/newsfirstlive-kannada/media/post_attachments/wp-content/uploads/2025/03/MAHARAJAS-EXPRESS-1.jpg)
ವಂದೇ ಭಾರತ್ ಮತ್ತು ತೇಜಸ್ ಟ್ರೈನ್ಗಳು ಅತ್ಯಂತ ದುಬಾರಿ ರೈಲುಗಳು. ಅವು ಸಿರಿವಂತರಿಗಾಗಿ ಮಾತ್ರ ಎಂಬ ಮಾತುಗಳನ್ನು ನಾವು ಕೇಳಿದ್ದೇವೆ. ಆದ್ರೆ ಭಾರತದ ಈ ಒಂದು ಟ್ರೇನ್ ಮುಂದೆ ಇವುಗಳ ಟಿಕೆಟ್ ದರ ಮತ್ತು ಅವುಗಳಲ್ಲಿರುವ ವ್ಯವಸ್ಥೆ ಏನು ಅಲ್ಲ. ಈ ಟ್ರೈನ್ನಲ್ಲಿರುವ ಐಷಾರಾಮಿ ವ್ಯವಸ್ಥೆ ಮತ್ತು ಟಿಕೆಟ್ ದರ ಕೇಳಿದರೆ ಎಂತವರೂ ಕೂಡ ಒಮ್ಮೆ ಬೆಚ್ಚಿ ಬೀಳುತ್ತಾರೆ. ಇಂದು ಭಾರತದ ಅತ್ಯಂತ ದುಬಾರಿ ರೈಲಿನ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
ಇದನ್ನೂ ಓದಿ:ಭಾರತದ ಮೊಟ್ಟ ಮೊದಲ ಖಾಸಗಿ ರೈಲ್ವೆ ನಿಲ್ದಾಣ ಯಾವುದು? ಯಾವ ರಾಜ್ಯದಲ್ಲಿದೆ ಅಂತ ಗೊತ್ತಾ?
ಮಹಾರಾಜಾಸ್ ಎಕ್ಸ್ಪ್ರೆಸ್.. ಈ ಹೆಸರು ನೆನಪಿಟ್ಟುಕೊಳ್ಳಿ ಇದು ಭಾರತದ ಅತ್ಯಂತ ದುಬಾರಿ ಟ್ರೈನ್ ಎಂದು ಹೆಸರು ಪಡೆದಿದೆ. ಇದು ಐಆರ್ಸಿಟಿಸಿಯ ಅಡಿಯಲ್ಲಿಯೇ ನಿರ್ವಹಣೆಗೊಳ್ಳುವ ಟ್ರೈನ್. ಇದೊಂದು ಅತ್ಯಂತ ಐಷಾರಾಮಿ ಹಾಗೂ ದುಬಾರಿ ಟೂರಿಸ್ಟ್ ಟ್ರೈನ್. ಹೆಸರಿನಂತೆಯೇ ಈ ಒಂದು ಟ್ರೈನ್ ರಾಜಮನೆತನದ ಮೂಲ ಗಂಧವನ್ನು ನಮಗೆ ಸಂಚಾರದಲ್ಲಿ ಪರಿಚಯಿಸುತ್ತದೆ. ಇದನ್ನು ಎಕ್ಸ್ಪ್ರೆಸ್ ಆ್ಯಂಡ್ ಎಕ್ಸ್ಪ್ರೆಸ್ ಆಫ್ ದಿ ಒರಿಯಂಟ್ ಅಂತಲೂ ಕರೆಯುತ್ತಾರೆ. ಇದು ವಿಶ್ವದ ಅತ್ಯಂತ ಐಷಾರಾಮಿ ರೈಲು ಎಂದು ಕೂಡ ಹೆಸರು ಪಡೆದಿದೆ. ಇದು ಎರಡು ಬಾರಿ ವಿಶ್ವ ಸಂಚಾರಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅದು 2012 ಮತ್ತು 2018ರಲ್ಲಿ
ಪರಂಪರೆಯ ಎದ್ದುಕಾಣುವ ನೋಟ, ಪರಂಪರೆ, ಸೌಕರ್ಯ, ಐಷಾರಾಮಿ ಮತ್ತು ದುಂದುವೆಚ್ಚದ ಪ್ರತಿರೂಪವಾಗಿ ನಮಗೆ ಕಾಣುತ್ತದೆ. ಇಷ್ಟು ಮಾತ್ರವಲ್ಲ ಇದರಲ್ಲಿ ಪ್ರಯಾಣ ಬೆಳೆಸುವವರಿಗೆ ಬೇರೆಯದ್ದೆ ತರಹದ ಅನುಭವ ನೀಡುತ್ತದೆ. ಇಡೀ ರೈಲು ಎಸಿ ವ್ಯವಸ್ಥೆಯನ್ನು ಹೊಂದಿದೆ. ವೈಫೈ ಸೌಲಭ್ಯವಿದೆ. ಟ್ರೈನ್ನಲ್ಲಿ ಪ್ರತ್ಯೇಕವಾದ ರೆಸ್ಟೋರೆಂಟ್ ಮತ್ತು ಬಾರ್ಗಳ ವ್ಯವಸ್ಥೆಯಿದೆ. ಇದು ಅಪ್ಪಟವಾದ ಒಂದು ರಾಯಲ್ ಲೈಫ್ಸ್ಟೈಲ್ನ್ನು ನಮಗೆ ಕಟ್ಟಿಕೊಡುತ್ತದೆ.
ಇದನ್ನೂ ಓದಿ: ವಜ್ರಕ್ಕಿಂತ ದುಬಾರಿ ಈ ಒಂದು ಮರದ ಕಟ್ಟಿಗೆ..ಇದರ ಬೆಲೆ ಕೇಳಿದ್ರೆ ದಂಗಾಗಿ ಹೋಗ್ತೀರಾ
ಈ ಒಂದು ರೈಲಿನಲ್ಲಿ 6 ರಾತ್ರಿಗಳ ಪ್ರಯಾಣಕ್ಕೆ ಟಿಕೆಟ್ಗೆ ತಗಲುವ ವೆಚ್ಚ ಬರೋಬ್ಬರಿ 20 ಲಕ್ಷ ರೂಪಾಯಿ. ಇದರಲ್ಲಿ ಪ್ರಯಾಣ ಮಾಡಿದವರು ಅಕ್ಷರಶಃ ಐಷಾರಾಮಿಯ ಆರು ದಿನಗಳ ಅನುಭವ ಪಡೆಯುತ್ತಾರೆ. ಖಾಸಗಿ ಬಟ್ಲರ್ಗಳು ಅಂದ್ರೆ ವೇಟರ್ಗಳು, ಸ್ಟಾರ್ ಹೋಟೆಲ್ಗಳ ಶೈಲಿಯ ಊಟ ಮತ್ತು ಪ್ಯಾಲೆಸ್ನಂತಹ ಟ್ರೈನ್ ಇವೆಲ್ಲಾ ಅನುಕೂಲಗಳನ್ನು ಮಾಡುತ್ತವೆ. ಮಹಾರಾಜಾಸ್ ಎಕ್ಸ್ಪ್ರೆಸ್ ವಿವಿಧ ಪ್ರಯಾಣ ಯೋಜನೆಗಳನ್ನು ಹೊಂದಿದೆ. ಅಕ್ಟೋಬರ್ನಿಂದ ಏಪ್ರಿಲ್ವರೆಗೂ ಇದು ಸಂಚಾರ ಮಾಡುತ್ತದೆ. ದೆಹಲಿ, ಜೈಪುರ ಹಾಗೂ ಆಗ್ರಾಗಳ ಪ್ರವಾಸಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಈ ಟ್ರೈನ್ ಆರು ರಾತ್ರಿಗಳ ಸಂಚಾರವನ್ನು ಕೈಗೊಳ್ಳುತ್ತದೆ.
ಇನ್ನು ಈ ರೈಲಿನಲ್ಲಿ ಏನೆಲ್ಲಾ ಐಷಾರಾಮಿ ವ್ಯವಸ್ಥೆಗಳು ಇರುತ್ತವೆ ಅನ್ನೋದನ್ನ ನೋಡುವುದಾದ್ರೆ
- ಡಬಲ್ ಕ್ವಿನ್ ಬೆಡ್ ಕ್ಯಾಬಿನ್ನಲ್ಲಿ ಐಷಾರಾಮಿ ಬಾತ್ ರೂಮ್ ಹೊಂದಿರುವ ಕ್ಯಾಬಿನ್ನಲ್ಲಿ ವಸತಿ
- ಎಲ್ಲ ರೀತಿಯ ಆಹಾರ, ಸಾಫ್ಟ್ ಡ್ರಿಂಕ್ಸ್, ಇಂಡಿಯನ್ ಬ್ರ್ಯಾಂಡ್ ವೈನ್, ಬಿಯರ್
- ಸೂಟುಬೂಟಿನೊಂದಿಗೆ ಅತ್ಯಂತ ಶಿಸ್ತಿನಿಂದ ಇರುವ ಬಟ್ಲರ್ಗಳಿಂದ ಸೇವೆ
- ಈ ಪ್ರಯಾಣ ನಾವು ಹೋಗಬೇಕಾದ ಸ್ಥಳಗಳಿಗೆ ಪ್ರವೇಶ ಶುಲ್ಕವನ್ನು ಭರಿಸುತ್ತದೆ. ಕ್ಯಾಮರಾ ಫ್ರೀ ವ್ಯವಸ್ಥೆ ಹಾಗೂ ಗೈಡ್ಗಳ ವ್ಯವಸ್ಥೆಯನ್ನೂ ಕೂಡ ಅದೇ ಮಾಡುತ್ತದೆ.
- ಇನ್ನು ಟೀ, ಕಾಫಿ ಮತ್ತು ಮಿನರಲ್ ವಾಟರ್ಗಳು ಕಾಂಪ್ಲಿಮೆಂಟರಿಯಾಗಿ ಸಿಗುತ್ತವೆ.
6 ರಾತ್ರಿ, 7 ಹಗಲು ಪ್ರಯಾಣ ಮಾಡುವ ಈ ಟ್ರೈನ್ ದೆಹಲಿ, ಜೈಪುರ್, ರತ್ನಂಬೊರ್, ಫತೇಹ್ಪುರ್-ಸಿಕ್ರಿ, ಒರ್ಚಾ, ಖಜುರಾಹೊ ಮತ್ತು ವಾರಣಾಸಿಗಳನ್ನು ಕವರ ಮಾಡುತ್ತದೆ. ಇನ್ನು ಪಾರಂಪರಿಕ ಸ್ಥಳಗಳಾದ ಉದಯಪುರ, ಜೊಧಪುರ್, ಬಿಕೆನಾರ್, ಜೈಪುರಗಳನ್ನು ಪ್ರಯಾಣಿಕರಿಗೆ ತೋರಿಸುತ್ತದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ