ಮದುವೆ, ಹೆಂಡತಿ ಎರಡೂ ತಾತ್ಕಾಲಿಕ; ಇಂಡೋನೇಷ್ಯಾದಲ್ಲೇನಿದು ಹೀನ ಪದ್ಧತಿ?

author-image
Gopal Kulkarni
Updated On
60 ದಿನಕ್ಕೆ 48 ಲಕ್ಷ ವಿವಾಹ.. ಈ ಅದ್ಧೂರಿ ಮದುವೆಗಳಿಂದ ದೇಶಕ್ಕೆ ಬರುವ ಆದಾಯ ಎಷ್ಟು ಲಕ್ಷ ಕೋಟಿ ಗೊತ್ತಾ?
Advertisment
  • ಕಡು ಬಡತನದಲ್ಲಿರುವ ಹೆಣ್ಣು ಮಕ್ಕಳೇ ಈ ಒಂದು ದಂಧೆಯ ಗುರಿ
  • ಪ್ರವಾಸಿಗರೊಂದಿಗೆ ಬಡ ಹೆಣ್ಣು ಮಕ್ಕಳ ಅಲ್ಪಾವಧಿಯ ಮದುವೆ
  • ಪತಿ ತನ್ನೂರಿಗೆ ವಾಪಸ್ ಹೋಗುತ್ತಿದ್ದಂತೆ ಮುರಿದು ಬೀಳುತ್ತೆ ವಿವಾಹ

ಇಂಡೋನೇಷ್ಯಾದಲ್ಲಿ ಹಲವು ಹಳ್ಳಿಗಳಲ್ಲಿ ಈಗ ಒಂದು ದರಿದ್ರ ಪದ್ಧತಿ ಈಗ ರೂಢಿಗೆ ಬಂದಿದ್ದು. ನಾಗರಿಕ ಸಮಾಜ ಕಡು ಟೀಕೆಗಳನ್ನು ಮಾಡುತ್ತಿದೆ. ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಮಾಡಿದ ವರದಿಯ ಪ್ರಕಾರ ಈ ದೇಶದಲ್ಲಿ ಅತ್ಯಂತ ಕಡು ಬಡತನದ ಹಿನ್ನೆಲೆಯಿಂದ ಬಂದ ಯುವತಿಯರು ಅಲ್ಪಾವಧಿಯ ಮದುವೆಯಂಬ ಕೂಪಕ್ಕೆ ಬಿದ್ದು ನರಳಾಡುತ್ತಿದ್ದಾರಂತೆ. ಇಂಡೋನೇಷಿಯಾ ಹೇಳಿ ಕೇಳಿ ಪ್ರವಾಸಿ ತಾಣ. ದಿನಕ್ಕೆ ಇಲ್ಲಿ ಲಕ್ಷಾಂತರ ಪ್ರವಾಸಿಗರು ಹರಿದು ಬರುತ್ತಾರೆ. ಮಧ್ಯ ಏಷಿಯಾ ಭಾಗದ ಸ್ವಚ್ಛಂದ ಪ್ರವಾಸಿ ತಾಣವಾದ ಇಂಡೋನೇಷಿಯಾ ಈಗ ಇಂತಹ ದರಿದ್ರ ಪದ್ಧತಿಗೆ ಸುದ್ದಿಯಾಗಿ ಜಗತ್ತಿನೆಲ್ಲೆಡೆಯಿಂದ ಟೀಕೆಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಇಸ್ರೇಲ್​ನ ಆ ಒಂದು ಕನಸು ನನಸಾಗುವ ಸಮಯ ಬಂತಾ? ರಷ್ಯಾದ ಪ್ರಖ್ಯಾತ ರಾಜನೀತಿ ತಜ್ಞ ಈ ಬಗ್ಗೆ ಹೇಳುವುದೇನು?

ಇಲ್ಲಿ ಹಣಕ್ಕಾಗಿ ಕಡು ಬಡತನದ ಮೂಲದಿಂದ ಬಂದ ಹೆಣ್ಣು ಮಕ್ಕಳು ತಾತ್ಕಾಲಿಕ ಅಥವಾ ಅಲ್ಪಾವಧಿ ಮದುವೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಈ ದೇಶಕ್ಕೆ ಅತಿಹೆಚ್ಚು ಪ್ರವಾಸಿಗರು ಹರಿದು ಬರೋದು ಅರಬ್ ರಾಷ್ಟ್ರಗಳಿಂದ. ಹೀಗೆ ಬಂದ ಪ್ರವಾಸಿಗರು ತಮ್ಮ ದುಡ್ಡಿನ ಆಸೆಯನ್ನು ತೋರಿಸಿ ಅಲ್ಲಿನ ಹೆಣ್ಣು ಮಕ್ಕಳನ್ನು ತಾವು ಇರುವಷ್ಟು ಕಾಲ ಮದುವೆಯಂಬ ನೆಪದಲ್ಲಿ ದೈಹಿಕವಾಗಿ ಅವರನ್ನು ಬಳಸಿಕೊಂಡು ಬಿಸಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ಹೆಣ್ಣು ಮಕ್ಕಳೇ ಇವರಿಗೆ ದುಡ್ಡಿಗಾಗಿ ಯುವತಿಯರನ್ನು ಮದುವೆ ಮಾಡಿಕೊಳ್ಳುವ ಎಜೆನ್ಸಿಗಳನ್ನು ಶುರು ಮಾಡಿದ್ದಾರೆ. ಒಂದು ಬಾರಿ ಎರಡು ಪಾರ್ಟಿಗಳಿಗೂ ಒಪ್ಪಿಗೆಯಾದಲ್ಲಿ. ಒಂದು ಚಿಕ್ಕದಾದ ಮದುವೆ ಕಾರ್ಯವನ್ನು ಮಾಡಿ ಮುಗಿಸುತ್ತಾರೆ. ಬಂದ ಪ್ರವಾಸಿಗರು ಮದುವೆಗಾಗಿ ವಧದಕ್ಷಿಣೆ ಎಂದು ಲಕ್ಷಾಂತರ ರೂಪಾಯಿಗಳನ್ನು ಕೊಡುತ್ತಾರೆ. ಅಲ್ಲಿ ಇರುವಷ್ಟು ದಿನ ಆ ಹೆಣ್ಣು ಮಕ್ಕಳನ್ನು ದೈಹಿಕವಾಗಿ ಬಳಸಿಕೊಂಡು ನಂತರ ತಮ್ಮ ತಮ್ಮ ದೇಶಗಳಿಗೆ ಹೊರಡುತ್ತಾರಂತೆ. ಅವರ ಅತ್ತ ಹೋಗುತ್ತಿದ್ದಂತೆ ಇತ್ತ ಆ ಯುವತಿಯೊಂದಿಗಾದ ಮದುವೆ ಮುರಿದು ಬೀಳುತ್ತದಂತೆ.

ಇದನ್ನೂ ಓದಿ:ಬೈರತ್​ನಲ್ಲಿ ಯಹೂದಿ ಪಡೆಯ ರಣಭೀಕರ ದಾಳಿ! ಮತ್ತೊಬ್ಬ ಹಿಜ್ಬುಲ್ಲಾ ಮುಖಂಡನನ್ನು ಯಮಪುರಿಗೆ ಅಟ್ಟಿದ ಇಸ್ರೇಲ್​?

ಈ ಒಂದು ವಿವಾದಾತ್ಮಕ ಪದ್ಧತಿಯನ್ನು ವಿಲಾಸಿ ಮದುವೆ ಎಂದು ಹೆಸರಿಡಲಾಗಿದ್ದು, ಸದ್ಯ ಇದು ಇಂಡೋನೇಷಿಯಾದಲ್ಲಿಯೇ ಅತ್ಯಂತ ಲಾಭದಾಯಕ ಉದ್ದಿಮೆಯಾಗಿದೆ ಎಂದು ಲಾಸ್​ ಎಂಜೆಲ್ಸ್ ಟೈಮ್ಸ್ ವರದಿ ಮಾಡಿದೆ. ಸ್ಥಳೀಯ ಆರ್ಥಿಕತೆಯನ್ನು ಎತ್ತಿಹಿಡಿಯಲು ಹಾಗೂ ಪ್ರವಾಸೋದ್ಯಮಕ್ಕೆ ಬೂಸ್ಟ್ ಕೊಡಲು ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ ಎಂಬ ಮೊಂಡ ಸಮರ್ಥನೆಯೂ ಕೂಡ ಅಲ್ಲಿ ಕೇಳಿ ಬರುತ್ತಿದೆ.

ಲಹಾಯ್ ಎಂಬ ಹೆಣ್ಣು ಮಗಳು ಹೇಳುವ ಪ್ರಕಾರ ಆಕೆ ಇಷ್ಟು ದಿನದಲ್ಲಿ ಒಟ್ಟು 15 ಬಾರಿ ಮದುವೆಯಾಗಿದ್ದಾಳಂತೆ. ಅವಳ ಮೊದಲ ಗಂಡ 50 ವರ್ಷದ ಸೌದಿ ಅರೆಬಿಯಾದ ವ್ಯಕ್ತಿಯಾಗಿದ್ದನಂತೆ. ಅವನು ವಧುದಕ್ಷಿಣೆಯಾಗಿ ಕೊಟ್ಟ ಒಟ್ಟು ಮೊತ್ತ 850 ಯುಎಸ್ ಡಾಲರ್​ಗಳು ಅಂದ್ರೆ ಭಾರತಿಯ ಭಾರತೀಯ ರೂಪಾಯಿಗಳಲ್ಲಿ ಒಟ್ಟು 71 370 ರೂಪಾಯಿ. ಆದ್ರೆ ಮಧ್ಯವರ್ತಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಅದರಲ್ಲಿ ಹಂಚಿಕೊಂಡ ಬಳಿಕ ಆಕೆಯ ಕೈಗೆ ಬಂದಿದ್ದು ಕೇವಲ ಅರ್ಧದಷ್ಟು ಮೊತ್ತವಂತೆ. ಆಕೆಯೊಂದಿಗೆ ವಿವಾಹವಾಗಿದ್ದ ಅರಬ್​ನ 50 ವ್ಯಕ್ತಿ 5 ದಿನಗಳ ಕಾಲ ಆಕೆಯೊಂದಿಗೆ ಇದ್ದು ಆಕೆಯನ್ನು ಪತ್ನಿಯಂತೆಯೇ ಬಳಸಿಕೊಂಡು ಹೊರಟು ಹೋದನಂತೆ. ಅದರ ಹಿಂದೆ ಅವರಿಬ್ಬರ ವಿಚ್ಛೇದನವೂ ಆಯ್ತಂತೆ. ಈ ಒಂದು ತಾತ್ಕಾಲಿಕ ಮದುವೆಯಿಂದ ಒಂದು ಮದುವೆಗೆ 300 ರಿಂದ 500 ಡಾಲರ್​ವರೆಗೂ ಗಳಿಸುತ್ತೇನೆ ಇದು ನನ್ನ ವಯಸ್ಸಾದ ತಂದೆ ತಾಯಿಗಳನ್ನು ಸಾಕಲು ಅನುಕೂಲವಾಗುತ್ತದೆ ಎಂದು ಲಹಾಯ್ ಹೇಳುತ್ತಾಳೆ.

ಇದನ್ನೂ ಓದಿ:ವಿಶ್ವವನ್ನೇ ಇಭ್ಭಾಗ ಮಾಡಿತಾ ಇಸ್ರೇಲ್-ಇರಾನ್ ವಾರ್? ಯಾವ ಯಾವ ರಾಷ್ಟ್ರ ಯಾರ ಬೆನ್ನಿಗೆ ನಿಲ್ಲಲಿವೆ?

ಮತ್ತೊಬ್ಬ ಯುವತಿ ನಿಸಾ ಎಂಬುವಾಕೆ ಇಲ್ಲಿಯವರೆಗೂ ಒಟ್ಟು 20 ಮದುವೆಯಾಗಿದ್ದಳಂತೆ ಆದ್ರೆ ಇತ್ತೀಚೆಗೆ ಇಂಡೋನೇಷ್ಯಾಗೆ ಬಂದ ವಲಸೆ ಅಧಿಕಾರಿಯೊಬ್ಬನನ್ನು ನಿಸಾ ಮದುವೆಯಾಗಿ ಈಗ ನೆಮ್ಮದಿಯಿಂದಿದ್ದಾಳೆ. ಅವರ ದಾಂಪತ್ಯಕ್ಕೆ ಈಗ ಇಬ್ಬರು ಗಂಡು ಮಕ್ಕಳಿದ್ದು. ಇನ್ನೂ ಈ ಜನ್ಮದಲ್ಲಿಯೇ ಆ ಒಂದು ಹಾಳು ಪದ್ಧತಿಗೆ ವಾಪಸ್ ಬರಲಾರೆ ಎಂದು ಹೇಳಿಕೊಂಡಿದ್ದಾಳೆ ನಿಸಾ.

ಈ ಒಂದು ತಾತ್ಕಾಲಿಕ ಅಥವಾ ಅಲ್ಪಕಾಲಿಕ ಮದುವೆಯನ್ನು ನಿಕಾ ಮುತ್ಹಾ ಎಂದು ಕರೆಯುತ್ತಾರೆ. ಇಸ್ಲಾಂನ ಶಿಯಾ ಸಂಪ್ರದಾಯದಲ್ಲಿ ಇಂತಹದೊಂದು ಮದುವೆ ಪದ್ಧತಿ ಜಾರಿಯಲ್ಲಿದೆ. ಆದ್ರೆ ಸದ್ಯ ಇಂಡೋನೇಷ್ಯಾದ ಬುದ್ಧಿಜೀವಿಗಳು ಈ ಒಂದು ದರಿದ್ರ ಪದ್ಧತಿಯನ್ನು ವಿರೋಧಿಸುತ್ತಿದ್ದಾರೆ. ಈ ಪದ್ಧತಿ ಯಾವ ಕಾಲಕ್ಕೂ ಒಪ್ಪುವಂತದಲ್ಲ. ಇದನ್ನು ಇಂಡೋನೇಷ್ಯಾದ ಕಾನೂನೇ ಒಪ್ಪುವುದಿಲ್ಲ. ಕಾನೂನು ಬಾಹಿರವಾಗಿ ಇಂತಹ ದಟ್ಟ ದರಿದ್ರ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಇದನ್ನೂ ಕೂಡಲೇ ನಿಲ್ಲಿಸುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment