ಪಾಕ್​ ಅಣ್ವಸ್ತ್ರ ಬಳಸಿದ್ರೆ ಅದರ ಅಂತ್ಯ ಅದೇ ಆಹ್ವಾನಿಸಿಕೊಂಡಂತೆ.. 3 ಹಂತದಲ್ಲಿ ಪಾಕ್​ನ ಅಂತ್ಯ..!

author-image
Ganesh
Updated On
ಪಾಕ್​ ಅಣ್ವಸ್ತ್ರ ಬಳಸಿದ್ರೆ ಅದರ ಅಂತ್ಯ ಅದೇ ಆಹ್ವಾನಿಸಿಕೊಂಡಂತೆ.. 3 ಹಂತದಲ್ಲಿ ಪಾಕ್​ನ ಅಂತ್ಯ..!
Advertisment
  • ಪಾಕ್​ ಅಣ್ವಸ್ತ್ರ ಪ್ರಯೋಗಿಸಿದ್ರೆ ಎದುರಿಸಲು ಭಾರತ ಸಿದ್ಧವಿದ್ಯಾ?
  • ಅಣ್ವಸ್ತ್ರ ದಾಳಿ ಬೆದರಿಕೆ ಹಾಕುತ್ತಿರುವ ಪಾಕಿಸ್ತಾನ
  • ಪಾಕ್ ಅಣ್ವಸ್ತ್ರ ದಾಳಿಗೆ ಭಾರತದ ರಕ್ಷಣಾ ವ್ಯವಸ್ಥೆ ಹೇಗಿದೆ..?

ಭಾರತ - ಪಾಕಿಸ್ತಾನ ಎರಡೂ ದೇಶಗಳು ಯುದ್ಧದ ತಯಾರಿಯಲ್ಲಿವೆ. ಗಡಿಯಲ್ಲಿ ಮಿಲಿಟರಿ ಹಾಗೂ ಭದ್ರತಾ ಚಟುವಟಿಕೆಗಳನ್ನು ಗಮನಿಸಿದರೆ ಯುದ್ಧ ನಡೆಯೋದು ಪಕ್ಕಾ ಎನ್ನಲಾಗುತ್ತಿದೆ. ಕಾಲು ಕೆದರಿ ಬರುವ ಪಾಕಿಸ್ತಾನ, ಗಡಿಯಲ್ಲಿ ತನ್ನ ಅಪ್ರಚೋದಿತ ಗುಂಡಿನ ದಾಳಿಯನ್ನ ನಡೆಸುತ್ತಲೇ ಇದೆ.

ಇದನ್ನೂ ಓದಿ: ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಸಾಧ್ಯತೆ.. ಯಾಕೆ ಈ ಪ್ರದೇಶಗಳಲ್ಲೇ ಯುದ್ಧ ಕವಾಯತು..?

publive-image

ಇದರ ಮಧ್ಯೆ ಭಾರತದ ಮೇಲೆ ಯುದ್ಧ ಸಾರುವುದಾಗಿ ಗೊಡ್ಡು ಬೆದರಿಕೆಗಳನ್ನೂ ಹಾಕ್ತಿದೆ. ನಮ್ಮ ಬಳಿ ಪರಮಾಣು ಅಸ್ತ್ರ ಇದೆ. ಅದನ್ನು ಭಾರತದ ಮೇಲೆ ಪ್ರಯೋಗ ಮಾಡ್ತೇವೆ ಎಂದು ಬೆದರಿಕೆ ಹಾಕ್ತಿದೆ. ಒಂದು ವೇಳೆ ಭಾರತ ಮತ್ತು ಪಾಕ್ ನಡುವೆ ಐದನೇ ಬಾರಿಗೆ ಯುದ್ಧ ಸಂಭವಿಸಿದರೆ, ಭಾರತದ ಮೇಲೆ ಪಾಕ್ ಅಣು ಬಾಂಬ್ ಪ್ರಯೋಗಕ್ಕೆ ಮುಂದಾದರೆ ಅದನ್ನು ಎದುರಿಸಲು ಭಾರತ ಸಿದ್ಧವಾಗಿದೆಯಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಒಂದು ವೇಳೆ ಪಾಕಿಸ್ತಾನ ಅಂಥ ನಿರ್ಧಾರ ಕೈಗೊಂಡರೆ ಭಯಪಡುವ ಅವಶ್ಯಕತೆ ಇಲ್ಲ. ಪಾಕಿಸ್ತಾನದ ಅಣ್ವಸ್ತ್ರ ದಾಳಿ ಎದುರಿಸಲು ಭಾರತದ ಸೇನೆ ಬಳಿ ಎಲ್ಲಾ ವ್ಯವಸ್ಥೆಗಳೂ ಇವೆ.

ಪಾಕ್ ದಾಳಿಯಿಂದ ರಕ್ಷಣೆ ಹೇಗೆ..?

ಮೊದಲ ಹಂತ: ಒಂದು ವೇಳೆ ಪಾಕ್ ಭಾರತದ ಮೇಲೆ ಅಣ್ವಸ್ತ್ರ ದಾಳಿಗೆ ಮುಂದಾದರೆ, ಭಾರತದ ಪೃಥ್ವಿ ಏರ್ ಡಿಫೆನ್ಸ್ ಸಿಸ್ಟಮ್, ಬ್ಯಾಲಿಸ್ಟಿಕ್ ಮಿಸೈಲ್ ಅನ್ನು ಇಂಟರ್ ಸೆಪ್ಟ್ ಮಾಡಿ ಹೊಡೆದುರುಳಿಸುತ್ತದೆ. ಭೂಮಿಯ ಹೊರವಲಯದಲ್ಲಿ ಬರುವ ಪಾಕಿಸ್ತಾನದ ಬ್ಯಾಲಿಸ್ಟಿಕ್ ಮಿಸೈಲ್​ಗಳನ್ನು ಸುಲಭವಾಗಿ ಹೊಡೆದುರುಳಿಸಲಿದೆ.

ಇದನ್ನೂ ಓದಿ: ಯುದ್ಧ ಘೋಷಣೆ ಆಗೇಬಿಡುತ್ತಾ..? ನಾಳೆ ಪ್ರಧಾನಿ ಮೋದಿಯಿಂದ ಮಹತ್ವದ ನಿರ್ಧಾರ ಸಾಧ್ಯತೆ

publive-image

ಎರಡನೇ ಹಂತ: ಭಾರತದ ಸ್ವದೇಶಿ ಅಡ್ವಾನ್ಸ್ ಏರ್ ಡಿಫೆನ್ಸ್ ಸಿಸ್ಟಮ್, ಕೆಳಭಾಗದಲ್ಲಿ ಬರುವ ಮಿಸೈಲ್ ಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸಲಿದೆ. ಬಳಿಕ ಆಕಾಶ್ ಮಿಸೈಲ್ ಸಿಸ್ಟಮ್ , 250 ಕಿಮೀ ದೂರದ ಮಿಸೈಲ್​ಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸಲಿದೆ.

ಮೂರನೇ ಹಂತ: ರಷ್ಯಾದಿಂದ ಖರೀದಿಸಿರುವ ಎಸ್‌-400 ಟ್ರಿಂಪ್ ಏರ್ ಡಿಫೆನ್ಸ್ ಸಿಸ್ಟಮ್, ಬ್ಯಾಲಿಸ್ಟಿಕ್, ಕ್ರೂಸ್ ಮಿಸೈಲ್ ಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸಲಿದೆ. ಹೀಗೆ ಭಾರತಕ್ಕೆ ಸಂಪೂರ್ಣವಾಗಿ ಪಾಕಿಸ್ತಾನದ ಅಣ್ವಸ್ತ್ರ ದಾಳಿ, ಮಿಸೈಲ್ ದಾಳಿಯಿಂದ ರಕ್ಷಣೆ ಸಿಗಲಿದೆ.

ಇದನ್ನೂ ಓದಿ: POK ಗಡಿಯಲ್ಲಿ ಪಾಕಿಸ್ತಾನಿ ಸಚಿವನಿಂದ ಹೊಸ ನಾಟಕ.. ಹೆಂಗಿದೆ ಗೊತ್ತಾ ಹೈಡ್ರಾಮಾ..?

publive-image

ಪಾಕಿಸ್ತಾನವು ಭಾರತದ ಮೇಲೆ ಒಂದೇ ಒಂದು ಅಣ್ವಸ್ತ್ರವನ್ನು ದಾಳಿಗೆ ಬಳಸುವುದಿಲ್ಲ. ‘ಪಾಕ್ ಅಣ್ವಸ್ತ್ರ ಬಳಸಿದರೆ ಮರುಕ್ಷಣದಲ್ಲೇ ಪಾಕಿಸ್ತಾನವೇ ಇಲ್ಲವಾಗುತ್ತೆ’ ಎಂದು ಈ ಹಿಂದೆ ಜಾರ್ಜ್ ಫರ್ನಾಂಡೀಸ್‌ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಪಾಕಿಸ್ತಾನ ಅಣ್ವಸ್ತ್ರ ಬಳಸಿದರೆ ಅದರ ಅಂತ್ಯವನ್ನು ಅದೇ ಆಹ್ವಾನಿಸಿಕೊಂಡಂತೆ. ಯಾಕೆಂದರೆ ಭಾರತವು ರಫೇಲ್ ಫೈಟಲ್ ಜೆಟ್ ಮೂಲಕ ಪಾಕ್ ಮೇಲೆ ಅಣ್ವಸ್ತ್ರದ ಮಿಸೈಲ್ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಬ್ರಹ್ಮೋಸ್ ಕ್ಷಿಪಣಿಯ ಮೂಲಕವೂ ಭಾರತ ಪಾಕ್ ಮೇಲೆ ದಾಳಿ ನಡೆಸುವ ತಾಕತ್ತಿದೆ. ಇದರರ್ಥ ಪಾಕಿಸ್ತಾನವು ಒಂದೇ ಒಂದು ಅಣ್ವಸ್ತ್ರ ಬಳಸಿದರೂ, ಮರುಕ್ಷಣದಲ್ಲಿ ಮತ್ತೊಂದು ಅಣ್ವಸ್ತ್ರ ದಾಳಿ ನಡೆಸಲು ಪಾಕಿಸ್ತಾನವೇ ಇರಲ್ಲ ಅನ್ನೋದು ರಕ್ಷಣಾ ತಜ್ಞರು ವಾದ. ಅಷ್ಟೇ ಅಲ್ಲದೇ, ಭಾರತವು ಸ್ಯಾಟಲೈಟ್​ಗಳನ್ನು ಬಳಸಿ ಪಾಕಿಸ್ತಾನದ ಮೇಲೆ ನಿಗಾ ವಹಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮೂರು ಪ್ರತ್ಯೇಕ ಅಪಘಾತ.. ದಾರಿಯಲ್ಲೇ ಜೀವಬಿಟ್ಟ 9 ಪ್ರಯಾಣಿಕರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment