/newsfirstlive-kannada/media/post_attachments/wp-content/uploads/2025/03/INDIA-NAGALOK-3.jpg)
ನಾಗಲೋಕ ಅಂದ ತಕ್ಷಣ ನಮಗೆ ಪಾತಾಳದಲ್ಲಿರುವ ನಾಗಲೋಕದ ಒಂದು ಪೌರಾಣಿಕ ಕಲ್ಪನೆಯೊಂದು ನಮ್ಮ ಕಣ್ಣ ಮುಂದೆ ಬಂದು ಹೋಗುತ್ತದೆ. ಅಲ್ಲಿರುವ ತಕ್ಷಕ ಎಂಬ ನಾಗದೇವತೆಯಿಂದ ಹಿಡಿದು ನೂರಾರು ನಾಗರಗಳು ಇರುವುದು ಕಂಡು ಬರುತ್ತದೆ. ಆದ್ರೆ ಭಾರತದಲ್ಲಿಯೇ ಇರುವ ಒಂದು ರಾಜ್ಯದಲ್ಲಿ ನಾಗಲೋಕವೇ ಸೃಷ್ಟಿಯಾಗಿದೆ ಅನ್ನುವ ಮಟ್ಟಕ್ಕೆ ನಾವು ಆಶ್ಚರ್ಯಗೊಳ್ಳುತ್ತವೆ. ಅಷ್ಟು ಪ್ರಬೇಧದ ಹಾವುಗಳು ಅಲ್ಲಿ ವಾಸ ಮಾಡುತ್ತವೆ.
ಛತ್ತೀಸ್ಗಢ ರಾಜ್ಯದ ಜಶಪುರ ಜಿಲ್ಲೆಯ ಕೊರಬಾ ಎಂಬ ಪ್ರದೇಶ ತನ್ನದೇ ಆದ ಸೌಂದರ್ಯ ಹಾಗೂ ವಿವಿಧ ವನ್ಯಜೀವಿಗಳಿಂದ ಹೆಸರು ಪಡೆದಿರುವ ಗ್ರಾಮ. ಇದನ್ನು ಛತ್ತೀಸ್ಗಢದ ನಾಗಲೋಕ ಎಂದು ಕೂಡ ಕರೆಯುತ್ತಾರೆ. ಕಾರಣ ಜಶಪುರದಲ್ಲಿ ನಿಮಗೆ ಸುಮಾರು 29 ಪ್ರಬೇಧದ ಸರ್ಪ ಸಂತತಿಗಳು ಕಾಣಲು ಸಿಗುತ್ತವೆ. ಇದಿರಂದಾಗಿ ಇಲ್ಲಿ ಈ ಸರಿಸೃಪಗಳ ಅಧ್ಯಯನ ಹಾಗೂ ಅವುಗಳ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
ಈ 29 ಪ್ರಜಾತಿಯ ಹಾವುಗಳಲ್ಲಿ ವಿಶೇಷವಾಗಿ ಸೆಳೆಯುವುದು ವೈಟ್ ಲಿಪ್ಡ್ ಪಿಟ್ ವೈಪರ್ ಎಂಬ ಹಾವು. ಈ ಹಾವು ತನ್ನ ಅನೇಕ ವಿಶೇಷತೆಗಳಿಂದಲೇ ಗುರುತಿಸಿಕೊಂಡಿದೆ. ಅದರಲ್ಲೂ ಇದಕ್ಕೆ ಇರುವ ಬಿಳಿ ಬಣ್ಣದ ತುಟಿ ಉಳಿದ ಹಾವುಗಳಿಗಿಂತ ವಿಶೇಷತೆವಾಗಿ ಕಾಣುತ್ತದೆ. ಮತ್ತು ಇದರ ಬಣ್ಣ ಹಚ್ಚ ಹಸಿರಾಗಿರುತ್ತದೆ. ಇದರ ಈ ಬಣ್ಣ ಗಿಡ ಮತ್ತು ಬಳ್ಳಿಗಳ ನಡುವೆ ತನ್ನನ್ನು ಯಾರು ಗುರುತಿಸದಂತೆ ಬಚ್ಚಿಟ್ಟುಕೊಳ್ಳಲು ಅದಕ್ಕೆ ಸಹಾಯ ಮಾಡುತ್ತದೆ.
ಈ ಹಾವಿನ ಮತ್ತೊಂದು ವಿಶೇಷತೆ ಅಂದರೆ ಇದು ಒಂದೇ ಸ್ಥಿತಿಯಲ್ಲಿ ಹಲವಾರು ಗಂಟೆಗಳ ಕಾಲ ನಿಲ್ಲುವ ಕ್ಷಮತೆಯನ್ನು ಹೊಂದಿದೆ. ತನ್ನ ಶಿಖಾರಿಯನ್ನು ಹೊಡೆದುರುಳಿಸಲು ಹಾಗೂ ಅದಕ್ಕಾಗಿ ಸರಿಯಾದ ಸಮಯಕ್ಕೆ ಹೊಂಚು ಹಾಕಲು ಇದೇ ಎಷ್ಟು ಗಂಟೆಗಳ ಕಾಲ ಬೇಕಾದರೂ ಒಂದೆ ಸ್ಥಿತಿಯಲ್ಲಿ ನಿಲ್ಲಬಲ್ಲದು. ಹೊಂಚು ಹಾಕಿ ದಾಳಿ ಮಾಡುವಲ್ಲಿ ಈ ಹಾವು ಅಪ್ಪಟ ಪಂಟರ್. ಇನ್ನು ಈ ಪ್ರಬೇಧದ ಹಾವು ಮಾನವನ ಜೀವಕ್ಕೂ ಕೂಡ ಕಂಟಕಕಾರಿ. ಇದರ ವಿಷಯದಲ್ಲಿ ಹೆಮೊಟಾಕ್ಷಿನ್ ಎಂಬ ಅಂಶವಿದೆ. ಇದು ರಕ್ತದಲ್ಲಿ ಸೇರಿದರೆ, ಕಿಡ್ನಿ ಹಾಗೂ ಲಿವರ್ ಎರಡೂ ನಷ್ಟಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದಿದ್ದರೆ ಮನುಷ್ಯರು ಬದುಕುಳಿಯುವುದು ಬಹುತೇಕ ಅನುಮಾನ ಅಷ್ಟು ವಿಷಕಾರಿ ಹಾವು ಇದು.
ಜಶಪುರದಲ್ಲಿರುವ ವಿವಿಧ ರೀತಿಯ ಪ್ರಬೇಧಗಳ ಹಾವುಗಳ ಸಂರಕ್ಷಣೆಗೆ ಸ್ಥಳೀಯ ಆಡಳಿತ ಮಂಡಳಿ ಹಾಗೂ ವನ್ಯಜೀವಿ ಸಂರಕ್ಷಣಾ ಸಂಘಟನೆಗಳು ಜನರಲ್ಲಿ ಜಾಗೃತಿಯನ್ನು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಹಾವುಗಳು ಹಾಗೂ ಅವುಗಳ ಸ್ವಭಾವಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಒಂದು ವೇಳೆ ಅವು ಮನುಷ್ಯರಿರುವ ಜಾಗಕ್ಕೆ ಬಂದಲ್ಲಿ ಅವುಗಳ ಪ್ರಾಣಕ್ಕೆ ಸಮಸ್ಯೆ ಮಾಡದೇ ಸಂಬಂಧಪಟ್ಟ ಇಲಾಖೆಗೆ ಕರೆ ಮಾಡಿ ಅವರು ಅವುಗಳನ್ನು ಹಿಡಿದು ಸುರಕ್ಷಿತ ಜಾಗಕ್ಕೆ ತಲುಪಿಸುತ್ತಾರೆ ಎಂದು ಕೂಡ ಸ್ಥಳೀಯ ಜನರಿಗೆ ಅರಿವು ಮೂಡಿಸುತ್ತಿದ್ದಾರೆ.
ಇದನ್ನೂ ಓದಿ:ಭಾರತೀಯ ರಾಷ್ಟ್ರೀಯ ತರಕಾರಿ ಯಾವುದು.. ಬುಹುತೇಕ ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ!
ಜಶಪುರ ಎಂಬ ಈ ಗ್ರಾಮವನ್ನು ಸರ್ಪಗಳ ಮನೆ ಎಂದೇ ಕರೆಯಲಾಗುತ್ತದೆ. ಸುಮಾರು 29 ಪ್ರಕಾರಗಳ ಜಾತಿಯ ಹಾವುಗಳು ಇಲ್ಲಿ ವಾಸ ಮಾಡುತ್ತವೆ. ಅವುಗಳ ಸಂತತಿ ಸಾವಿರಾರಷ್ಟು ಇದೆ. ಹೀಗಾಗಿ ಇದರ ಸುರಕ್ಷತೆಯ ಬಗ್ಗೆ ಹಾಗೂ ಸಂರಕ್ಷಣೆಯ ಬಗ್ಗೆ ಛತ್ತೀಸ್ಗಢ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಮಂಡಳಿ ತುಂಬಾ ವಿಶೇಷವಾದ ಕಾಳಜಿಯಿಂದ ನೋಡಿಕೊಳ್ಳುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ