ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಆಗಸ್ಟ್ 15; ಈ ದಿನವನ್ನು ನಿರ್ಧರಿಸಿದ್ದು ಹೇಗೆ ಗೊತ್ತಾ..?

author-image
Ganesh
Updated On
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಆಗಸ್ಟ್ 15; ಈ ದಿನವನ್ನು ನಿರ್ಧರಿಸಿದ್ದು ಹೇಗೆ ಗೊತ್ತಾ..?
Advertisment
  • ದೇಶದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಜೋರಾಗಿದೆ
  • ಸ್ವಾತಂತ್ರ್ಯಕ್ಕಾಗಿ ಆಗಸ್ಟ್ 15 ಅನ್ನು ನಿರ್ಧರಿಸಿದ್ದು ಯಾರು?
  • ಆಗಸ್ಟ್ 15, 1947ರಂದು ಬ್ರಿಟಿಷ್ ತನ್ನ ವಸಾಹತು ಕೊನೆಗೊಳಿಸಿದೆ

ಭಾರತ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಕರೆಯಲ್ಪಡುವ ಭಾರತವು ಒಂದು ಕಾಲದಲ್ಲಿ ಬ್ರಿಟಿಷರ ವಸಾಹತುವಾಗಿತ್ತು. ದೊಡ್ಡ, ದೊಡ್ಡ ಮತ್ತು ಶಕ್ತಿಯುತ ದೇಶಗಳು ಸಣ್ಣ ದೇಶಗಳನ್ನು ಆಕ್ರಮಿಸಿ ಅವುಗಳ ಮೇಲೆ ಆಳ್ವಿಕೆ ನಡೆಸುತ್ತಿದ್ದವು.

ಬ್ರಿಟಿಷರ ಮುಷ್ಟಿಯಿಂದ ತಪ್ಪಿಸಿಕೊಂಡು ಸ್ವಾತಂತ್ರ್ಯ ಪಡೆಯಲು ಭಾರತ ದೀರ್ಘ ಕಾಲದವರೆಗೆ ಹೋರಾಟ ನಡೆಸಿತ್ತು. ಇದಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಸ್ವಾತಂತ್ರ್ಯ ಹೋರಾಟಗಾರರು 1930ರಲ್ಲಿಯೇ ದೇಶದಲ್ಲಿ ಸ್ವಾತಂತ್ರ್ಯ ಘೋಷಿಸಿದ್ದರು. ಆದರೆ ಸಂಪೂರ್ಣ ಸ್ವಾತಂತ್ರ್ಯವನ್ನು 15 ಆಗಸ್ಟ್ 1947 ರಂದು ಸಾಧಿಸಲಾಯಿತು.

ಸ್ವಾತಂತ್ರ್ಯಕ್ಕಾಗಿ ಆಗಸ್ಟ್ 15 ಅನ್ನು ನಿರ್ಧರಿಸಿದ್ದು ಹೇಗೆ?
ಫ್ರೆಂಚ್ ಬರಹಗಾರ ಡೊಮಿನಿಕ್ ಲ್ಯಾಪಿಯರ್ (Dominique Lapierre) ಮತ್ತು ಲ್ಯಾರಿ ಕಾಲಿನ್ಸ್ (Larry Collins) ಅವರ ‘ಫ್ರೀಡಮ್ ಅಟ್ ಮಿಡ್​ನೈಟ್’ ಪುಸ್ತಕದಲ್ಲಿ ಭಾರತದ ಸ್ವಾತಂತ್ರ್ಯದ ದಿನಾಂಕವನ್ನು ಉಲ್ಲೇಖಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ನೀಡುವ ಸಂಬಂಧ ಅನೇಕ ಸಭೆಗಳು ನಡೆದವು. ಅಂದಿನ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್.. ಭಾರತದ ಸ್ವಾತಂತ್ರ್ಯದ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಭಾರತಕ್ಕೆ ಸ್ವಾತಂತ್ರ್ಯದ ದಿನಾಂಕ ನಿಗದಿಪಡಿಸಿದ್ದೀರಾ ಎಂಬ ಪ್ರಶ್ನೆ ಕೇಳಲಾಗಿತ್ತು.

ಇದನ್ನೂ ಓದಿ:ದುಲೀಪ್​ ಟ್ರೋಫಿಗೆ ತಂಡ ಪ್ರಕಟ; ತಂಡದಲ್ಲಿ ಟೀಂ ಇಂಡಿಯಾ ಸೂಪರ್​​ ಸ್ಟಾರ್​​ಗಳೇ ಹೆಚ್ಚು..!

publive-image

ಅದಕ್ಕೆ ಮೌಂಟ್‌ಬ್ಯಾಟನ್ ಬಳಿ ಉತ್ತರ ಇರಲಿಲ್ಲ. ಆದರೂ ಅದಕ್ಕೆ ಉತ್ತರಿಸುವುದು ಅಗತ್ಯವೆಂದು ಬ್ಯಾಟನ್ ಭಾವಿಸಿದ್ದರು. ಹೀಗಾಗಿ ಮುಂದುವರಿದು ಎರಡನೇ ಮಹಾಯುದ್ಧದ ಬಗ್ಗೆ ಪ್ರಸ್ತಾಪ ಮಾಡಿದರು. ಎರಡನೆಯ ಮಹಾಯುದ್ಧದಲ್ಲಿ ಜಪಾನ್ ತನಗೆ ಶರಣಾದ 15 ಆಗಸ್ಟ್ 1945ರ ದಿನವನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದ್ದರು. ಎರಡನೇ ವಿಶ್ವಯುದ್ಧದ ವೇಳೆ ಮೌಂಟ್‌ಬ್ಯಾಟನ್ ಆಗ್ನೇಯ ಏಷ್ಯಾದ ಕಮಾಂಡರ್‌ಗಳ ಮುಖ್ಯಸ್ಥರಾಗಿದ್ದರು.

ಎರಡನೇ ಮಹಾಯುದ್ಧದ ದಿನವನ್ನು ನೆನಪಿಸಿಕೊಂಡ ಮೌಂಟ್​ಬ್ಯಾಟನ್, ಭಾರತದ ಸ್ವಾತಂತ್ರ್ಯದ ದಿನಾಂಕವನ್ನು ಆಗಸ್ಟ್ 15, 1947 ಎಂದು ನಿಗದಿಪಡಿಸಿದರು. ಅದು ತಕ್ಷಣ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಘೋಷಣೆಯ ನಂತರ ಬ್ರಿಟಿಷ್ ಸಂಸತ್ತು ‘ಭಾರತೀಯ ಸ್ವಾತಂತ್ರ್ಯ ಕಾಯಿದೆ-1947’ ಅನುಮೋದನೆ ನೀಡಿತು. ‘ಭಾರತೀಯ ಸ್ವಾತಂತ್ರ್ಯ ಕಾಯಿದೆ 1947' ಅಡಿಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. 18 ಜುಲೈ 1947 ರಂದು ಬ್ರಿಟಿಷ್ ಸಂಸತ್ತಿನ ಎರಡೂ ಸದನಗಳು ಈ ಕಾಯಿದೆಯನ್ನು ಅಂಗೀಕರಿಸಿದ್ದವು. ಈ ಕಾಯಿದೆಯ ಅಡಿಯಲ್ಲಿ ಬ್ರಿಟಿಷ್ ಸರ್ಕಾರ ಆಗಸ್ಟ್ 15, 1947 ರಂದು ಭಾರತದಿಂದ ತನ್ನ ವಸಾಹತುವನ್ನು ಕೊನೆಗೊಳಿಸಿದೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್ ಬೆನ್ನಲ್ಲೇ ದುಲೀಪ್ ಟ್ರೋಫಿಗೆ ಕೈಕೊಟ್ಟ ಇನ್ನಿಬ್ಬರು ಸ್ಟಾರ್​​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment