/newsfirstlive-kannada/media/post_attachments/wp-content/uploads/2024/10/GLASS-BRIDGE.jpg)
ಕೇರಳದ ವಾಗಮೋನ್‌ನ (Vagamon) ಜನಪ್ರಿಯ ಗಾಜಿನ ಸೇತುವೆಯು (Glass Bridge) ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ. ಸುರಕ್ಷತೆಯ ಕಾರಣದಿಂದ 125 ದಿನಗಳವರೆಗೆ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಇರಲಿಲ್ಲ.
ನಿರ್ಬಂಧ ಹೇರಿದ ನಂತರ ಮಧ್ಯಂತರ ಸುರಕ್ಷತಾ ವರದಿಯನ್ನು ನೀಡಲು ಕೋಝಿಕ್ಕೋಡ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಸಾಕಷ್ಟು ಸಮಯವನ್ನು ತೆಗೆದುಕೊಂಡಿತು. ಅಗತ್ಯವಿರುವ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಶಿಫಾರಸು ಮಾಡಿತ್ತು.
/newsfirstlive-kannada/media/post_attachments/wp-content/uploads/2024/10/GLASS-BRIDGE-2.jpg)
3,600 ಅಡಿ ಎತ್ತರದಲ್ಲಿರುವ ಸೇತುವೆಯು ಪ್ರವಾಸಿಗರಿಗೆ ದೂರದ ಸ್ಥಳಗಳ ದೃಶ್ಯಗಳನ್ನು ಆನಂದಿಸಲು ಅವಕಾಶ ನೀಡುತ್ತದೆ. ಸ್ಕೈ ಸೈಕ್ಲಿಂಗ್, ಸ್ಕೈ ವಿಂಗ್, ದೈತ್ಯ ಸ್ವಿಂಗ್, ಸ್ಕೈ ರೋಲರ್, ಜಿಪ್‌ಲೈನ್ ಮತ್ತು ರಾಕೆಟ್ ಇಂಜೆಕ್ಟರ್‌ನಂತಹ ಆಕರ್ಷಣೆಗಳನ್ನು ಒಳಗೊಂಡಿರುವ ಸಾಹಸ ಉದ್ಯಾನವನವು ಅಲ್ಲೇ ಹತ್ತಿರದಲ್ಲಿದೆ. ಪುನರಾರಂಭದ ದಿನದಂದು ಸುಮಾರು 600 ಪ್ರವಾಸಿಗರು ಈ ಸೈಟ್‌ಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ:6 ವರ್ಷ ಡೇಟಿಂಗ್..! ರೋಹಿತ್ ಲೈಫ್ ಸ್ಟೈಲ್ ಹಿಂದಿನ ಸೂತ್ರಧಾರಿ ಈಕೆ..! Photo
/newsfirstlive-kannada/media/post_attachments/wp-content/uploads/2024/10/GLASS-BRIDGE-3.jpg)
ನಿಯಮ ಹೆಂಗಿದೆ..?
- ಪ್ರತಿ ವ್ಯಕ್ತಿಗೆ ಟಿಕೆಟ್‌ಗಳ ಬೆಲೆ 250 ರೂಪಾಯಿ
- ಕೆಟ್ಟ ಹವಾಮಾನದ ಸಂದರ್ಭದಲ್ಲಿ ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ
- ನಡೆಯಲು ಸಾಧ್ಯವಾಗದ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸೇತುವೆ ಮೇಲೆ ಅವಕಾಶ ಇಲ್ಲ
- ನಡೆಯಲು ಸಾಧ್ಯವಾಗದ ಹಿರಿಯ ನಾಗರಿಕರಿಗೂ ಸುರಕ್ಷತೆ ದೃಷ್ಟಿಯಿಂದ ಅನುಮತಿ ಇಲ್ಲ
- ಸೇತುವೆಯ ಮೇಲೆ ಓಡುವುದು, ಆಡುವುದನ್ನು ನಿಷೇಧಿಸಲಾಗಿದೆ
- ಬಿಡುವಿಲ್ಲದ ದಿನಗಳಲ್ಲಿ ಸುಮಾರು 2 ರಿಂದ 3 ಗಂಟೆಗಳ ಕಾಲ ಕಾಯಬೇಕಾಗುತ್ತದೆ
/newsfirstlive-kannada/media/post_attachments/wp-content/uploads/2024/10/GLASS-BRIDGE-4.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us