಶ್ವಕಪ್ ದಂಡಯಾತ್ರೆ ಅಕ್ಟೋಬರ್ 8 ರಿಂದ ಶುವಾಗಲಿದೆ. ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸಂಜು, ಪ್ರಸಿದ್ಧ್ ಕೃಷ್ಣಗೆ ಇಲ್ಲ ಚಾನ್ಸ್​; ಗಂಗೂಲಿ ಪ್ರಕಟಿಸಿದ ವಿಶ್ವಕಪ್ ತಂಡದಲ್ಲಿ ಯಾರಿಗೆಲ್ಲ ಅವಕಾಶ..?

https://newsfirstlive.com/wp-content/uploads/2023/08/GANGULY.jpg

Load More