Advertisment

6, 6, 6, 6 ರಿಷಬ್ ಪಂತ್ ಸ್ಫೋಟಕ ಅರ್ಧ ಶತಕ.. ರೋಹಿತ್​ಗೆ ಖಡಕ್ ಮೆಸ್ಸೇಜ್..!

author-image
Ganesh
Updated On
6, 6, 6, 6 ರಿಷಬ್ ಪಂತ್ ಸ್ಫೋಟಕ ಅರ್ಧ ಶತಕ.. ರೋಹಿತ್​ಗೆ ಖಡಕ್ ಮೆಸ್ಸೇಜ್..!
Advertisment
  • ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯ ಆಡಿದ ಭಾರತ
  • ಪಂತ್ ಸ್ಫೋಟಕ ಆಟಕ್ಕೆ ರೋಹಿತ್ ಶರ್ಮಾ ನಿರಾಳ
  • ಜೂನ್ 5 ರಂದು ಐರ್ಲೆಂಡ್ ವಿರುದ್ಧ ಭಾರತಕ್ಕೆ ಮೊದಲ ಪಂದ್ಯ

ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಸೆಣಸಾಡುವ ಮೂಲಕ T20 ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿದೆ. ಜೂನ್ 5 ರಂದು ನ್ಯೂಯಾರ್ಕ್‌ನ ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡು ತಂಡಗಳು ಮುಖಾಮುಖಿ ಆಗಲಿವೆ.

Advertisment

ಅದಕ್ಕೂ ಮುನ್ನ ನಿನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾ ದೇಶದ ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ರೋಹಿತ್ ಪಡೆ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 182 ರನ್ ಗಳಿಸಿತ್ತು.

publive-image

ಪಂತ್ ಸ್ಫೋಟಕ ಬ್ಯಾಟಿಂಗ್..!
ಭಾರತದ ಪರ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ 32 ಎಸೆತಗಳಲ್ಲಿ 53 ರನ್ ಗಳಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಹೊಡೆದರು. ಈ ಬಿರುಸಿನ ಇನ್ನಿಂಗ್ಸ್ ನಂತರ ಪಂತ್ ಗಾಯಗೊಂಡು ನಿವೃತ್ತರಾದರು. ವಿಕೆಟ್ ಕೀಪರ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್​ ಆಡಿಸಬೇಕೋ? ಪಂತ್ ಆಡಿಸಬೇಕು ಅನ್ನೋ ಗೊಂದಲದಲ್ಲಿ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಇದೆ. ಈ ನಡುವೆ ಪಂದ್ಯ ಅವರ ಬ್ಯಾಟಿಂಗ್ ಮಾತನಾಡಿರುವ ಹಿನ್ನೆಲೆಯಲ್ಲಿ ಸಂಜು ಬದಲಿಗೆ ಪಂತ್​ಗೆ ಚಾನ್ಸ್ ಸಿಗುವ ಚಾನ್ಸ್ ಹೆಚ್ಚಿದೆ. ಸೂರ್ಯಕುಮಾರ್ ಯಾದವ್ 18 ಎಸೆತಗಳಲ್ಲಿ 31 ರನ್ ಗಳಿಸಿ ಉತ್ತಮ ಇನಿಂಗ್ಸ್ ಆಡಿದರು.

ಇದಲ್ಲದೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ 19 ಎಸೆತಗಳಲ್ಲಿ 23 ರನ್ ಕೊಡುಗೆ ನೀಡಿದರು. ಹಾರ್ದಿಕ್ ಪಾಂಡ್ಯ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು 23 ಬಾಲ್​ನಲ್ಲಿ 40 ರನ್​ಗಳಿಸಿದರು. 174 ಸ್ಟ್ರೈಕ್​​ರೇಟ್​ನೊಂದಿಗೆ ನಾಲ್ಕು ಸಿಕ್ಸರ್​, ಎರಡು ಬೌಂಡರಿ ಬಾರಿಸಿ ಗಮನಸೆಳೆದರು ಪಾಂಡ್ಯ. ಭಾರತ ನೀಡಿದ 183 ಟಾರ್ಗೆಟ್ ಬೆನ್ನು ಹತ್ತಿದ ಬಾಂಗ್ಲಾದೇಶ 9 ವಿಕೆಟ್ ಕಳೆದುಕೊಂಡು 122 ರನ್​ಗಳಿಸಿ ಗೆಲುವಿನ ಹೋರಾಟವನ್ನು ನಿಲ್ಲಿಸಿತು.

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment