/newsfirstlive-kannada/media/post_attachments/wp-content/uploads/2025/02/5Th-GEN-FIGHTER-JET.jpg)
ಬೆಂಗಳೂರಿನ ಏರೋ ಇಂಡಿಯಾ 2025ರ ಷೋನಲ್ಲಿ ರಷ್ಯಾದ ಅತ್ಯಾಧುನಿಕ ಫೈಟ್ ಜೆಟ್ ಭಾಗಿಯಾಗಿದೆ. ಇತ್ತೀಚಿಗೆ ಅಭಿವೃದ್ಧಿಪಡಿಸಿದ ಫೈಟರ್​ ಜೆಟ್-ಸುಖೋಯ್​ ನೋಡಿ ಜನರು ಫುಲ್ ಖುಷಿ ಪಟ್ಟಿದ್ದಾರೆ. ಜೊತೆಗೆ ಅಮೆರಿಕಾದ ಎಫ್​-35 ಫೈಟರ್ ಜೆಟ್ ಕೂಡ ಭಾಗಿಯಾಗಿತ್ತು. ಸುಖೋಯ್​-57 ಅಮೆರಿಕಾದ ಎಫ್​-35 ಯುದ್ಧ ವಿಮಾನವೂ ಕೂಡ ಭಾಗಿಯಾಗಿತ್ತು.
ಸುಖೋಯ್​ ಎಸ್​ಯು-57 ಹಾಗೂ ಅಮೆರಿಕಾದ ಎಫ್​-35 ಎರಡು ಕೂಡ 5ನೇ ಜನರೇಷನ್​ನ ಫೈಟರ್​ ಜೆಟ್​ಗಳು. ಭಾರತದ ಬಳಿ ಸದ್ಯ 5ನೇ ಫೈಟರ್​ ಜೆಟ್​ಗಳಿಲ್ಲ. ದೇಶಿಯವಾಗಿ 5ನೇ ಫೈಟರ್ ಜೆಟ್​ ನಿರ್ಮಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈಗಾಗಲೇ ಎಲ್​ಸಿಜಿ ತೇಜಸ್​, ಪ್ರಚಂಡ, ಸಿ295 ಅನ್ನು ದೇಶಿಯವಾಗಿ ನಿರ್ಮಾಣ ಮಾಡಲಾಗಿದೆ. ಇವುಗಳ ಜೊತೆ 5ನೇ ಜನರೇಷನ್ ಫೈಟರ್​ ಜೆಟ್​ ಅನ್ನು ಸ್ವದೇಶಿಯ ಉತ್ಪಾದನೆಯ ಗುರಿಯನ್ನು ಭಾರತ ಹೊಂದಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/02/5Th-GEN-FIGHTER-JET-1.jpg)
ಈ ಒಂದು ಗುರಿಯನ್ನು ಒಂದು ಕಾಲದಲ್ಲಿ ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿರಲಿಲ್ಲ. ಆದರೇ ಈಗ ಇದು ಭಾರತದಲ್ಲಿ ಸಾಧ್ಯವಾಗುತ್ತಿದೆ. ಈ ಹಣಕಾಸು ವರ್ಷದಲ್ಲಿ ಭಾರತದ ಸ್ವದೇಶಿ ರಕ್ಷಣಾ ಉತ್ಪಾದನೆ 1.6 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ. ಇದರಲ್ಲಿ 30 ಸಾವಿರ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ರಫ್ತು ಕೂಡ ಆಗಲಿದೆ. ಖಾಸಗಿ ರಂಗದ ಸಹಭಾಗಿತ್ವದಲ್ಲಿ 5ನೇ ಜನರೇಷನ್​ ಫೈಟರ್ ಜೆಟ್ ನಿರ್ಮಾಣ ಮಾಡುತ್ತೇವೆ, ಈಗಾಗಲೇ ಏರೋಸ್ಪೇಸ್ ಹಾಗೂ ರಕ್ಷಣಾ ರಂಗದಲ್ಲಿ ಖಾಸಗಿ ರಂಗವನ್ನು ಸಶಕ್ತೀಕರಣ ಮಾಡಿದ್ದೇವೆ. ಅದರಲ್ಲಿ ಅಭೂತಪೂರ್ವ ಯಶಸ್ಸನ್ನು ಕೂಡ ಕಂಡಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ನೀವೂ ಏರ್ ಶೋಗೆ ಹೋಗಬಹುದು.. ಒಂದು ಪಾಸ್​ಗೆ ಎಷ್ಟು ರೂಪಾಯಿ ಗೊತ್ತಾ..?
ಖಾಸಗಿ ರಂಗವೂ ದೇಶದ ರಕ್ಷಣಾ ವಲಯಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ.ಭಾರತದಲ್ಲಿ 5ನೇ ಜನರೇಷನ್ ಫೈಟರ್ ಜೆಟ್ ಡೆವಲಪ್ ಮೆಂಟ್ ಹಂತದಲ್ಲಿದೆ, ಈ ಭಾರಿಯ ಏರೋ ಇಂಡಿಯಾ ಶೋನಲ್ಲಿ ಭಾಗಿಯಾಗಿರುವ ಆಮೆರಿಕಾದ ಎಫ್-16, ಎಫ್-35 ಯುದ್ಧ ವಿಮಾನಗಳು, ಜೊತೆಗೆ ಕೆಸಿ-135 ಸ್ಟ್ರಾಟೋಟ್ಯಾಂಕರ್, ಬಿ-1 ಬಾಂಬರ್ ಪ್ರದರ್ಶನ ತೋರಿವೆ. ತನ್ನ ಅತ್ಯಾಧುನಿಕ ರಕ್ಷಣಾ ಉತ್ಪನ್ನ, ಅಡ್ವಾನ್ಸ್ ಏರ್ ಕ್ರಾಫ್ಟ್​ನ್ನು ಅಮೆರಿಕಾ ಪ್ರದರ್ಶಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us