/newsfirstlive-kannada/media/post_attachments/wp-content/uploads/2025/03/olympics_2036-1.jpg)
2036ರ ಸಮ್ಮರ್ ಒಲಂಪಿಕ್ಸ್ ಅಥವಾ ಬೇಸಿಗೆ ಒಲಂಪಿಕ್ಸ್ ಅನ್ನು ಆಯೋಜನೆ ಮಾಡುವುದಾಗಿ ಹೇಳುತ್ತಿರುವ ಭಾರತಕ್ಕೆ ಸುಮಾರು 34,700 ಕೋಟಿಯಿಂದ 64,000 ಕೋಟಿ ರೂಪಾಯಿವರೆಗೆ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) 2024ರ ಅಕ್ಟೋಬರ್ನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಗೆ ಪತ್ರ ಬರೆದಿದೆ. ಇದರಲ್ಲಿ 2036 ರ ಸಮ್ಮರ್ ಒಲಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆ ಮಾಡುವುದಾಗಿ ಆಸಕ್ತಿ ತೋರಿಸಿದೆ. ಆದರೆ ಇದಕ್ಕೆ ಸುಮಾರು 34,700 ಕೋಟಿಯಿಂದ 64,000 ಕೋಟಿ ರೂಪಾಯಿವರೆಗೆ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ.
ಗುಜರಾತ್ನ ಗಾಂಧಿನಗರದಲ್ಲಿ ಇತ್ತೀಚೆಗಷ್ಟೇ ಉನ್ನತ ಮಟ್ಟದ ಸಮನ್ವಯ ಸಮಿತಿಯು ಸಭೆಯೊಂದನ್ನು ಆಯೋಜನೆ ಮಾಡಿ ಒಲಂಪಿಕ್ಸ್ ಆಯೋಜನೆ ಕುರಿತು ಕೆಲ ಅಂಶ ಚರ್ಚೆ ಮಾಡಲಾಯಿತು. ಈ ಸಭೆಯಲ್ಲಿ 2036ರ ಒಲಿಂಪಿಕ್ಸ್ ಆಯೋಜನೆ ಭಾರತದ ಸಂಕಲ್ಪ ಎಂದು ಪುನರುಚ್ಚರಿಸಲಾಯಿತು ಎಂದು ಹೇಳಲಾಗಿದೆ.
ಮಾಹಿತಿ ಪ್ರಕಾರ ಸಮ್ಮರ್ ಒಲಂಪಿಕ್ಸ್ ಅನ್ನು ಗುಜರಾತ್ ಸೇರಿದಂತೆ ದೇಶದ ಇತರೆ ನಗರಗಳಾದ ಭೋಪಾಲ್, ಮುಂಬೈ, ಗೋವಾ ಹಾಗೂ ಪುಣೆಯಲ್ಲಿ ಆಯೋಜನೆ ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ ಇದು ಇನ್ನೂ ಅಂತಿಮವಾಗಿಲ್ಲ. ಅಲ್ಲದೇ ಇದಕ್ಕೆ ವೆಚ್ಚವನ್ನು ಕೂಡ ಅಂದಾಜಿಸಲಾಗಿದೆ. ಇನ್ನು ಕಳೆದ ಅಂದರೆ 2024 ಬೇಸಿಗೆ ಒಲಿಂಪಿಕ್ಸ್ ಅನ್ನು ಆಯೋಜನೆ ಮಾಡಿದ್ದ ಪ್ಯಾರಿಸ್ಗೆ ಸುಮಾರು 32,765 ಕೋಟಿ ರೂಪಾಯಿ ವೆಚ್ಚ ತಗುಲಿತ್ತು ಎಂದು ವರದಿಯೊಂದು ಹೇಳುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ