/newsfirstlive-kannada/media/post_attachments/wp-content/uploads/2025/03/NON-STOP-TRAIN.jpg)
ಭಾರತೀಯ ರೈಲ್ವೆ ಇಲಾಖೆ ಇತ್ತೀಚೆಗೆ ಅನೇಕ ಸುಧಾರಣೆಗಳನ್ನು ಕಂಡಿವೆ. ರೈಲ್ವೆ ನಿಲ್ದಾಣಗಳ ನವೀಕರಣದಿಂದ ಹಿಡಿದು. ಪ್ರಯಾಣಿಕರ ಸೇವೆಗಳಲ್ಲಿಯೂ ಸುಧಾರೀಕರಣವನ್ನು ಅಳವಡಿಸಿಕೊಂಡಿದೆ. ತನ್ನ ವ್ಯವಸ್ಥೆಗೆ ಆಧುನೀಕರಣದ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಸದ್ಯ ಶೇಕಡಾ 100ರಷ್ಟು ಎಲೆಕ್ಟ್ರಿಫಿಕೇಶನ್ ಟ್ರ್ಯಾಕ್ಸ್ ನಿರ್ಮಿಸುವ ಕನಸನ್ನು ಕೂಡ ಹೊಂದಿದೆ. ವಿಶ್ವದ ಅತ್ಯಂದ ದೊಡ್ಡ ರೈಲ್ವೆ ನೆಟ್ವರ್ಕ್ ಹೊಂದಿರುವ ದೇಶಗಳಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ಭಾರತದಲ್ಲಿರುವ ಅತ್ಯಂತ ಶ್ರೀಮಂತ ರೈಲ್ವೆ ನಿಲ್ದಾಣ ಯಾವುದು..? ಮುಂಬೈ, ಚೆನ್ನೈ, ಬೆಂಗಳೂರಲ್ಲ! ಮತ್ತೆ ಎಲ್ಲಿದೆ?
ಪ್ರತಿ ದಿನ ಭಾರತದ ಎಲ್ಲಾ ರೈಲು ಕಂಬಿಗಳ ಮೇಲೆ ಸುಮಾರು 13 ಸಾವಿರ ರೈಲುಗಳು ಪ್ರಯಾಣಿಕರ ಸೇವೆಗಾಗಿ ಓಡುತ್ತವೆ. ಕೆಲವೊಂದಿಷ್ಟು ರೈಲುಗಳಂತೂ ಅತ್ಯಂತ ಸುದೀರ್ಘ ಅವಧಿಯ ಪ್ರಯಾಣಗಳನ್ನು ಕೂಡ ಕೈಗೊಳ್ಳುತ್ತವೆ. ಇನ್ನು ಕೆಲವು ಕಡಿಮೆ ಅವಧಿಯ ಪ್ರಯಾಣ. ಹೈಸ್ಪೀಡ್ ರೈಲಿನಿಂದ ಹಿಡಿದು ಮಧ್ಯಮ ವೇಗದವರೆಗೂ ರೈಲುಗಳು ನಿತ್ಯ ಓಡಾಡುತ್ತತವೆ. ಆದ್ರೆ ಭಾರತದಲ್ಲಿ ಇರುವ ಒಂದೇ ಒಂದು ರೈಲು ಸುದೀರ್ಘ ದೂರವನ್ನು ಕ್ರಮಿಸಿ ಒಂದೇ ಒಂದು ರೈಲ್ವೆ ಸ್ಟೇಷನ್ನಲ್ಲಿ ಸ್ಟಾಪ್ ಇಲ್ಲದೇ ತಡೆರಹಿತವಾಗಿ ಸುಮಾರು 500 ಕಿಲೋ ಮೀಟರ್ವರೆಗೂ ಪ್ರಯಾಣಿಸುತ್ತದೆ.
ಭಾರತದ ಏಕೈಕ ನಾನ್ಸ್ಟಾಪ್ ರೈಲು ಅಂದ್ರೆ ಅದು ಮುಂಬೈ ಸೆಂಟ್ರಲ್ ಹಪಾ ಡ್ಯುರೆಂಟೊ ಎಕ್ಸ್ಪ್ರೆಸ್. ಈ ಒಂದು ರೈಲು ತಡೆರಹಿತವಾಗಿ ಸುಮಾರು 493 ಕಿಲೋ ಮೀಟರ್ವರೆಗೂ ಪ್ರಯಾಣ ಮಾಡುತ್ತದೆ. ಮುಂಬೈನಿಂದ ಅಹ್ಮದಾಬಾದ್ಗೆ ಪ್ರಯಾಣ ಬೆಳೆಸುವ ಈ ರೈಲು ಕೇವಲ 5 ಗಂಟೆ 50 ನಿಮಿಷಗಳಲ್ಲಿ ಮುಂಬೈನಿಂದ ಅಹ್ಮದಾಬಾದ್ ತಲುಪುತ್ತದೆ. ರಾತ್ರಿ 11 ಗಂಟೆಗೆ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ಈ ರೈಲು, ಬೆಳಗ್ಗೆ 4.30ಕ್ಕೆ ಅಹ್ಮದಾಬಾದ್ ತಲುಪುತ್ತದೆ. ಹೆಚ್ಚು ಕಡಿಮೆ 500 ಕಿಲೋ ಮೀಟರ್ ಪ್ರಯಾಣ ಬೆಳೆಸಲು ಈ ರೈಲು ತೆಗೆದುಕೊಳ್ಳುವುದು ಜಸ್ಟ್ 6 ಗಂಟೆಗಳು ಮಾತ್ರ.
ಇದನ್ನೂ ಓದಿ: 12ನೇ ತರಗತಿ ಪರೀಕ್ಷೆ; ವಿದ್ಯಾರ್ಥಿನಿಗೆ ಬಸ್ ನಿಲ್ಲಿಸದಿದ್ದಕ್ಕೆ ಚಾಲಕ, ಕಂಡಕ್ಟರ್ ಇಬ್ಬರೂ ಸಸ್ಪೆಂಡ್
ಇದಕ್ಕೂ ಮುನ್ನ ಭಾರತದಲ್ಲಿ ಅತೀ ಸುದೀರ್ಘ ಪ್ರಯಾಣ ಬೆಳೆಸುವ ತಡೆರಹಿತ ರೈಲು ಎಂಬ ಹೆಗ್ಗಳಿಕೆಯನ್ನು ತಿರುವನಂತಪುರ ನಿಜಾಮುದ್ದಿನ್ ರಾಜಧಾನಿ ಎಕ್ಸ್ಪ್ರೆಸ್ ಪಡೆದಿತ್ತು. ಕೇರಳದ ರಾಜಧಾನಿಯಿಂದ ಹೊರಡುತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿಗೆ ತಡೆರಹಿತವಾಗಿ ಪ್ರಯಾಣ ಮಾಡುತ್ತಿತ್ತು. ಸುಮಾರು 2,845 ಕಿಲೋ ಮೀಟರ್ ಪ್ರಯಾಣದ ಮಧ್ಯೆ ಒಂದೇ ಒಂದು ರೈಲು ನಿಲ್ದಾಣದಲ್ಲಿ ನಿಲ್ಲದೇ ನೇರವಾಗಿ ದೆಹಲಿ ತಲುಪುತ್ತಿತ್ತು. ಅದು ಕೇವಲ 42 ಗಂಟೆಗಳಲ್ಲಿ. ನಂತರದ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ಅನುಸಾರವಾಗಿ ಈ ರೈಲು ರಾಜಸ್ಥಾನದ ಕೊಟಾ, ಗುಜರಾತ್ನ ವಡೋದರಾ ಎರಡು ರೈಲು ನಿಲ್ದಾಣಗಳಲ್ಲಿ ನಿಲ್ಲಿಸುವಂತೆ ವ್ಯವಸ್ಥೆ ಮಾಡಲಾಯ್ತು. ಇದಾದ ಬಳಿಕ ಮಧ್ಯಪ್ರದೇಶದ ರತ್ಲಂನಲ್ಲೂ ನಿಲುಗಡೆಗೆ ಅವಕಾಶ ಮಾಡಿಕೊಡಲಾಯ್ತು. ಹೀಗಾಗಿ ಇದರ ತಡೆರಹಿತ ಪ್ರಯಾಣದ ದೂರ 285 ಕಿಲೋ ಮೀಟರ್ಗೆ ಇಳಿಯಿತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ