/newsfirstlive-kannada/media/post_attachments/wp-content/uploads/2025/03/DARJALING.jpg)
ಭಾರತದಲ್ಲಿ ಒಟ್ಟು 800ಕ್ಕೂ ಅಧಿಕ ಜಿಲ್ಲೆಗಳಿವೆ. ಎಲ್ಲ ಜಿಲ್ಲೆಗಳು ಆಯಾ ಆಯಾ ರಾಜ್ಯಗಳಿಗೆ ಸಂಬಂಧಿಸಿದಂತವು. ಆ ರಾಜ್ಯದ ಆಡಳಿತಕ್ಕೆ ಒಳಪಟ್ಟಂತವುಗಳು ಆದ್ರೆ ಭಾರತದ ಈ ಒಂದು ಜಿಲ್ಲೆ ಮಾತ್ರ ಮೂರು ರಾಜ್ಯ ಹಾಗೂ ಎರಡು ದೇಶಗಳಿಗೆ ಸಂಬಂಧಪಟ್ಟಂತಹ ಜಿಲ್ಲೆಯಾಗಿದೆ. ಯಾವುದು ಆ ಜಿಲ್ಲೆ? ಯಾವ ರಾಜ್ಯದಲ್ಲಿದೆ?
ಇದನ್ನೂ ಓದಿ:ದೇಶದ ಈ ಕಾಲೇಜಿನಿಂದಲೇ ಅತಿ ಹೆಚ್ಚು IAS ಅಧಿಕಾರಿಗಳು ಆಗೋದು.. ಭಾರತದಲ್ಲಿ ಅದು ಎಲ್ಲಿದೆ?
ನಮ್ಮ ದೇಶದಲ್ಲಿರುವ ಎಲ್ಲಾ ರಾಜ್ಯಗಳ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ರಾಜ್ಯಗಳು.ತನ್ನದೇ ಸಾಂಸ್ಕೃತಿಕ ಹಾಗೂ ಪಾರಂಪರಿಕ ದೃಷ್ಟಿಯಿಂದ ಗುರುತಿಸಿಕೊಂಡಿವೆ ದೇಶದ ಎಲ್ಲ ರಾಜ್ಯಗಳು ಎಲ್ಲ ನಗರಗಳು ಹಾಗೂ ಎಲ್ಲಾ ಜಿಲ್ಲೆಗಳು ಕೂಡ ಇದಕ್ಕೆ ಹೊರತಲ್ಲ. ದೇಶದಲ್ಲಿ ಒಟ್ಟು 28 ರಾಜ್ಯಗಳಿವೆ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿವೆ ಇವೆಲ್ಲವುಗಳಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ 800 ಎಂದು ಹೇಳಲಾಗುತ್ತದೆ. ಆದ್ರೆ ಇಷ್ಟೆಲ್ಲಾ ಜಿಲ್ಲೆಗಳ ನಡುವೆ ಆ ಒಂದು ಜಿಲ್ಲೆ ಮಾತ್ರ ದೇಶದ ಮೂರು ರಾಜ್ಯ ಹಾಗೂ ಎರಡು ವಿದೇಶಗಳ ಜೊತೆ ಸೇರಿಕೊಂಡಿದೆ. ಇದರ ಬಗ್ಗೆ ಅನೇಕರಿಗೆ ಗೊತ್ತಿಲ್ಲ.
/newsfirstlive-kannada/media/post_attachments/wp-content/uploads/2025/03/DARJALING-1.jpg)
ಇದು ಒಂದು ಬೆಟ್ಟಗುಡ್ಡಗಳಿಂದ ಕೂಡಿರುವಂತಹ ಪ್ರದೇಶ, ಸೌಂದರ್ಯರಾಶಿಯನ್ನೇ ತನ್ನೊಡಲಲ್ಲಿ ಇಟ್ಟುಕೊಂಡು ನಳನಳಸಿವ ಸ್ಥಳ. ಇಲ್ಲಿರುವ ಅನೇಕ ತೋಟಗಳು ವಿಶ್ವಪ್ರಸಿದ್ಧಿಯನ್ನು ಪಡೆದಿವೆ. ಇಷ್ಟಕ್ಕೂ ನಾವು ಹೇಳುತ್ತಿರುವುದು ಯಾವ ಜಿಲ್ಲೆಯ ಬಗ್ಗೆ ಅಂದ್ರೆ ಅದು ಡಾರ್ಜಲಿಂಗ್ ಬಗ್ಗೆ. ಈ ಒಂದು ಜಿಲ್ಲೆ ಮೂರು ರಾಜ್ಯಗಳು ಹಾಗೂ ಎರರು ದೇಶಗಳ ನಡುವೆ ಬರುತ್ತದೆ. ಈ ಒಂದು ಜಿಲ್ಲೆಯ ದಕ್ಷಿಣ ಪೂರ್ವಭಾಗ ಪಶ್ಚಿಮ ಬಂಗಾಳದೊಂದಿಗೆ ಹೊಂದಿಕೊಳ್ಳುತ್ತದೆ. ದಕ್ಷಿಣ ಪಶ್ಚಿಮ ಭಾಗ ಬಿಹಾರದ ಕಿಶನಗಂಗಾ ಜೊತೆ ಹೊಂದಿಕೊಂಡರೆ. ಉತ್ತರದ ದಿಕ್ಕಿನಲ್ಲಿ ಇದು ಸಿಕ್ಕಿಂ ರಾಜ್ಯದಲ್ಲಿ ಒಂದಿಷ್ಟು ಪ್ರದೇಶಗಳಲ್ಲಿ ವಿಸ್ತರಿಸಿದೆ.
ಇದನ್ನೂ ಓದಿ:ಭಾರತದ ಈ ರಾಜ್ಯದಲ್ಲಿದ ನಾಗಲೋಕ.. ಇಲ್ಲಿ ಎಷ್ಟು ಪ್ರಬೇಧದ ಸರ್ಪಗಳಿವೆ ಗೊತ್ತಾ?
/newsfirstlive-kannada/media/post_attachments/wp-content/uploads/2025/03/DARJALING-2.jpg)
ಇತ್ತ ದಕ್ಷಿಣ ದಿಕ್ಕಿನತ್ತ ಈ ಡಾರ್ಜಲಿಂಗ್​ ಬಾಂಗ್ಲಾದೇಶದವರೆಗೆ ತನ್ನ ಪ್ರದೇಶದ ವಿಸ್ತಿರ್ಣತೆ ಹೊಂದಿದೆ ಮತ್ತು ಉತ್ತರ ಪಶ್ಚಿಮ ದಿಕ್ಕಿನಲ್ಲಿ ನೇಪಾಳಿನೊಂದಿಗೆ ನಂಟನ್ನು ಹೊಂದಿದೆ. ಹೀಗೆ ಈ ಒಂದು ಜಿಲ್ಲೆ ಮೂರು ರಾಜ್ಯಗಳ ಹಾಗೂ ಎರಡು ದೇಶಗಳ ನಡುವೆ ಗುರುತಿಸಿಕೊಳ್ಳುವ ದೇಶದ ಏಕೈಕ ಜಿಲ್ಲೆ ಎಂಬ ಖ್ಯಾತಿಯನ್ನು ಪಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us