/newsfirstlive-kannada/media/post_attachments/wp-content/uploads/2025/02/BANGALORE-TO-JODHAPUR-1.jpg)
ಬಸ್ ಪ್ರಯಾಣವೆಂದರೆ ಅದರ ದೂರ ಅಬ್ಬಬ್ಬಾ ಅಂದ್ರೆ 8 ರಿಂದ 12 ಗಂಟೆಗಳವರೆಗೂ ಇರುತ್ತೆ. ಟ್ರೇನ್​ನಂತೆ 24 ಗಂಟೆ.. 30 ಗಂಟೆ ಪ್ರಯಾಣ ಬಸ್​ನಲ್ಲಿ ಕಡಿಮೆ. ಎರಡು ಮೂರು ದಿನಗಳ ಸವಾರಿಯಂತೂ ಊಹಿಸಲು ಕೂಡ ಸಾಧ್ಯವಿಲ್ಲ. ಆದರೆ ಬೆಂಗಳೂರಿನಿಂದ ಹೊರಡುವ ಕೆಲವು ಬಸ್​ ಬರೋಬ್ಬರಿ 37 ಗಂಟೆಗಳ ಪ್ರಯಾಣ ಮಾಡುತ್ತವೆ. ಸುಮಾರು 1950 ಕಿಲೋ ಮೀಟರ್​ ನಿರಂತರವಾಗಿ ಕ್ರಮಿಸುತ್ತವೆ ಆ ಬಸ್​ಗಳು ಯಾವುದು ಗೊತ್ತಾ.
ಇದನ್ನು ಭಾರತದ ಅತ್ಯಂತ ದೀರ್ಘ ಪ್ರಯಾಣ ಕೈಗೊಳ್ಳುವ ಬಸ್ ಎಂದು ಹೇಳಲಾಗುತ್ತದೆ. ಅದು ಯಾವುದು? ಎಲ್ಲಿಂದ ಎಲ್ಲಿಗೆ ಹೊರಡುತ್ತೆ ಎನ್ನುವುದನ್ನು ಇಲ್ಲಿ ವಿವರಣೆ ಕೊಡ್ತೀವಿ ನೋಡಿ. ನೀವು ಇಲ್ಲಿಯವರೆಗೂ ಇಂತಹ ಬಸ್ ಪ್ರಯಾಣ ಮಾಡಿಲ್ಲವಾದರೆ ಅದರ ಬಗ್ಗೆ ಒಂದು ಮಾಹಿತಿಯನ್ನು ನಾವು ನಿಮಗೆ ಕೊಡ್ತೀವಿ.
ಈ ಒಂದು ಬಸ್​ ಬೆಂಗಳೂರಿನಿಂದ ರಾಜಸ್ಥಾನದ ಜೋಧಪುರದವರೆಗೂ ಪ್ರಯಾಣ ಮಾಡುತ್ತದೆ. ಇದು ದೇಶದ ಅತ್ಯಂತ ದೀರ್ಘ ಬಸ್​ ಪ್ರಯಾಣಗಳಲ್ಲಿ ಇದು ಕೂಡ ಒಂದು ಈ ಬೆಂಗಳೂರು-ಜೋಧ್‌ಪುರ ಬಸ್​, ಜೋಧ್‌ಪುರವನ್ನು ತಲುಪಲು ಹಲವು ನಗರಗಳನ್ನು ದಾಟಿಕೊಂಡು ಹೋಗುತ್ತದೆ. ಮುಂಬೈ, ಸೂರತ್, ಅಹ್ಮದಾಬಾದ್ ಹೀಗೆ ಹಲವು ದೊಡ್ಡ ದೊಡ್ಡ ಸಿಟಿಗಳನ್ನು ದಾಟಿಕೊಂಡು ಜೋಧ್‌ಪುರಕ್ಕೆ ಹೋಗುತ್ತದೆ.
ಇದನ್ನೂ ಓದಿ:ಘೋರ ದುರಂತ.. ತಾಯಿ, ತಂಗಿ ಜೊತೆ ಜೀವ ಬಿಟ್ಟ GST ಅಡಿಷನಲ್ ಕಮಿಷನರ್; 4 ದಿನದ ಬಳಿಕ ಬಯಲು!
ಇದು ಒಟ್ಟು ನಾಲ್ಕು ರಾಜ್ಯಗಳಲ್ಲಿ ಪ್ರಯಾಣ ಬೆಳೆಸಿದ ಬಳಿಕ ಜೋಧ್‌ಪುರ್ ಬಸ್ ನಿಲ್ದಾಣವನ್ನು ತಲುಪುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮಧ್ಯಪ್ರದೇಶ ದಾಟಿದ ಬಳಿಕ ರಾಜಸ್ಥಾನದ ಜೋಧ್‌ಪುರ ತಲುಪುತ್ತದೆ.
ಇದನ್ನೂ ಓದಿ:ತಮಿಳುನಾಡು ಒಂದೇ ಅಲ್ಲ.. ಕರ್ನಾಟಕದ ಈ ಜಲಾಶಯದ ನೀರಿನ ಮೇಲೆ ಕಣ್ಣಿಟ್ಟ ಮತ್ತೊಂದು ನೆರೆ ರಾಜ್ಯ..!
/newsfirstlive-kannada/media/post_attachments/wp-content/uploads/2025/02/BANGALORE-TO-JODHAPUR-2.jpg)
ಈ ಒಂದು ಬಸ್​ನಲ್ಲಿ ನೀವು ಪ್ರಯಾಣ ಮಾಡಿದರೆ, ಪ್ರಯಾಣದುದ್ದಕ್ಕೂ ಅದ್ಭುತ ಸುಂದರ ಪರಿಸರವನ್ನು ನೋಡುತ್ತೀರಿ. ಏಕೆಂದರೆ ಇದರಲ್ಲಿ ಒಮ್ಮೆ ಕುಳಿತರೆ ನೀವು ಬರೋಬ್ಬರಿ 1950 ಕಿಲೋ ಮೀಟರ್ ಸುದೀರ್ಘ ಪ್ರಯಾಣ ಮಾಡುತ್ತೀರಿ. ಸುಮಾರು 37 ಗಂಟೆಗಳನ್ನು ನೀವು ಬಸ್​ನಲ್ಲಿ ಕಳೆಯುತ್ತೀರಿ. ಸುಮಾರು 2381 ರೂಪಾಯಿ ನಿಮ್ಮ ಟಿಕೆಟ್ ವೆಚ್ಚ ಇದೆ. ಬಿಆರ್​ ಟ್ರಾವೆಲ್ಸ್, ಮ ಜಕಾರ್ ಟ್ರಾವೆಲ್ಸ್, ಎಂ. ಆರ್ ಟ್ರಾವೆಲ್ಸ್ ಹಾಗೂ ಜೈನ್ ಟ್ರಾವೆಲ್ಸ್ ಈ ಸುದೀರ್ಘ ಪ್ರಯಾಣದ ಸೇವೆಯನ್ನು ಒದಗಿಸುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us