150 ಕೋಟಿ ದಾಟಲಿರೋ ಭಾರತದ ಜನಸಂಖ್ಯೆ; ಮದುವೆ ಆಗಲು ಗಂಡಿಗೆ ಹೆಣ್ಣೇ ಸಿಗಲ್ಲ ಎಂದರೆ ನಂಬಲೇಬೇಕು!

author-image
Gopal Kulkarni
Updated On
150 ಕೋಟಿ ದಾಟಲಿರೋ ಭಾರತದ ಜನಸಂಖ್ಯೆ; ಮದುವೆ ಆಗಲು ಗಂಡಿಗೆ ಹೆಣ್ಣೇ ಸಿಗಲ್ಲ ಎಂದರೆ ನಂಬಲೇಬೇಕು!
Advertisment
  • 12 ವರ್ಷಗಳಲ್ಲಿ ಭಾರತೀಯರಾದ ನಾವು ಎಷ್ಟು ಸಂಖ್ಯೆಯಲ್ಲಿರಲಿದ್ದೇವೆ?
  • ಕೇಂದ್ರ ಸರ್ಕಾರದ ಆ ಇಲಾಖೆ ಬಿಡುಗಡೆ ಮಾಡಿದ ದಾಖಲೆಯಲ್ಲಿ ಏನಿದೆ
  • ಲಿಂಗಾನುಪಾತ ಹೆಚ್ಚಾಗಲಿದೆ, 15 ವರ್ಷದೊಳಗಿನವರ ಸಂಖ್ಯೆ ಕಡಿಮೆ ಆಗಲಿದೆ

ನವದೆಹಲಿ: 2036ರಲ್ಲಿ ಭಾರತದ ಜನಸಂಖ್ಯೆ 152 ಕೋಟಿಗೆ ತಲುಪುವ ನಿರೀಕ್ಷೆಯೊಂದು ಸದ್ಯ ಹುಟ್ಟಿದೆ. ಕೇಂದ್ರ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ ನೀಡಿದ ಅಂಕಿ ಅಂಶಗಳ ಪ್ರಕಾರ, ಮುಂದಿನ 12 ವರ್ಷಗಳಲ್ಲಿ ಭಾರತದ ಜನಸಂಖ್ಯೆ 150 ಕೋಟಿಗಿಂತಲೂ ಅಧಿಕವಾಗಲಿದೆ ಎಂದು ಭವಿಷ್ಯ ನುಡಿದಿದೆ.

ಲಿಂಗಾನುಪಾತದಲ್ಲಿಯೂ ಬದಲಾವಣೆ

ಇನ್ನೂ ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 2036 ರಲ್ಲಿ ಲಿಂಗಾನುಪಾತದಲ್ಲಿಯೂ ಕೂಡ ಬದಲಾವಣೆಯಾಗಲಿದೆ. ಬರುವ ವರ್ಷಗಳಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. 2011ರ ಜನಗಣತಿಯ ಪ್ರಕಾರ ಲಿಂಗಾನುಪಾತ 100:943 ರಷ್ಟಿತ್ತು. ಅಂದ್ರೆ 1000 ಗಂಡು ಮಕ್ಕಳಿಗೆ 943ರಷ್ಟು ಹೆಣ್ಣು ಮಕ್ಕಳಿದ್ದರು. ಮುಂದೆ ಅಂದ್ರೆ 2036ರಲ್ಲಿ ಇದರಲ್ಲಿ ಬದಲಾವಣೆಯಾಗಲಿದೆ. 2036ರಲ್ಲಿ 952:1000 ಆಗಲಿದೆ ಎಂದು ಹೇಳಲಾಗುತ್ತಿದೆ. ಅಂದ್ರೆ 1000 ಪುರುಷರಿಗೆ 952 ಸ್ತ್ರೀಯರು ಇರುತ್ತಾರೆ ಎಂದು ಅಂಕಿ ಅಂಶಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಕೌನ್​ ಬನೇಗಾ ಕರೋಡಪತಿ.. ₹25 ಲಕ್ಷದ ಮಹಾಭಾರತದ ಪ್ರಶ್ನೆಗೆ ಉತ್ತರಿಸಲಾಗದ ಬೆಂಗಳೂರಿಗ; ಏನದು?

ಇನ್ನೂ 2011ಕ್ಕೆ ಹೋಲಿಸಿದರೆ 15 ವರ್ಷದೊಳಗಿನ ಮಕ್ಕಳ ಸಂಖ್ಯೆ 2036ರಲ್ಲಿ ಕಡಿಮೆಯಾಗಲಿದೆ. ಅದೇ ರೀತಿ 60 ವರ್ಷಕ್ಕೆ ಮೇಲ್ಪಟ್ಟವರ ಸಂಖ್ಯೆ 2011ಕ್ಕೆ ಹೋಲಿಸಿದರೆ 2036ಕ್ಕೆ ಅವರ ಸಂಖ್ಯೆ ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment