newsfirstkannada.com

ಭಾರತದ ಹಿರಿಯ ಟೆಸ್ಟ್​ ಕ್ರಿಕೆಟಿಗ ದತ್ತಾಜಿರಾವ್​ ಗಾಯಕ್ವಾಡ್ ನಿಧನ

Share :

Published February 13, 2024 at 1:24pm

Update February 13, 2024 at 1:25pm

    ದತ್ತಾಜಿರಾವ್​ ಗಾಯಕ್ವಾಡ್​ಗೆ 95 ವರ್ಷ ವಯಸ್ಸಾಗಿತ್ತು

    ದತ್ತಾಜಿರಾವ್​ ಭಾರತ ತಂಡದ ಮಾಜಿ ನಾಯಕರಾಗಿದ್ದರು

    ಇವರು ಭಾರತದ ಮಾಜಿ ಓಪನರ್ ಔನ್ಶುಮಾನ್​ ಗಾಯಕ್ವಾಡ್ ತಂದೆ

ಭಾರತದ ಹಿರಿಯ ಟೆಸ್ಟ್​ ಕ್ರಿಕೆಟಿಗ ಮತ್ತು ಮಾಜಿ ನಾಯಕ ದತ್ತಾಜಿರಾವ್​ ಗಾಯಕ್ವಾಡ್ (95)​ ಇಹಲೋಕ ತ್ಯಜಿಸಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.

ದತ್ತಾಜಿರಾವ್ ಭಾರತದ ಮಾಜಿ ಓಪನರ್​ ಮತ್ತು ರಾಷ್ಟ್ರೀಯ ಕೋಚ್​ ಔನ್ಶುಮಾನ್​ ಗಾಯಕ್ವಾಡ್​ ಅವರ ತಂದೆ. ಕಳೆದ 12 ದಿನಗಳಿಂದ ಬರೋಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ದತ್ತಾಜಿರಾವ್ ಗಾಯಕ್ವಾಡ್​ ನಿಧನರಾಗಿದ್ದಾರೆ.

ದತ್ತಾಜಿರಾವ್ ಗಾಯಕ್ವಾಡ್

ದತ್ತಾಜಿರಾವ್ ಗಾಯಕ್ವಾಡ್​ ಭಾರತಕ್ಕಾಗಿ 1952ರಿಂದ ಮತ್ತು 1961ರ ನಡುವೆ ಸುಮಾರು 11 ಟೆಸ್ಟ್​​ ಪಂದ್ಯಗಳನ್ನು ಆಡಿದ್ದಾರೆ. 1959ರಲ್ಲಿ ಇಂಗ್ಲೆಂಡ್​ ಪ್ರವಾಸದ ಸಂದರ್ಭದಲ್ಲಿ ಭಾರತ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ ಕೀರ್ತಿ ಇವರಿಗಿದೆ.

ಇದಲ್ಲದೆ, ದತ್ತಾಜಿರಾವ್ 14 ಶತಕವನ್ನು ಬಾರಿಸಿದ್ದಾರೆ. 47.56ರ ಸರಾಸರಿಯಲ್ಲಿ 3139 ರನ್​ ಗಳಿಸಿದ್ದಾರೆ. ಇನ್ನು 1959-60ರ ಕಾಲಘಟ್ಟದಲ್ಲಿ ಮಹಾರಾಷ್ಟ್ರದ ವಿರುದ್ಧ ಔಟ್​​ ಆಗದೆ 249 ರನ್​ ಬಾರಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತದ ಹಿರಿಯ ಟೆಸ್ಟ್​ ಕ್ರಿಕೆಟಿಗ ದತ್ತಾಜಿರಾವ್​ ಗಾಯಕ್ವಾಡ್ ನಿಧನ

https://newsfirstlive.com/wp-content/uploads/2024/02/dattajirao-gaekwad.jpg

Load More