ಇಂಡಿಗೋ ವಿಮಾನಕ್ಕೆ ಆಕಾಶದಲ್ಲೇ ಟಾರ್ಚರ್​ ಕೊಟ್ಟ ಆಲಿಕಲ್ಲು ಮಳೆ.. 200 ಜನ ಬದುಕಿದ್ದೇ ದೊಡ್ಡದು -Video

author-image
Bheemappa
Updated On
ಇಂಡಿಗೋ ವಿಮಾನಕ್ಕೆ ಆಕಾಶದಲ್ಲೇ ಟಾರ್ಚರ್​ ಕೊಟ್ಟ ಆಲಿಕಲ್ಲು ಮಳೆ.. 200 ಜನ ಬದುಕಿದ್ದೇ ದೊಡ್ಡದು -Video
Advertisment
  • ಒಳಗಿದ್ದ ಮಕ್ಕಳು, ಮಹಿಳೆಯರು ಸೇರಿ ಎಲ್ಲರು ಕೂಗಾಟ, ಚೀರಾಟ
  • ಆಲಿಕಲ್ಲು ಮಳೆ, ಗುಡುಗು, ಮಿಂಚಿನಿಂದ ವಿಮಾನ ಜಸ್ಟ್​ ಮಿಸ್
  • ಆಗಸದಲ್ಲೇ ಪ್ರಯಾಣಿಕರ ಚೀರಾಟ ಕೇಳಿದರೆ ಭಯ ಆಗುತ್ತದೆ

ನವದೆಹಲಿ: ಆಲಿಕಲ್ಲು ಮಳೆ ಸುರಿಯುತ್ತಿರುವಾಗ 200 ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವೊಂದು ದೊಡ್ಡ ಅನಾಹುತದಿಂದ ಪಾರಾಗಿದೆ. ಇದರಿಂದ ವಿಮಾನದ ಮುಂದಿನ ಭಾಗ (Aircraft Nose) ಹಾನಿಯಾಗಿದ್ದು ಬಿಟ್ಟರೇ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ.

ಇಂಡಿಗೋ ವಿಮಾನ 6E2142 ದೆಹಲಿಯಿಂದ ಜಮ್ಮುಕಾಶೀರದ ಶ್ರೀನಗರಕ್ಕೆ 200 ಪ್ರಯಾಣಿಕರನ್ನು ಹೊತ್ತು ಆಕಾಶದಲ್ಲಿ ಪ್ರಯಾಣಿಸುತ್ತಿತ್ತು. ವಿಮಾನ ಆಕಾಶದಲ್ಲಿ ಇರುವಾಗಲೇ ಬಲವಾದ ಆಲಿಕಲ್ಲು ಮಳೆ ಆರಂಭವಾಗಿದೆ. ಆಲಿಕಲ್ಲುಗಳು ವಿಮಾನದ ಮೇಲೆ ಬೀದ್ದಿದ್ದರಿಂದ ಶಬ್ಧ ಕೂಡ ಭಯ ಮೂಡಿಸಿದೆ. ಆಲಿಕಲ್ಲು ಮಳೆ ಜೊತೆಗೆ ಗುಡುಗು, ಮಿಂಚು, ಗಾಳಿಯೂ ಜೋರಾಗಿ ಬೀಸುತ್ತಿದ್ದರಿಂದ ಇಡೀ ವಿಮಾನವೇ ಆಕಾಶದಲ್ಲಿ ಅಲುಗಾಡಿದ್ದು ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಆಕಾಶದಲ್ಲಿ ವಿಮಾನ ಅಲುಗಾಡುತ್ತಿದ್ದಂತೆ ಒಳಗಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ಪ್ರಯಾಣಿಕರೆಲ್ಲರೂ ಭಯದಿಂದ ಜೋರಾಗಿ ಕಿರುಚಲು, ಕೂಗಲು ಆರಂಭಿಸಿದ್ದಾರೆ. ನಾವು ಬದುಕುವುದಿಲ್ವಾ ಎನ್ನುವ ಮಟ್ಟಿಗೆ ಪ್ರಯಾಣಿಕರು ಭಯ ಪಟ್ಟಿದ್ದಾರೆ. ಪ್ರಕ್ಷುಬ್ಧ ಹವಾಮಾನದಿಂದಾಗಿ ವಿಮಾನ ಪೈಲಟ್ ತಕ್ಷಣ ಶ್ರೀನಗರದ ವಾಯು ಸಂಚಾರ ನಿಯಂತ್ರಣಕ್ಕೆ ತುರ್ತು ವರದಿ ಮಾಡಿದ್ದಾರೆ. ತುರ್ತು ವರದಿ ಬೆನ್ನಲ್ಲೇ ಸಂಜೆ 6:30ಕ್ಕೆ ಸುರಕ್ಷಿತವಾಗಿ ವಿಮಾನ ಶ್ರೀನಗರದಲ್ಲಿ ಲ್ಯಾಂಡ್ ಆಗಿದೆ.

ಇದನ್ನೂ ಓದಿ:RCB ಟ್ರೋಫಿ ಗೆಲ್ಲಲಿ ಅಂತ ಬೆಂಗಳೂರಿಂದ ಪ್ರತಿಷ್ಠತಿ ಪುಣ್ಯಕ್ಷೇತ್ರದವರೆಗೆ ಯಾತ್ರೆ.. ಎಲ್ಲಿಯವರೆಗೆ?

publive-image

ಆಗಸದಲ್ಲೇ ಇರುವಾಗಲೇ ಆಲಿಕಲ್ಲು ಬಿದ್ದಿದ್ದರಿಂದ ವಿಮಾನದ ಮುಂದಿನ ಭಾಗ ಅಥವಾ ವಿಮಾನದ ಮೂಗಿನ ಭಾಗ ಹಾನಿಯಾಗಿದೆ. ಆದರೆ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದ್ದರಿಂದ ಪ್ರಯಾಣಿಕರೆಲ್ಲ ಅಬ್ಬಾ..! ಬದುಕಿದೇವೆಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಹಠಾತ್ ಆಲಿಕಲ್ಲು ಮಳೆ ಬೀಳುವಾಗ ವಿಮಾನದ ಕ್ಯಾಬಿನ್ ಸಿಬ್ಬಂದಿ ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲಿಸಿದ್ದರಿಂಧ ವಿಮಾನ ಶ್ರೀನಗರವನ್ನು ಸುರಕ್ಷಿತವಾಗಿ ತಲುಪಿತು ಎಂದು ಹೇಳಲಾಗಿದೆ.

ಸದ್ಯ ವಿಮಾನದಲ್ಲಿ ಕೆಲ ಪ್ರಯಾಣಿಕರು ಮಾಡಿದಂತ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಪ್ರಯಾಣಿಕರೆಲ್ಲರೂ ಭಯದಿಂದ ಕಿರುಚುತ್ತಿರುವುದು ನೋಡುಗರಿಗೆ ಆತಂಕ ಮೂಡಿಸುವಂತಿದೆ.


">May 21, 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment