ಪಾಕ್​ ಮೇಲೆ ಭಾರತ ಸೇನೆಯ ದಾಳಿ ಹೇಗಿತ್ತು..? ಫೋಟೋ ಸಮೇತ ಸಾಕ್ಷಿ ತೋರಿಸಿದ DGMO ಅಧಿಕಾರಿಗಳು

author-image
Bheemappa
Updated On
ಪಾಕ್​ ಮೇಲೆ ಭಾರತ ಸೇನೆಯ ದಾಳಿ ಹೇಗಿತ್ತು..? ಫೋಟೋ ಸಮೇತ ಸಾಕ್ಷಿ ತೋರಿಸಿದ DGMO ಅಧಿಕಾರಿಗಳು
Advertisment
  • ಖಚಿತ ಮಾಹಿತಿ ಮೇರೆಗೆ ಉಗ್ರರ ತಾಣಗಳ ಮೇಲೆ ದಾಳಿ ಆಗಿದೆ
  • ಭಾರತದ ವಾಯುನೆಲೆಗಳಿಗೆ ಏನು ಆಗಿಲ್ಲ, ಎಲ್ಲ ಸುರಕ್ಷಿತವಾಗಿವೆ
  • ಆಪರೇಷನ್ ಸಿಂಧೂರ ಕಾರ್ಯಾಚರಣೆ ದೊಡ್ಡ ಮಟ್ಟದಲ್ಲಿ ಯಶಸ್ವಿ

ನವದೆಹಲಿ: ಪಾಪಿ ಪಾಕಿಸ್ತಾನ ಹಾಗೂ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿರುವ ಕುರಿತು ಭಾರತ ಸೇನೆಯ ಮೂರು ಪಡೆಯ ಭದ್ರತಾ ಅಧಿಕಾರಿಗಳು ಫೋಟೋ ಸಮೇತ ಸಾಕ್ಷಿ ತೋರಿಸಿದ್ದಾರೆ. ಹಲವು ಉಗ್ರರಿಗೆ ಆಶ್ರಯ ಕೊಟ್ಟಿರುವ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

publive-image

ಆಪರೇಷನ್ ಸಿಂಧೂರ ಕುರಿತು ಭಾರತದ ಮೂರು ಪಡೆಯ ಭದ್ರತಾ ಅಧಿಕಾರಿಗಳು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಏರ್​ ಮಾರ್ಷಲ್​ ಎ.ಕೆ ಭಾರ್ತಿ ಮಾತನಾಡಿ, ಖಚಿತ ಮಾಹಿತಿ ಮೇರೆಗೆ ಉಗ್ರರ ಅಡುಗುತಾಣಗಳನ್ನು ಗುರಿಯಾಗಿಸಿ ಹೊಡೆದಿದ್ದೇವೆ. ಉಗ್ರರ ನೆಲೆಗಳನ್ನು ಧ್ವಂಸ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ನಮ್ಮ ದಾಳಿಯಿಂದ ಹೆದರಿ ಸ್ಥಳದಿಂದ ಉಗ್ರರು ಕಾಲ್ಕಿತ್ತಿದ್ದಾರೆ. ತಮ್ಮ ಶಿಬಿರಗಳಿಂದ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಮ್ಮ ಗುರಿ ಭಯೋತ್ಪಾದಕರ ತಾಣಗಳೇ ಹೊರತು ನಾಗರಿಕರು ಅಲ್ಲವೇ ಅಲ್ಲ. ಪಾಕಿಸ್ತಾನ ಹಲವು ಉಗ್ರರಿಗೆ ಆಶ್ರಯ ಕೊಟ್ಟಿದೆ. ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ. ಇದರ ಜೊತೆ ಪ್ರಮುಖ ಉಗ್ರ ಎಂದು ಗುರುತಿಸಲಾದ ಅಬ್ದುಲ್ ಮಲೀಕ್​ನನ್ನು ಹೊಡೆದುರುಳಿಸಲಾಗಿದೆ. 100ಕ್ಕೂ ಹೆಚ್ಚು ಉಗ್ರರ ಉಸಿರು ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಬಾವಲ್ಪುರ, ಮುರಿದ್ಕೆ, ಮರ್ಕಜಾ ಪ್ರದೇಶಗಳಲ್ಲಿ ಭಾರತದಿಂದ ದಾಳಿ ಮಾಡಿ ಉಗ್ರ ನೆಲೆಗಳನ್ನು ಧ್ವಂಸ ಮಾಡಲಾಗಿದೆ. ಏರ್​ ಟು ಸರ್​ಪ್ರೇಸ್​ ಕ್ಷಿಪಣಿ ಮೂಕ ದಾಳಿ ಮಾಡಿದ್ದೇವೆ. ಪಿಒಕೆ, ಪಾಕಿಸ್ತಾನಕ್ಕೆ ನುಗ್ಗಿ 9 ಉಗ್ರರ ನೆಲೆಗಳನ್ನು ಇನ್ನಿಲ್ಲದಂತೆ ಫಿನಿಶ್ ಮಾಡಿದ್ದೇವೆ. ಆಫರೇಷನ್ ಸಿಂಧೂರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಭಾರತ ಸೇನೆಯ ಘರ್ಜನೆ ಪಾಕ್​ನ ರಾವಲ್ಪಿಂಡಿವರೆಗೆ ತಲುಪಿದೆ; ರಕ್ಷಣಾ ಸಚಿವ

publive-image

ಇನ್ನು ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿರುವ ಕುರಿತು ಫೋಟೋ ಸಮೇತ ಸಾಕ್ಷಿಯನ್ನು ಭಾರತ ಸೇನೆ ನೀಡಿದೆ. ಭಾರತ ದಾಳಿ ಮಾಡುವ ಮೊದಲು ಹಾಗೂ ದಾಳಿ ಮಾಡಿದ ನಂತರ ಉಗ್ರರ ನೆಲೆ ಹೇಗೆ ನಾಶವಾದವು ಎಂಬುದನ್ನು ಫೋಟೋದಲ್ಲಿ ಪಾಯಿಂಟ್ ಮಾಡಿ ತೋರಿಸಲಾಗಿದೆ. ಪಾಕಿಸ್ತಾನ ಡ್ರೋಣ್, ಫೈಟರ್​ ಜೆಟ್​ ಮೂಲಕ ಭಾರತದ ಮೇಲೆ ವಿಫಲ ದಾಳಿಗೆ ಯತ್ನಿಸಿದೆ ಎಂದು ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment