/newsfirstlive-kannada/media/post_attachments/wp-content/uploads/2024/11/Jasprit-Bumrah.jpg)
ನಾಳೆಯಿಂದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಆರಂಭವಾಗಲಿದೆ. ಮೊದಲ ಟೆಸ್ಟ್ ಸೋಲಿನ ಬೆನ್ನಲ್ಲೇ, ಗೆಲುವಿನ ಛಲದಲ್ಲಿರುವ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರುತ್ತೆ ಎಂಬ ಕುತೂಹಲ ತೀವ್ರಗೊಂಡಿದೆ.
ಕೆಲವು ಕ್ರಿಕೆಟ್ ವಿಶ್ಲೇಷಕರ ಪ್ರಕಾರ, ಎರಡನೇ ಟೆಸ್ಟ್ನಲ್ಲಿ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಇರಲಿದೆ ಎನ್ನಲಾಗುತ್ತಿದೆ. ಮಧ್ಯೆ ಪ್ರ್ಯಾಕ್ಟೀಸ್ ಸೆಷನ್ಗಳಲ್ಲಿ ನಡೆದ ಬೆಳವಣಿಗೆಯು ಟೀಂ ಇಂಡಿಯಾದ ಪ್ಲೇಯಿಂಗ್-11 ಹಿಂಟ್ ನೀಡುತ್ತಿದೆ.
ಇದನ್ನೂ ಓದಿ: ಅಮ್ಮನ ವಿರುದ್ಧ ಸಾಕ್ಷಿ ಹೇಳಿದ ಮಗಳು.. ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಆಡುತ್ತಾರೋ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆ. ಬುಮ್ರಾ ಆಡುವ ಬಗ್ಗೆ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ (Ryan ten Doeschate) ಅವರನ್ನು ಕೇಳಿದಾಗ, ಅಸ್ಪಷ್ಟ ಉತ್ತರ ನೀಡಿದ್ದಾರೆ. ಆ ಮೂಲಕ ಸಸ್ಪೆನ್ಸ್ ಅನ್ನು ಜೀವಂತವಾಗಿಸಿದ್ದಾರೆ. ಆದಾಗ್ಯೂ ಟೀಮ್ ಇಂಡಿಯಾ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುವ ಸಾಧ್ಯತೆಯಿದೆ ಎಂದಿದ್ದಾರೆ.
ಇಬ್ಬರು ಸ್ಪಿನ್ನರ್‌ಗಳು ಆಡುವ ಸಾಧ್ಯತೆ ಹೆಚ್ಚು. ಆ ಇಬ್ಬರು ಯಾರು ಎಂದು ನಿರ್ಧರಿಸಬೇಕಾಗಿದೆ. ಮೂವರು ಸ್ಪಿನ್ನರ್‌ಗಳು ಚೆನ್ನಾಗಿ ಬೌಲಿಂಗ್ ಮಾಡ್ತಿದ್ದಾರೆ. ಸುಂದರ್ ಕೂಡ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ನಾವು ಯಾರನ್ನು ಆಯ್ಕೆ ಮಾಡಬೇಕು ಅಂತಾ ನಿರ್ಧರಿಸಬೇಕಿದೆ ಎಂದು ಕೋಚ್ ಹಳಿದ್ದಾರೆ.
ಇದನ್ನೂ ಓದಿ: MS ಧೋನಿ ದೊಡ್ಡ ಹೆಜ್ಜೆ.. ಕ್ಯಾಪ್ಟನ್ ಕೂಲ್ಗಾಗಿ ಟ್ರೇಡ್ಮಾರ್ಕ್ಗೆ ಅರ್ಜಿ..!
ಇನ್ನು ಪ್ರ್ಯಾಕ್ಟೀಸ್ ಸೆಷನ್ ವೇಳೆ ಬುಮ್ರಾ ಫೀಲ್ಡ್ಗೆ ಇಳಿದಿಲ್ಲ ಎಂದು ವರದಿಯಾಗಿದೆ. ಹೀಗಾಗಿ ನಾಳೆ ನಡೆಯುವ ಟೆಸ್ಟ್ನಲ್ಲಿ ಬುಮ್ರಾ ಆಡೋದು ಡೌಟ್. ಇತ್ತ, ಸಿರಾಜ್, ಪ್ರಸಿದ್ಧ್ ಆಡೋದು ಪಕ್ಕಾ ಆಗಿದೆ. ಇನ್ನು, ಆಕಾಶ್ ದೀಪ್, ಅರ್ಷ್ದೀಪ್ ಸಿಂಗ್ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಸಿಗುವ ಸಾಧ್ಯತೆಯೂ ಇದೆ.
ಇನ್ನು ಶಾರ್ದುಲ್ ಠಾಕೂರ್ಗೆ ಕೊಕ್ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಠಾಕೂರ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಹೆಸರು ಕೇಳಿಬರುತ್ತಿದೆ. ಹೀಗಾಗಿ ನಾಳೆ ನಡೆಯುವ ಪ್ಲೇಯಿಂಗ್-11ನಲ್ಲಿ ಯಾರೆಲ್ಲ ಇರ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಕ್ರಿಸ್ ಗೇಲ್ ಜೊತೆ ವಿಜಯ್ ಮಲ್ಯ, ಲಲಿತ್ ಮೋದಿ ಭರ್ಜರಿ ಪಾರ್ಟಿ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ