newsfirstkannada.com

ಸಮುದ್ರಕ್ಕೇ ನಿರ್ಮಿಸಿರೋ ಸೇತುವೆ ಇದು.. ದೇಶದ ಅತಿ ಉದ್ದದ ‘ಅಟಲ್ ಸೇತು’ ಎಷ್ಟು ಕಿಮೀ ದೂರ ಇದೆ..!

Share :

Published January 12, 2024 at 6:42am

Update January 12, 2024 at 6:45am

    ದೇಶದ ಅತಿ ಉದ್ದದ ಸೇತುವೆ ಇಂದು ಲೋಕಾರ್ಪಣೆ

    ನಾಲ್ಕೂವರೆ ವರ್ಷಗಳಲ್ಲಿ ಸಮುದ್ರ ಸೇತುವೆ ಕಾಮಗಾರಿ ಪೂರ್ಣ

    18,000 ಕೋಟಿ ರೂ. ವೆಚ್ಚದ ಅಟಲ್​ ಸೇತುವೆ ರೆಡಿ

ಇಂದು ದೇಶದ ಭವ್ಯತೆಗೆ ಮತ್ತೊಂದು ಮೈಲಿಗಲ್ಲು ಸೃಷ್ಟಿಯಾಗೋ ಸುದಿನ. ಇಷ್ಟು ದಿನ ನದಿಗೆ ನಿರ್ಮಿಸಿದ ಸೇತುವೆಗಳಲ್ಲಿ ಸಂಚರಿಸುತ್ತಿದ್ದ ಜನರು ಮೊಟ್ಟಮೊದಲ ಬಾರಿಗೆ ಸಮುದ್ರಕ್ಕೆ ನಿರ್ಮಿಸಿರೋ ಸೇತುವೆ ಮೇಲೂ ಸಂಚರಿಸುವಂತ ಸೌಭಾಗ್ಯ ಒದಗಿಬಂದಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ನಿರ್ಮಾಣವಾದ ಸಮುದ್ರ ಸೇತುವೆಯನ್ನು ಇಡೀ ವಿಶ್ವವೇ ತಿರುಗಿನೋಡುತ್ತಿದೆ.

ಮುಂಬೈನಲ್ಲಿ ನಿರ್ಮಾಣವಾಗಿದೆ ದೇಶದ ಅತಿ ಉದ್ದದ ಸೇತುವೆ

ದೇಶದ ಅತೀ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮುಂಬೈನ ಅಟಲ್ ಸೇತು ಇಂದು ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಮುಂಬೈನ ಟ್ರಾನ್ಸ್ ಹಾರ್ಬರ್ ಲಿಂಕ್‍ಅನ್ನ ಉದ್ಘಾಟಿಸಲಿದ್ದಾರೆ.

‘ಅಟಲ್ ಸೇತು’

  • ದೇಶದ ಅತಿ ಉದ್ದದ ಸಮುದ್ರದಲ್ಲಿನ ಸೇತುವೆ ‘ಅಟಲ್ ಸೇತು’
  • ಮುಂಬೈನ ಸೆವ್ರಿ – ರಾಯಗಡದ ನ್ಹಾವಾ ಶೇವಾ ಮಧ್ಯೆ ಸಂಪರ್ಕ
  • ಸುಮಾರು 21.8 ಕಿಮೀ ಉದ್ದದ ಆರು ಪಥಗಳ ಬೃಹತ್​ ಸೇತುವೆ
  • 2 ಗಂಟೆಗಳ ಪ್ರಯಾಣ ಸಮಯ 15-20 ನಿಮಿಷಗಳಿಗೆ ಇಳಿಸಲಿದೆ
  • 16.5 ಕಿ.ಮೀ. ಸಮುದ್ರ ಸೇತುವೆ, 5.5 ಕಿಮೀ ಭೂ ಭಾಗದಲ್ಲಿ ರಸ್ತೆ
  • ಅಂದಾಜು 18,000 ಕೋಟಿ ರೂ. ವೆಚ್ಚದ ಅಟಲ್​ ಸೇತುವೆ ರೆಡಿ
  • ಸಮುದ್ರ ಮಟ್ಟದಿಂದ 15 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಾಣ
  • ನಾಲ್ಕೂವರೆ ವರ್ಷಗಳಲ್ಲಿ ಸಮುದ್ರ ಸೇತುವೆ ಕಾಮಗಾರಿ ಪೂರ್ಣ

ಪ್ರತಿನಿತ್ಯ ಸುಮಾರು 70,000 ವಾಹನಗಳು ಈ ಸೇತುವೆಯಲ್ಲಿ ಸಾಗುವ ನಿರೀಕ್ಷೆ ಇದೆ. ಅಟಲ್​ ಸಾಗರ ಸೇತುವೆ 100 ವರ್ಷಗಳ ಜೀವಿತಾವಧಿ ಹೊಂದಿದೆ.. ಮುಂಗಾರು ವೇಳೆಯಲ್ಲಿ ವೇಗದ ಗಾಳಿ ತಡೆದುಕೊಳ್ಳಲು ವಿಶೇಷವಾಗಿ ಈ ಸೇತುವೆಯನ್ನ ವಿನ್ಯಾಸ ಮಾಡಲಾಗಿದೆ. ಗುಡುಗು ಮಿಂಚಿನಿಂದ ಉಂಟಾಗುವ ಸಂಭಾವ್ಯ ಹಾನಿ ತಪ್ಪಿಸಲು ರಕ್ಷಣಾ ವ್ಯವಸ್ಥೆ ಕೂಡ ಮಾಡಲಾಗಿದೆ. ಸೇವ್ರಿ ಪ್ರದೇಶ ಭಾಗದ ಫ್ಲೆಮಿಂಗೊ ಸಂರಕ್ಷಿತ ಪ್ರದೇಶ ಮತ್ತು ಪರಮಾಣು ಸಂಶೋಧನ ಪ್ರದೇಶ ಬಳಿ ಹಾದುಹೋಗು ಕಾರಣ 8.5 ಕಿಮೀ ಉದ್ದ ಶಬ್ಧ ತಡೆಗೋಡೆ ಸಹ ನಿರ್ಮಿಸಲಾಗಿದೆ. ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಯೊಂದಿಗೆ ಸಂಪರ್ಕಿಸುವಂತೆ ಈ ಸೇತುವೆಯನ್ನ ವಿನ್ಯಾಸ ಮಾಡಲಾಗಿದೆ.

ಅಟಲ್​ ಸೇತುವೆ ಮೇಲೆ ಬೈಕ್​, ಆಟೋ ಸಂಚಾರಕ್ಕೆ ನಿರ್ಬಂಧ

ಅಟಲ್​ ವಾಜಪೇಯಿ ಅವರ ಸ್ಮರಣಾರ್ಥವಾಗಿ ಸಮುದ್ರದ ಸೇತುವೆಗೆ ಅವರ ಹೆಸರನ್ನು ಇಡಲಾಗಿದೆ. ನಾಲ್ಕು ಚಕ್ರದ ವಾಹನಗಳ ವೇಗದ ಮಿತಿಯನ್ನು 100 ಕೀ.ಮಿ. ನಿಗದಿ ಮಾಡಲಾಗಿದೆ. ಹೀಗಾಗಿ ದೇಶದ ಅತಿ ಉದ್ಧದ ಸೇತುವೆ ಮೇಲೆ ಬೈಕ್​, ಆಟೋ, ಟ್ರ್ಯಾಕ್ಟರ್​, ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸೇತುವೆಯ ಏಕಮುಖ ಸಂಚಾರಕ್ಕೆ 250 ರೂಪಾಯಿ, ದ್ವಿಮುಖ ಸಂಚಾರಕ್ಕೆ 375 ರೂಪಾಯಿ ಶುಲ್ಕ ಇರಲಿದೆ. ಒಂದು ವರ್ಷದ ಬಳಿಕ ರಾಜ್ಯ ಸರ್ಕಾರ, ಟೋಲ್​ ದರವನ್ನು ಮರು ಪರಿಷ್ಕರಣೆ ಮಾಡುವುದಾಗಿ ಹೇಳಿಕೊಂಡಿದೆ. ಇಂದು ಸೇತುವೆ ಉದ್ಘಾಟನೆ ಹಿನ್ನಲೆ ಸೇತುವೆ ಪ್ರವೇಶಿಸುವ ಭಾಗದಲ್ಲಿ ಬಿಜೆಪಿ ಬಾವುಟಗಳು ಮತ್ತು ಪ್ರಧಾನಿ ಮೋದಿಯ ಬ್ಯಾನರ್​ಗಳು ರಾರಾಜಿಸುತ್ತಿವೆ.

ಒಟ್ನಲ್ಲಿ ದೇಶದ ಭವ್ಯತೆಗೆ ಕಿರೀಟದಂತೆ ನಿರ್ಮಾಣಗೊಂಡಿರೋ ಅಟಲ್​ ಸೇತುವೆಗೆ ಇಂದು ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಕಡಲ ಮಧ್ಯದಲ್ಲಿರುವ ಸೇತುವೆ ಮೇಲೆ ಸವಾರಿ ಮಾಡಲು ವಾಣಿಜ್ಯ ನಗರಿ ಜನತೆ ಕಾತುರರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮುದ್ರಕ್ಕೇ ನಿರ್ಮಿಸಿರೋ ಸೇತುವೆ ಇದು.. ದೇಶದ ಅತಿ ಉದ್ದದ ‘ಅಟಲ್ ಸೇತು’ ಎಷ್ಟು ಕಿಮೀ ದೂರ ಇದೆ..!

https://newsfirstlive.com/wp-content/uploads/2024/01/ATAL-SETU.jpg

Load More