/newsfirstlive-kannada/media/post_attachments/wp-content/uploads/2025/03/Brahmanandam5.jpg)
ಭಾರತದ ಈ ಶ್ರೀಮಂತ ಹಾಸ್ಯ ನಟ ರಣಬೀರ್ ಕಪೂರ್, ಪ್ರಭಾಸ್ ಮತ್ತು ರಜನಿಕಾಂತ್​ ಅವರಂತಹ ಬಿಗ್ ಸೂಪರ್‌ಸ್ಟಾರ್‌ಗಳಿಗಿಂತಲೂ ಹೆಚ್ಚಿನ ಸಂಪತ್ತು ಹೊಂದಿದ್ದಾರೆ. ಕಪಿಲ್ ಶರ್ಮಾ ಇಡೀ ಭಾರತದ ಅತ್ಯಂತ ಜನಪ್ರಿಯ ಹಾಸ್ಯನಟ ಎಂಬುದು ಬಹುತೇಕರಿಗೆ ಗೊತ್ತಿದೆ. ಆದರೆ ಈ ಹಾಸ್ಯ ಕಲಾವಿದನ ಆಸ್ತಿ, ಸಂಪಾದನೆ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ.
ಕಪಿಲ್ ಶರ್ಮಾ ಅವರು ರಿಯಾಲಿಟಿ ಶೋ, ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದೇಶಾದ್ಯಂತ ಮನೆ ಮಾತಾಗಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಅವರೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹಲವರು ನಂಬುತ್ತಾರೆ. ಆದ್ರೆ, ಇದೀಗ ಕಪಿಲ್ ಶರ್ಮಾ ಅಲ್ಲದೇ ಅನೇಕ ಬಾಲಿವುಡ್ ತಾರೆಯರನ್ನೇ ಹಿಂದಿಕ್ಕಿದ್ದಾರೆ ಈ ಸ್ಟಾರ್​ ಹಾಸ್ಯ ನಟ.
ಇದನ್ನೂ ಓದಿ: ಭಾರತಕ್ಕೆ ಜಾಕ್‌ಪಾಟ್: ಒಂದಲ್ಲ.. ಎರಡಲ್ಲ.. 7 ಕಡೆ KGF ಮಾದರಿಯ ಚಿನ್ನದ ನಿಕ್ಷೇಪ ಪತ್ತೆ; ಗುಡ್‌ನ್ಯೂಸ್!
/newsfirstlive-kannada/media/post_attachments/wp-content/uploads/2025/03/Brahmanandam4.jpg)
ಹೌದು, ಪದ್ಮಶ್ರೀ ಪುರಸ್ಕೃತ ಹಾಸ್ಯ ನಟ ಬ್ರಹ್ಮಾನಂದಂ ಇದುವರೆಗೂ ಬರೀ ನಟರಾಗಿ ಎಲ್ಲರಿಗೂ ಪರಿಚಯಗೊಂಡಿದ್ದರು. ಆದ್ರೆ ಅವರು ಕೇವಲ ನಟನಲ್ಲದೇ ಒಬ್ಬ ಅದ್ಭುತ ಚಿತ್ರ ಕಲಾವಿದ ಕೂಡ ಆಗಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ತೆರೆ ಮೇಲೆ ಎಲ್ಲರನ್ನೂ ನಗಿಸುತ್ತಾರೆ. ಒಂದು ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಪಡೆದುಕೊಂಡಿದ್ದಾರೆ. ಬ್ರಹ್ಮಾನಂದಂ ಅವರು ಬಹಳ ಅದ್ಭುತವಾಗಿ ಚಿತ್ರಗಳನ್ನು ಬಿಡಿಸುತ್ತಾರೆ. ಈ ಹಿಂದೆ ವೆಂಕಟೇಶ್ವರ ಸ್ವಾಮಿಯ ಚಿತ್ರ ಬರೆದು ಸುದ್ದಿಯಾಗಿದ್ದರು.
/newsfirstlive-kannada/media/post_attachments/wp-content/uploads/2025/03/Brahmanandam3.jpg)
ಇದೀಗ ಟಾಲಿವುಡ್‌ನಲ್ಲಿ ಹಾಸ್ಯದ ರಾಜ ಎಂದು ಕರೆಯಲ್ಪಡುವ ಹಿರಿಯ ತೆಲುಗು ನಟ ಬ್ರಹ್ಮಾನಂದಂ ಭಾರತದ ಅತ್ಯಂತ ಶ್ರೀಮಂತ ಹಾಸ್ಯನಟ ಎಂದು ವರದಿಯಾಗಿದೆ. ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಬ್ರಹ್ಮಾನಂದಂ ಅವರು ವೃತ್ತಿಜೀವನದಲ್ಲಿ ಸುಮಾರು ₹500 ಕೋಟಿಗೂ ಹೆಚ್ಚು ಆಸ್ತಿಯನ್ನು ಸಂಪಾದಿಸಿದ್ದಾರೆ. ಇದು ಭಾರತದ ಸ್ಟಾರ್​ ನಟರಾದ ರಣಬೀರ್ ಕಪೂರ್ (₹350 ಕೋಟಿ), ಪ್ರಭಾಸ್ (₹ 300 ಕೋಟಿ) ಮತ್ತು ರಜನಿಕಾಂತ್ (₹400 ಕೋಟಿ) ಗಿಂತ ಹೆಚ್ಚು ಶ್ರೀಮಂತರಾಗಿದ್ದಾರೆ ಹಾಸ್ಯನಟ ಬ್ರಹ್ಮಾನಂದಂ.
/newsfirstlive-kannada/media/post_attachments/wp-content/uploads/2025/03/Brahmanandam2.jpg)
ಬ್ರಹ್ಮಾನಂದಂ ಲಕ್ಷ, ಲಕ್ಷ ಸಂಪಾದಿಸಿದ್ದು ಹೇಗೆ?
ಬ್ರಹ್ಮಾನಂದಂ ಅವರು ಮೂಲತಃ ಆಂಧ್ರಪ್ರದೇಶದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. 80ರ ದಶಕದಲ್ಲಿ ತಮ್ಮ ಮಿಮಿಕ್ರಿ ಕೌಶಲ್ಯಕ್ಕೆ ಹೆಸರುವಾಸಿಯಾದ ರಂಗಭೂಮಿ ಕಲಾವಿದರಾಗಿ ತಮ್ಮ ಶೋಬಿಜ್ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಇದು 1985ರಲ್ಲಿ ಟಿವಿಯಲ್ಲಿ ಪಾದಾರ್ಪಣೆ ಮಾಡಿದ್ರು. 1987ರಲ್ಲಿ ಸಿನಿಮಾಗೆ ಪಾದಾರ್ಪಣೆ ಮಾಡಿದ್ದರು. ಆದ್ರೆ ಇದೀಗ ಭಾರತದ ಅತ್ಯಂತ ಶ್ರೀಮಂತ ಹಾಸ್ಯನಟ ಎಂದು ಹೆಸರುವಾಸಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us