ಭಾರತೀಯ ಕುವರಿಗೆ ಒಲಿದ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಕಿರೀಟ
ಇತಿಹಾಸದಲ್ಲಿಯೇ ಮೊದಲ ಬಾರಿ ಭಾರತೀಯ ಯುವತಿಗೆ ಸಿಕ್ಕ ಈ ಪ್ರಶಸ್ತಿ
ಕಿರೀಟ ಮುಡಿಗೇರಿಸಿಕೊಂಡ ರಚೇಲ್ ಗುಪ್ತಾ ಇನ್ಸ್ಟಾದಲ್ಲಿ ಹೇಳಿದ್ದು ಏನು?
ಭಾರತೀಯ ಪಂಜಾಬಿ ಕುವರಿ, 20 ವರ್ಷದ ಚೆಲುವೆ ರಚೇಲ್ ಗುಪ್ತಾಗೆ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024ರ ಪ್ರಶಸ್ತಿ ಒಲಿದು ಬಂದಿದೆ. ಭಾರತೀಯ ಚೆಲುವೆಯೊಬ್ಬಳು ಮೊದಲ ಬಾರಿಗೆ ಈ ಮುಕುಟವನ್ನು ಧರಿಸಿದ ಖ್ಯಾತಿ ಈಗ ರಚೇಲ್ ಗುಪ್ತಾ ಅವರದ್ದಾಗಿದೆ. ಅಕ್ಟೋಬರ್ 25 ರಂದು ಒಟ್ಟು 70 ದೇಶಗಳಿಂದ ಭಾಗಿಯಾಗಿದ್ದ ಚೆಲುವೆಯರ ಹಿಂಡುಗಳಲ್ಲಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಆಗಿ ಹೊರಹೊಮ್ಮಿದ್ದು ರಚೇಲ್ ಗುಪ್ತಾ
ಈ ಒಂದು ಐತಿಹಾಸಿಕ ಜಯ ಗುಪ್ತಾಗಗೆ ಮತ್ತೊಂದು ಗರಿ ಗ್ರಾಂಡ್ ಪಗೀಯಂಟ್ಸ್ ಚಾಯ್ಸ್ ಅವಾರ್ಡ್ನ್ನು ಕೂಡ ತಂದುಕೊಟ್ಟಿದೆ. ಈ ಹಿಂದೆ ಲಾರಾ ದತ್ತಾ 2000ನೇ ಇಸ್ವಿಯಲ್ಲಿ ಮಿಸ್ ಯುನಿವರ್ಸ್ ಮುಕುಟುವನ್ನು ಧರಿಸುವ ಮೂಲಕ ಭಾರತಕ್ಕೆ ಇಂತಹುದೇ ಹೆಮ್ಮೆಯನ್ನು ತಂದುಕೊಟ್ಟಿದ್ದರು.
ಇದನ್ನೂ ಓದಿ: 13 ಲಕ್ಷದ ವಾಚ್.. 2 ಲಕ್ಷದ ಬ್ಯಾಗ್; ಆಧ್ಯಾತ್ಮಿಕ ವಾಗ್ಮಿ ಜೀವನ ಶೈಲಿಗೆ ಬೆಚ್ಚಿ ಬಿದ್ದ ನೆಟ್ಟಿಗರು; ಇವರ ಹಿನ್ನೆಲೆ ಏನು?
ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಆಯೋಜಕರು ರಚೇಲ್ ಗುಪ್ತಾ ಹೆಸರಿಗೆ ದಾಖಲಾದ ಪ್ರಶಸ್ತಿಯ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಶುಭಾಶಯಗಳು ರಚೇಲ್ ಗುಪ್ತಾ ಈ ಒಂದು ಕನಸಿನ ಕಿರೀಟವನ್ನು ನಿಮ್ಮದಾಗಿಸಿಕೊಂಡಿದ್ದಕ್ಕೆ ಎಂದು ಶುಭಾಶಯ ಹೇಳಿದ್ದು. ಅವರು ಅಪ್ರತಿಮ ಸೊಬಗು ಹೊಂದಿರುವ ಸುಂದರಿ ಹಾಗೂ ಅಷ್ಟೇ ಪ್ರತಿಭಾನ್ವಿತೆ. ಅವರ ಮುಂದಿನ ಪ್ರಯಾಣ ಯಶಸ್ಸು ಹಾಗೂ ಹೊಸ ಹೊಳಪಿನೊಂದಿಗೆ ಕೂಡಿರಲಿ ಎಂದ ಬರೆದಿದ್ದಾರೆ.
ಗುಪ್ತಾ ಕೂಡ ಈ ಒಂದು ಪೋಸ್ಟ್ನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ ನಾವು ಸಾಧಿಸಿದೆವು, ನಾವು ಭಾರತೀಯ ಇತಿಹಾಸದಲ್ಲಿಯೇ ಮೊದಲ ಬಾರಿ ಈ ಬಂಗಾರದ ಕಿರೀಟವನ್ನು ಗೆದ್ದಿದ್ದೇವೆ. ನನ್ನ ಮೇಲೆ ನಂಬಿಕೆಯಿಟ್ಟ ಎಲ್ಲರಿಗೂ ಧನ್ಯವಾದಗಳು. ನಾನು ಇದನ್ನು ಎಂದಿಗೂ ಮರೆಯುವುದಿಲ್ಲ . ನಾನು ಸದಾ ನೀವು ನೆನಪಿಸಿಕೊಳ್ಳುವ ರಾಣಿಯಾಗಿ ನಾನು ಇರುತ್ತೇನೆಂದು ಹೇಳಬಯಸುತ್ತೇನೆ ಎಂದು ರೇಚಾ ಗುಪ್ತಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಇನ್ನೂ ಕಾಡುತ್ತಿದೆ ನೋವು.. ಬಾಬಾ ಸಿದ್ಧಿಕಿ ಸಾವಿನ ಬಳಿಕ ಪ್ರತಿ ದಿನ ರಾತ್ರಿ ಮಾಡ್ತಿರೋದೇನು?
ರಚೇಲ್ ಗುಪ್ತಾ ಅವರ ಈ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಪ್ರಯಾಣ ಶುರುವಾಗಿದ್ದು ಅವರು ಮಿಸ್ ಗ್ರ್ಯಾಂಡ್ ಇಂಡಿಯಾ ಪ್ರಶಸ್ತಿಯನ್ನು ಕಳೆದ ಆಗಷ್ಟ್ನಲ್ಲಿ ಗೆದ್ದ ಬಳಿಕ. ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ರಚೇಲ್ ಗೆದ್ದಿದ್ದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಅಂದ್ರೆ 2022ರಲ್ಲಿ ರಚೇಲ್ ಗುಪ್ತಾ ಮಿಸ್ ಸೂಪರ್ ಟ್ಯಾಲೆಂಟ್ ಆಫ್ ದಿ ವರ್ಲ್ಡ್ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ