/newsfirstlive-kannada/media/post_attachments/wp-content/uploads/2025/01/NAMELESS-RAILWAY-STATION.jpg)
ಭಾರತದಲ್ಲಿ ಒಟ್ಟು 7112 ರೈಲ್ವೆ ನಿಲ್ದಾಣಗಳಿವೆ. ಇವೆಲ್ಲವೂ ಕೂಡ ಭಾರತೀಯ ರೈಲ್ವೆ ವಿಭಾಗದ ನಿಯಂತ್ರಣದಲ್ಲಿವೆ. ಪ್ರತಿಯೊಂದು ರೈಲ್ವೆ ನಿಲ್ದಾಣಕ್ಕೂ ಆಯಾ ಊರಿನ ಹೆಸರಿನ, ಇಲ್ಲವೇ ಪ್ರಸಿದ್ಧ ವ್ಯಕ್ತಿಗಳ, ಸ್ವಾತಂತ್ರ್ಯ ಹೋರಾಟಗಾರರ, ಮಾಜಿ ಪ್ರಧಾನಿಗಳ ಹೆಸರು ಇಟ್ಟಿರುತ್ತಾರೆ. ಹೆಸರಿಲ್ಲದೇ ಗುರುತಿಸಿಕೊಳ್ಳುವ ರೈಲ್ವೆ ನಿಲ್ದಾಣ ಇರಲು ಸಾಧ್ಯವಾ. ರೈಲ್ವೆ ನಿಲ್ದಾಣ ಎಂದಮೇಲೆ ಒಂದು ಹೆಸರು ಇರಲೇಬೇಕು ಎಂಬ ನಿಮ್ಮ ವಾದ ಅಲ್ವಾ. ಆದರೆ ಭಾರತದಲ್ಲಿ ಒಂದು ರೈಲ್ವೆ ನಿಲ್ದಾಣವಿದೆ. ಇದಕ್ಕೊಂದು ಹೆಸರು ಇಂದಿನವರೆಗೂ ಇಡಲಾಗಿಲ್ಲ. ಇಡೀ ಭಾರತದಲ್ಲಿ ಹೆಸರೇ ಇಲ್ಲದ ಏಕೈಕ ರೈಲ್ವೆ ನಿಲ್ದಾಣ ಎಂದರೆ ಇದೆ.
ಪಶ್ಚಿಮ ಬಮಗಾಳದ ಬುರದ್ವಾನ್ ನಗರದಿಂದ 35 ಕಿಲೋ ಮೀಟರ್ ದೂರದಲ್ಲಿರುವ ಈ ಒಂದು ರೈಲ್ವೆ ನಿಲ್ದಾಣಕ್ಕೆ 2008ರಿಂದಲೂ ಯಾವುದೇ ಹೆಸರಿಲ್ಲ. ಇದು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕೂಡ ಇದೊಂದು ಹೆಸರಿಲ್ಲದ ನಿಲ್ದಾಣವಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ: GSLV-F15: ಸಾಧನೆಯಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು.. ಉಡಾವಣೆಗೆ ಈಗ ಶತಕದ ಸಂಭ್ರಮ
ಈ ರೈಲ್ವೆ ನಿಲ್ದಾಣಕ್ಕೆ ಹೆಸರು ಇಡದೇ ಇರಲು ಕಾರಣ ಆ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಬರುವ ಎರಡು ಹಳ್ಳಿಗಳ ನಡುವಿನ ಸಂಘರ್ಷ. ಈ ಒಂದು ರೈಲ್ವೆ ನಿಲ್ದಾಣ ರೈನಾ ಮತ್ತು ರೈನಾನಗರ ಗ್ರಾಮಗಳ ನಡುವೆ ಬರುತ್ತದೆ. ಬನ್ಕೂರ್-ಮಸಗ್ರಾಮ್ ರೈಲ್ವೆ ಲೈನ್ನಲ್ಲಿ ಈ ನಿಲ್ದಾಣವಿದೆ. ಎರಡು ಗ್ರಾಮಗಳ ನಡುವಿನ ಸಂಘರ್ಷದಿಂದಾಗಿ ಇಂದಿನವರೆಗೂ ಈ ರೈಲು ನಿಲ್ದಾಣಕ್ಕೆ ಹೆಸರು ಇಡಲಾಗಿಲ್ಲ.
ಇದನ್ನೂ ಓದಿ:ಬ್ರಿಟಿಷರಿಗೆ ಈ ಒಂದು ರಾಜ್ಯದ ಮೇಲೆ ರಾಜ್ಯಭಾರ ಮಾಡಲು ಎಂದಿಗೂ ಸಾಧ್ಯವಾಗಲಿಲ್ಲಾ! ಯಾವುದು ಆ ರಾಜ್ಯ?
ಹಳದಿ ಬಣ್ಣದ ಖಾಲಿ ಬೋರ್ಡ್ ಈ ರೈಲ್ವೆ ನಿಲ್ದಾಣದಲ್ಲಿ ನಾವು ಕಾಣಬಹುದು ಬನ್ಕೂರಾ ಮತ್ತು ಮಸಗ್ರಾಮ್ ನಡುವೆ ಓಡುವ ರೈಲುಗಳು ಈ ಒಂದು ನಿಲ್ದಾಣದಲ್ಲಿ ಸ್ಟಾಪ್ ಕೊಡುತ್ತವೆ. ದಿನಕ್ಕೆ ಒಟ್ಟು 6 ಟ್ರೈನ್ಗಳು ಇಲ್ಲಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ಹೋಗಿತ್ತವೆ.
ಈ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ನಬಕ್ಕುಮಾರ್ ನಂದಿ ಹೇಳುವ ಪ್ರಕಾರ ಈ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡುವ ಕಾರ್ಯ ನಡೆಯುತ್ತಿದೆ ಸದ್ಯ ಎರಡು ಗ್ರಾಮದವರು ರೈಲ್ವೆ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದಾರೆ. ಸದ್ಯದರಲ್ಲಿಯೇ ಅದು ಒಂದು ನಿರ್ಣಯಕ್ಕೆ ಬಂದು ರೈಲ್ವೆ ನಿಲ್ದಾಣಕ್ಕೆ ಹೆಸರಿಡಲಾಗುವುದು ಎಂದು ಹೇಳಿದ್ದಾರೆ. ಇನ್ನು ಇಲ್ಲಿಗೆ ಟಿಕೆಟ್ ಪಡೆದುಕೊಳ್ಳು ಪ್ರಯಾಣಿಕರು ರೈನ್ನಗರ ನಿಲ್ದಾಣಕ್ಕೆ ಟಿಕೆಟ್ ನೀಡಿ ಎಂದೇ ಪಡೆಯುತ್ತಾರೆ ಆದ್ರೆ ರೈಲ್ವೆ ನಿಲ್ದಾಣಕ್ಕೆ ಆ ಗ್ರಾಮದ ಹೆಸರು ಇಡಲು ರೈನಾ ಗ್ರಾಮದವರು ವಿರೋಧಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ