ನಾಳೆಯ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ; ಕ್ಯಾಪ್ಟನ್ ಸೇರಿ ಮೂವರಿಗೆ ಕೊಕ್..!

author-image
Ganesh
Updated On
ಅಜಿತ್ ಅಗರ್ಕರ್, ಗೌತಮ್ ಗಂಭೀರ್ ಎದುರು ರೋಹಿತ್ ಶರ್ಮಾ ಹೇಳಿದ್ದೇನು? ಕೊನೇ ಟೆಸ್ಟ್​ ಆಡ್ತಾರಾ ಹಿಟ್​ಮ್ಯಾನ್?
Advertisment
  • ಭಾರತ-ಆಸ್ಟ್ರೇಲಿಯಾ ಸಿಡ್ನಿ ಟೆಸ್ಟ್​​​ಗೆ ಕೌಂಟ್​ಡೌನ್​​
  • ನಾಳೆಯಿಂದ ಆರಂಭವಾಗಲಿಗೆ ಕೊನೆಯ ಪಂದ್ಯ
  • ರೋಹಿತ್​ - ಕೊಹ್ಲಿಗೆ ಈ ಪಂದ್ಯವೇ ಲಾಸ್ಟ್​ ಚಾನ್ಸ್​

ಪ್ರತಿಷ್ಟಿತ ಬಾರ್ಡರ್​​-ಗವಾಸ್ಕರ್​ ಟೆಸ್ಟ್​ ಸರಣಿ ಅಂತಿಮ ಘಟ್ಟ ತಲುಪಿದೆ. ಕೊನೆಯ ಟೆಸ್ಟ್​ಗೆ ಕೌಂಟ್​ಡೌನ್​ ಶುರುವಾಗಿದ್ದು, ಮೆಲ್ಬರ್ನ್​ನಲ್ಲಿ ಮುಖಭಂಗ ಅನುಭವಿಸಿದ ಟೀಮ್​ ಇಂಡಿಯಾದ ಮುಂದೆ ಸಾಲು ಸಾಲು ಸವಾಲುಗಳಿವೆ. ಈ ಸವಾಲುಗಳನ್ನ ಮೀರಿ ಸಿಡ್ನಿ ಟೆಸ್ಟ್​​ ಗೆಲ್ಲಲೇ ಬೇಕಿದೆ. ಇಲ್ಲಿದಿದ್ರೆ ಸರಣಿಯಲ್ಲೂ ಸೋಲಾಗಲಿದೆ. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ ಕನಸೂ ನುಚ್ಚು ನೂರಾಗಲಿದೆ.

ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಾಳೆಯಿಂದ ಮಹತ್ವದ ಫೈಟ್​ ಆರಂಭವಾಗಲಿದೆ. ಮೆಲ್ಬರ್ನ್​ನಲ್ಲಿ ಮುಖಭಂಗ ಅನುಭವಿಸಿದ ಟೀಮ್​ ಇಂಡಿಯಾ ಸರಣಿಯಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಇದೀಗ ಸಿಡ್ನಿ ಕದನದಲ್ಲಿ ಕಾಂಗರೂಗಳ ಬೇಟೆಯಾಡಿ ಗೆಲುವಿನ ಟ್ರ್ಯಾಕ್​ಗೆ ಮರಳಲು ಪಣತೊಟ್ಟಿದೆ.

ಇದನ್ನೂ ಓದಿ:ಆರ್​​​ಸಿಬಿ ಆಟಗಾರನಿಗೆ ಜಾಕ್​ಪಾಟ್​​; ಟೀಮ್​ ಇಂಡಿಯಾ ಪರ ಆಡಲು ಸುವರ್ಣಾವಕಾಶ

publive-image

ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಪಾಲಿಗೆ ಸಿಡ್ನಿ ಟೆಸ್ಟ್​ ಪಂದ್ಯವೇ ಕೊನೆಯ ಅವಕಾಶ. ಈಗಾಗಲೇ ರೋಹಿತ್​ ಶರ್ಮಾಗೆ ನಾಯಕತ್ವದ ಜೊತೆಗೆ ತಂಡದಲ್ಲಿನ ಸ್ಥಾನಕ್ಕೂ ಕುತ್ತು ಬಂದಿದೆ. ಮೊದಲ ಪಂದ್ಯಲ್ಲಿ ಶತಕ ಸಿಡಿಸಿದ್ರೂ, ನಂತರದ ಪಂದ್ಯಗಳಲ್ಲಿ ಫ್ಲಾಪ್​ ಆಗಿರೋ ಕೊಹ್ಲಿ ಸ್ಥಾನವೂ ಅಭದ್ರವಾಗಿದೆ. ಸತತ ವೈಫಲ್ಯದಿಂದ ಬಳಲ್ತಾ ಇರೋ ಸೂಪರ್​ಸ್ಟಾರ್​ಗಳು ಸಿಡ್ನಿಯಲ್ಲಿ ಸಿಡಿದ್ದೆದ್ರೆ ಬಚಾವ್​. ಇಲ್ಲಿದಿದ್ರೆ, ಟೆಸ್ಟ್​ ತಂಡದಿಂದ ಇಬ್ಬರೂ ಹೊರಬೀಳೋದು ಪಕ್ಕಾ. ಮತ್ತೊಂದು ಕಡೆ ರೋಹಿತ್ ಶರ್ಮಾಗೆ ನಾಳೆ ಆಡುವ ಅವಕಾಶ ಇಲ್ಲ. ರೋಹಿತ್ ಬದಲಿಗೆ ಗಿಲ್ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ರಿಷಬ್ ಪಂತ್ ಕೂಡ ಪ್ಲೇಯಿಂಗ್ 11ನಲ್ಲಿ ಇರಲ್ಲ ಎಂದು ವರದಿಗಳು ಹೇಳಿವೆ. ಆಕಾಶ್ ದೀಪ್ ಗಾಯದಿಂದ ಅಧಿಕೃತವಾಗಿ ಹೊರ ಬಿದ್ದಿದ್ದಾರೆ.

ಸಿರಾಜ್​ಗೆ ರೆಸ್ಟ್​.. ಪ್ರಸಿದ್ಧ್​ ಕೃಷ್ಣಗೆ ಸಿಗುತ್ತಾ ಚಾನ್ಸ್?

ಲೈನ್​ AND ಲೆಂಥ್​ ಕಂಡುಕೊಳ್ಳುವಲ್ಲಿ ಫೇಲ್​ ಆಗ್ತಿರೋ ವೇಗಿ ಸಿರಾಜ್​ ಆಸಿಸ್​​ ಬ್ಯಾಟರ್​​ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ. ಈ​ ಸರಣಿಯಲ್ಲಿ ಇನ್​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​​ ನೀಡಿರೋ ಸಿರಾಜ್​ಗೆ ಅಂತಿಮ ಪಂದ್ಯದಿಂದ ವಿಶ್ರಾಂತಿ ನೀಡೋ ಸಾಧ್ಯತೆ ಇದೆ. ಸಿರಾಜ್​ಗೆ ವಿಶ್ರಾಂತಿ ನೀಡಿ ಕನ್ನಡಿಗ ಪ್ರಸಿದ್ಧ್​ ಕೃಷ್ಣಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡೋ ಸಾಧ್ಯತೆ ದಟ್ಟವಾಗಿದೆ.

ಪಂದ್ಯಕ್ಕೆ ಟರ್ನಿಂಗ್​ ಟ್ರ್ಯಾಕ್​​..!

ಅಂತಿಮ ಟೆಸ್ಟ್​ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ಟರ್ನಿಂಗ್​ ಟ್ರ್ಯಾಕ್​ ಸಿದ್ಧಗೊಂಡಿದೆ. ಆರಂಭದಲ್ಲಿ ವೇಗಿಗಳಿಗೆ ನೆರವು ನೀಡೋ ಪಿಚ್​​ ಬಳಿಕ ಸ್ಪಿನ್ನರ್​ಗಳ ಸಹಾಯ ಮಾಡಲಿದೆ. ಹೀಗಾಗಿ ಟೀಮ್​ ಇಂಡಿಯಾ ಇಬ್ಬರು ಸ್ಪಿನ್ನರ್​​ಗಳನ್ನ ಮುಂದುವರೆಸೋ ಸಾಧ್ಯತೆ ದಟ್ಟವಾಗಿದೆ. ರವೀಂದ್ರ ಜಡೇಜಾ ಜೊತೆಗೆ ವಾಂಷಿಗ್ಟನ್​​ ಸುಂದರ್​ ಸ್ಪಿನ್​ ಆಲ್​​ರೌಂಡರ್​ ಕೋಟಾದಲ್ಲಿ ಆಡಲಿದ್ದಾರೆ.

ಇದನ್ನೂ ಓದಿ:ಆರ್​​​ಸಿಬಿ ಆಟಗಾರನಿಗೆ ಜಾಕ್​ಪಾಟ್​​; ಟೀಮ್​ ಇಂಡಿಯಾ ಪರ ಆಡಲು ಸುವರ್ಣಾವಕಾಶ

publive-image

ಸಿಡ್ನಿಯಲ್ಲಿ ಸಿಡಿದೆದ್ರೆ ಮಾತ್ರ WTC ಫೈನಲ್​

4ನೇ ಟೆಸ್ಟ್​ ಪಂದ್ಯದ ಸೋಲಿನೊಂದಿಗೆ ಟೀಮ್​ ಇಂಡಿಯಾದ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಎಂಟ್ರಿಯ ದಾರಿ ಸಂಕಷ್ಟಕ್ಕೆ ಸಿಲುಕಿದೆ. ಸಿಡ್ನಿ ಟೆಸ್ಟ್​ ಗೆದ್ರೆ ಮಾತ್ರ ಫೈನಲ್​ ಪ್ರವೇಶದ ಕನಸು ಜೀವಂತವಾಗಿರಲಿದೆ. ಒಂದು ವೇಳೆ ಸೋತ್ರೆ ಫೈನಲ್​ ರೇಸ್​ನಿಂದ ಹೊರಬೀಳಲಿದೆ. ಸಿಡ್ನಿ ಟೆಸ್ಟ್​ ಗೆದ್ರೂ ನಂತರ ನಡೆಯೋ ಆಸ್ಟ್ರೇಲಿಯಾ-ಶ್ರೀಲಂಕಾ ಸರಣಿಯ ಮೇಲೆ ಭಾರತ ತಂಡದ ಭವಿಷ್ಯ ನಿರ್ಧಾರ ಆಗಲಿದೆ.

ಕೊನೆಯ 2 ದಿನದಾಟಕ್ಕೆ ಮಳೆಯ ಕಾಟ

ಸಿಡ್ನಿ ಟೆಸ್ಟ್​ ಪಂದ್ಯವನ್ನು ಟೀಮ್​ ಇಂಡಿಯಾ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇದ್ರ ನಡುವೆ ಪಂದ್ಯದ 4 ಮತ್ತು 5ನೇ ದಿನ ಮಳೆಯ ಸಾಧ್ಯತೆ ಎದುರಾಗಿದೆ. ವರುಣನ ಅವಕೃಪೆ ತೋರಿ ಪಂದ್ಯವೇನಾದ್ರೂ ಡ್ರಾನಲ್ಲಿ ಅಂತ್ಯವಾದ್ರೆ, ಸರಣಿ ಆಸ್ಟ್ರೇಲಿಯಾ ಪಾಲಾಗಲಿದೆ. ಟೀಮ್​ ಇಂಡಿಯಾದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶದ ಕನಸೂ ನುಚ್ಚು ನೂರಾಗಲಿದೆ. ಒಟ್ಟಿನಲ್ಲಿ ಸಿಡ್ನಿ ಟೆಸ್ಟ್​ ಕದನ ಟೀಮ್​ ಇಂಡಿಯಾ ಮುಂದೆ ಹಲವು ಚಾಲೆಂಜ್​​ಗಳನ್ನ ತಂದಿಟ್ಟಿದೆ. ಈ ಎಲ್ಲಾ ಸವಾಲುಗಳನ್ನು ಮೀರಿ ಟೀಮ್​ ಇಂಡಿಯಾ ಗೆದ್ದು ಬೀಗುತ್ತಾ? ಕಾದು ನೋಡೋಣ.

ಇದನ್ನೂ ಓದಿ:ಬಿಸಿಸಿಐನಿಂದ ಬಿಗ್​ ಶಾಕ್​​; ಟೀಮ್​ ಇಂಡಿಯಾದಿಂದ ರಿಷಬ್​ ಪಂತ್​​ ಔಟ್​​; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment