/newsfirstlive-kannada/media/post_attachments/wp-content/uploads/2024/11/SANJU-SAMSON-4.jpg)
ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 135 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಈ ಮೂಲಕ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 4 ಟಿ20 ಪಂದ್ಯಗಳ ಸರಣಿಯಲ್ಲಿ 3-1 ಅಂತರದಲ್ಲಿ ಗೆದ್ದುಕೊಂಡಿದೆ. ದಕ್ಷಿಣ ಆಫ್ರಿಕಾ ಗೆಲುವಿಗೆ 283 ರನ್‌ಗಳ ಗುರಿ ನೀಡಲಾಗಿತ್ತು. ದಕ್ಷಿಣ ಆಫ್ರಿಕಾ ತಂಡ 18.2 ಓವರ್‌ಗಳಲ್ಲಿ 148 ರನ್‌ಗಳಿಗೆ ಸೀಮಿತವಾಯಿತು. ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡವು 20 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 283 ರನ್ ಗಳಿಸಿತ್ತು.
ಇದನ್ನೂ ಓದಿ: INDvSA: ಟೀಂ ಇಂಡಿಯಾಗೆ ಡಬಲ್ ಧಮಾಕಾ.. ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಭರ್ಜರಿ ಶತಕ!
ಭಾರತದ 283 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್‌ಗೆ ಬಂದ ದಕ್ಷಿಣ ಆಫ್ರಿಕಾ.. ಅತ್ಯಂತ ಕಳಪೆ ಆರಂಭ ಕಂಡಿತ್ತು. ರೀಜಾ ಹೆನ್ರಿಕ್ಸ್ ಯಾವುದೇ ರನ್ ಗಳಿಸದೇ ಅರ್ಷದೀಪ್ಗೆ ಔಟಾದರು. ರೇಯಾನ್ 1 ರನ್ ಗಳಿಸಿ ಹಾರ್ದಿಕ್ ವಿಕೆಟ್ ಒಪ್ಪಿಸಿದರು. 8 ಎಸೆತಗಳಲ್ಲಿ 8 ರನ್ ಗಳಿಸಿದ ನಾಯಕ ಏಡೆನ್ ಮಾರ್ಕ್ರಾಮ್ ನಿರ್ಗಮಿಸಿದರು. ಹೆನ್ರಿಕ್ ಕ್ಲಾಸೆನ್ ಖಾತೆ ತೆರೆಯಲು ವಿಫಲರಾದರು.
ದಕ್ಷಿಣ ಆಫ್ರಿಕಾದ 4 ಬ್ಯಾಟ್ಸ್‌ಮನ್‌ಗಳು 10 ರನ್‌ಗಳಿಗೆ ಪೆವಿಲಿಯನ್‌ಗೆ ಹೋಗಿದ್ದರು. ನಂತರ ಡೇವಿಡ್ ಮಿಲ್ಲರ್ ಮತ್ತು ಸ್ಟಬ್ಸ್ ಉತ್ತಮ ಜೊತೆಯಾಟವಾಡಿದರು. ಇಬ್ಬರು ಐದನೇ ವಿಕೆಟ್‌ಗೆ 54 ಎಸೆತಗಳಲ್ಲಿ 86 ರನ್ ಸೇರಿಸಿದರು. ಮಿಲ್ಲರ್ 27 ಎಸೆತಗಳಲ್ಲಿ 36 ರನ್ಗಳಿಸಿ ಔಟ್ ಆದರು. ಸ್ಟಬ್ಸ್ 29 ಎಸೆತಗಳಲ್ಲಿ 43 ರನ್‌ಗಳ ಕೊಡುಗೆ ನೀಡಿದರು. ಜಾನ್ಸನ್ 12 ಎಸೆತಗಳಲ್ಲಿ 29 ರನ್ಗಳಿಸಿ ನಾಟೌಟ್ ಆಗಿ ಉಳಿದರು.
ಇದನ್ನೂ ಓದಿ:13 ಭರ್ಜರಿ ಸಿಕ್ಸರ್.. 25 ಫೋರ್.. ಆಕ್ಷನ್ಗೆ ಮುನ್ನ ಅಬ್ಬರಿಸಿದ ಆರ್ಸಿಬಿ ಸ್ಟಾರ್ ಬ್ಯಾಟರ್
ಭಾರತದ ಪರ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಿತ್ತರು. ಪಾಂಡ್ಯ, ರಮಣದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 1 ವಿಕೆಟ್ ಗೆ 283 ರನ್ ಗಳಿಸಿತು. ಭಾರತದ ಪರ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಶತಕ ಬಾರಿಸಿದರು. ಆ ಮೂಲಕ ಸರಣಿ ಗೆಲ್ಲಲು ಸಂಜು, ತಿಲಕ್ ವರ್ಮಾ, ಅಭಿಷೇಕ್ ಶರ್ಮಾ, ಅರ್ಷದೀಪ್, ವರಣು ಚಕ್ರವರ್ತಿ ಪ್ರಮುಖ ಕಾರಣರಾದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್