newsfirstkannada.com

ಬರೋಬ್ಬರಿ 1000 ಕಾರ್​ ಕದ್ದಿದ್ದ ಕಳ್ಳ.. ಜಡ್ಜ್​ ಆಗಿ 2 ಸಾವಿರ ಕ್ರಿಮಿನಲ್ಸ್​ಗೆ ಜಾಮೀನು ನೀಡಿದ್ದ ರೋಚಕ ಕಥೆ!

Share :

Published February 22, 2024 at 4:22pm

Update February 22, 2024 at 4:26pm

    ಭಾರತದ ಚಾರ್ಲ್ಸ್‌ ಶೋಭರಾಜ್ ಅಂತಾನೇ ಕುಖ್ಯಾತಿ ಈತ!

    60 ವರ್ಷಗಳಿಂದ ಕಳ್ಳತನ ಮಾಡೋ ಖದೀಮನ ಚರಿತ್ರೆನೇ ಬೇರೆ

    ಇವರು ಭಾರತದ ಅತಿ ಹೆಚ್ಚು ವಿದ್ಯಾವಂತ, ಇಂಟಲಿಜೆಂಟ್ ಕಳ್ಳ

ನವದೆಹಲಿ: ಕಳ್ಳತನ ಮಾಡೋದೇ ತಪ್ಪು. ಅದರಲ್ಲೂ ಬುದ್ಧಿವಂತಿಕೆಯಿಂದ 60 ವರ್ಷ ಅನುಭವವುಳ್ಳ ಸೀನಿಯರ್‌, ಸೂಪರ್ ಕಳ್ಳನ ಬಗ್ಗೆ ನೀವು ಕೇಳಿದ್ದೀರಾ. ಖಂಡಿತವಾಗಿಯೂ ಸಾಧ್ಯವಿಲ್ಲ. ಯಾಕಂದ್ರೆ ಇಡೀ ದೇಶದಲ್ಲಿ ಇರೋದು ಇವರೊಬ್ಬರೇ. ಈ ಚೋರನ ಕ್ರೈಮ್ ಡೈರಿಗೆ ರೋಚಕವಾಗಿದೆ. ಯಾರಿವರು? ಈ ಕಳ್ಳರ ಕಳ್ಳನ ಅಸಲಿ ರೆಕಾರ್ಡ್ಸ್‌ಗಳೇನು ಅನ್ನೋ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

ಧನಿ ರಾಮ್ ಮಿತ್ತಲ್ ಅನ್ನೋದು ಅಸಲಿ ಹೆಸರು. ಆದ್ರೆ ಇವ್ರು ಭಾರತದ ಸೂಪರ್ ಕಳ್ಳ, ಭಾರತದ ಚಾರ್ಲ್ಸ್‌ ಶೋಭರಾಜ್ ಅಂತಾನೇ ಕುಖ್ಯಾತಿ ಪಡೆದಿದ್ದಾರೆ. ಭಾರತದ ಮೋಸ್ಟ್ ವಾಂಟೆಂಡ್ ಸೂಪರ್‌ ಕಳ್ಳ ಧನಿ ರಾಮ್ ಮಿತ್ತಲ್ ಅವರನ್ನ ಪೊಲೀಸರು ಮತ್ತೊಮ್ಮೆ ಬಂಧಿಸಿದ್ದಾರೆ.

2023ರ ಮೇ ತಿಂಗಳಿನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಧನಿ ರಾಮ್ ಮಿತ್ತಲ್ ತನ್ನ ಹಳೇ ಚಾಳಿಯನ್ನು ಬಿಟ್ಟಿಲ್ಲ. ದೆಹಲಿಯ ಶಾಲಿಮಾರ್ ಬಾಗ್‌ನಲ್ಲಿ ಮಾರುತಿ ಎಸ್ಟೀಮ್ ಕಾರನ್ನು ಕಳ್ಳತನ ಮಾಡಿ ಪಶ್ಚಿಮ ವಿಹಾರ್‌ನಲ್ಲಿ ಮಾರಾಟಕ್ಕೆ ಯತ್ನಿಸಿದ್ದಾರೆ. ಕಾರನ್ನು ಮಾರಾಟ ಮಾಡುವಾಗ ಸೂಪರ್ ಕಳ್ಳ ಧನಿ ರಾಮ್ ಮಿತ್ತಲ್ ಅವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಸೂಪರ್ ಕಳ್ಳನನ್ನು ಬಂಧಿಸಿರೋದ್ರಲ್ಲಿ ವಿಶೇಷವೇನೂ ಇಲ್ಲ. ಆದರೆ ಧನಿ ರಾಮ್ ಮಿತ್ತಲ್ ಕೇಸ್ ಹಿಸ್ಟರಿಯೇ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಭಾರತದ ಚಾರ್ಲ್ಸ್ ಶೋಭರಾಜ್‌!
ಧನಿ ರಾಮ್ ಮಿತ್ತಲ್ ಅವರು ಭಾರತದ ಅತಿ ಹೆಚ್ಚು ವಿದ್ಯಾವಂತ, ಇಂಟಲಿಜೆಂಟ್ ಕಳ್ಳ. ಇವರು ಕಾನೂನು ಪದವಿಧರರು. ಇದರ ಜೊತೆಗೆ ಹ್ಯಾಂಡ್ ರೈಟಿಂಗ್ ಸ್ಪೆಷೆಲಿಸ್ಟ್ ಕೂಡ ಆಗಿದ್ದಾರೆ. ಮಿತ್ತಲ್ ತನ್ನ ಜೀವನ ನಿರ್ವಹಣೆಗಾಗಿ ಕಳ್ಳತನದ ಮಾರ್ಗ ಆಯ್ದುಕೊಂಡಿದ್ದಾರೆ. ಕಳೆದ 60 ವರ್ಷಗಳಲ್ಲಿ ಧನಿ ರಾಮ್ ಮಿತ್ತಲ್ ಅವರು ಸಾವಿರಾರು ಕಳ್ಳತನ ಮಾಡಿ ದಾಖಲೆ ಬರೆದಿದ್ದಾರೆ.

ಸೂಪರ್ ಕಳ್ಳ ಮಿತ್ತಲ್ ಅವರು ಇದುವರೆಗೂ ಬರೋಬ್ಬರಿ ಒಂದು ಸಾವಿರ ಕಾರುಗಳ ಕಳ್ಳತನ ಮಾಡಿದ್ದಾರೆ. ಹಗಲು ಹೊತ್ತಿನಲ್ಲೇ ದೆಹಲಿ, ಹರಿಯಾಣ, ರಾಜಸ್ಥಾನ ರಾಜ್ಯಗಳಲ್ಲಿ ಇವರು ಕಾರುಗಳನ್ನು ಕದ್ದೊಯ್ಯುತ್ತಿದ್ದರು. 1968 ರಿಂದ 1974ರವರೆಗೆ ನಕಲಿ ದಾಖಲೆ ನೀಡಿ ರೈಲ್ವೇ ಸ್ಟೇಷನ್ ಮಾಸ್ಟರ್ ಆಗಿಯೂ ಧನಿ ರಾಮ್ ಮಿತ್ತಲ್ ಕೆಲಸ ನಿರ್ವಹಣೆ ಮಾಡಿದ್ದಾರೆ.

ಇದನ್ನೂ ಓದಿ: ವಾಟ್ಸಾಪ್ ಬಳಸುವವರೇ ಹುಷಾರ್.. ಖತರ್ನಾಕ್ ಖದೀಮರ ಹೊಸ ಮಾರ್ಗ ಬಯಲು; ಏನದು?

ಕೋರ್ಟ್ ಹಾಲ್‌ನಲ್ಲಿ ಕಳ್ಳನ ಕರಾಮತ್ತು!
ಭಾರತದ ಬುದ್ಧಿವಂತ ಕಳ್ಳ ಧನಿ ರಾಮ್ ಮಿತ್ತಲ್, ಕೋರ್ಟ್ ಹಾಲ್‌ನಲ್ಲಿ ಜಡ್ಜ್ ಆಗಿ ಕುಳಿತು ವಿಚಾರಣೆ ಕೂಡ ನಡೆಸಿದ್ದ. ಈತ ಹರಿಯಾಣದ ಜಾಜ್ಜರ್ ಜಿಲ್ಲೆಯ ಹೆಚ್ಚುವರಿ ಸೆಷನ್ಸ್ ಜಡ್ಜ್‌ಗೆ 2 ತಿಂಗಳು ರಜೆ ಮಂಜೂರು ಮಾಡಿದಂತೆ ದಾಖಲೆ ಸೃಷ್ಟಿ ಮಾಡಿದ್ದ. 2 ತಿಂಗಳ ರಜೆ ಮಂಜೂರಾಗಿದೆ ಎಂದು ಜಡ್ಜ್‌ ರಜೆ ಮೇಲೆ ಹೋಗಿದ್ದರು. ಆಮೇಲೆ ಜಡ್ಜ್ ಕುರ್ಚಿಯಲ್ಲಿ ಕುಳಿತ ಧನಿ ರಾಮ್ ಮಿತ್ತಲ್ ಕೋರ್ಟ್ ಕಲಾಪ ನಡೆಸಿ ಬರೋಬ್ಬರಿ 2 ಸಾವಿರ ಕಳ್ಳರ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ್ದ. ಅಷ್ಟೇ ಅಲ್ಲ 2000 ಕ್ರಿಮಿನಲ್‌ಗಳಿಗೂ ಬಿಡುಗಡೆಗೆ ಆದೇಶ ನೀಡಿದ್ದ.

2000 ಕ್ರಿಮಿನಲ್ಸ್‌ಗೆ ಬಿಡುಗಡೆ ಭಾಗ್ಯ ನೀಡಿದ್ದ ಸೂಪರ್ ಕಳ್ಳ ಇದಾದ ಮೇಲೆ ತನ್ನದೇ ಕೇಸ್‌ನ ವಿಚಾರಣೆ ನಡೆಸಿ ತನ್ನ ಪರವೇ ಆದೇಶ ಹೊರಡಿಸಿದ್ದ. ಅಧಿಕಾರಿಗಳಿಗೆ ಈತ ಜಡ್ಜ್ ಅಲ್ಲ, ಕಳ್ಳನೇ ಜಡ್ಜ್ ಕುರ್ಚಿಯಲ್ಲಿ ಕುಳಿತು ಆದೇಶ ನೀಡುತ್ತಿದ್ದಾನೆ ಎಂದು ನಿಧಾನವಾಗಿ ಮನವರಿಕೆ ಆಗಿತ್ತು. ಧನಿ ರಾಮ್ ಮಿತ್ತಲ್ ಇಷ್ಟೆಲ್ಲಾ ಗೊತ್ತಾಗುವಷ್ಟರಲ್ಲಿ ಕೋರ್ಟ್ ಹಾಲ್‌ನಿಂದ ಜಾಗ ಖಾಲಿ ಮಾಡಿ ಎಸ್ಕೇಪ್ ಆಗಿದ್ದ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 1000 ಕಾರ್​ ಕದ್ದಿದ್ದ ಕಳ್ಳ.. ಜಡ್ಜ್​ ಆಗಿ 2 ಸಾವಿರ ಕ್ರಿಮಿನಲ್ಸ್​ಗೆ ಜಾಮೀನು ನೀಡಿದ್ದ ರೋಚಕ ಕಥೆ!

https://newsfirstlive.com/wp-content/uploads/2024/02/car.jpg

Load More