ಸುಪಾರಿ ಪ್ಲಾನ್ ಸಕ್ಸಸ್ ಆಗದಿದ್ದರೆ.. ಹನಿಮೂನ್​ಗೂ ಮುನ್ನ ಪ್ಲಾನ್-ಬಿ ರೆಡಿ ಮಾಡಿದ್ದ ಸೋನಂ..!

author-image
Ganesh
Updated On
‘ಬಾ ನಲ್ಲ ಮಧುಚಂದ್ರಕೆ’ ಪ್ರಕರಣ​.. ಆರೋಪಿ ಸೋನಂ ವಿರುದ್ಧ ಮತ್ತೊಂದು ಗಂಭೀರ ಆರೋಪ
Advertisment
  • ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ ಹನಿಮೂನ್​ ಕೇಸ್
  • ಪತಿಯ ಹನಿಮೂನ್​ಗೆ ಕರ್ಕೊಂಡು ಹೋಗಿ ಸುಪಾರಿ ಕೊಟ್ಟಳು
  • ಆರೋಪಿ ಸೋನಂ ಮಾಡಿದ್ದ ಪ್ಲಾಬ್-ಬಿ ಏನಾಗಿತ್ತು..?

ಮಧ್ಯ ಪ್ರದೇಶದ ಇಂಧೋರ್​ ನವ ಜೋಡಿಯ ಹನಿಮೂನ್​ ಪ್ರಕರಣ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಪ್ರಕರಣ ನಡೆಸ್ತಿರುವ ಪೊಲೀಸರಿಗೆ ಒಂದೊಂದೇ ಅಸಲಿ ವಿಚಾರಗಳು ಗೊತ್ತಾಗುತ್ತಿವೆ.

ರಾಜಾ ರಘುವಂಶಿ ಮೇಲೆ ಇಷ್ಟವಿಲ್ಲದೇ ಮನೆಯವರ ಒತ್ತಾಯಕ್ಕೆ ಮದುವೆ ಮಾಡಿಕೊಂಡಿದ್ದ ಸೋನಂ ಮದ್ವೆಯಾದ ಮೂರೇ ದಿನಕ್ಕೆ ರಾಜಾ ರಂಘುವಂಶಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಳು ಅನ್ನೋದು ಈಗಾಗಲೇ ತಿಳಿದಿದೆ. ತನಿಖೆಯಲ್ಲಿ ಗೊತ್ತಾಗಿರುವ ಮತ್ತೊಂದು ವಿಚಾರವೆಂದರೆ, ಹನಿಮೂನ್​ಗೆ ಹೋದಾಗ ಮೆಘಾಲಯದಲ್ಲಿ ತನ್ನ ಸುಪಾರಿ ಪ್ಲಾನ್ ಸಕ್ಸಸ್ ಆಗದಿದ್ರೆ ಪ್ಲಾನ್-ಬಿ ರೆಡಿ ಮಾಡಿದ್ದಳಂತೆ!

ಏನಾಗಿತ್ತು ಆ ಪ್ಲಾನ್..?

ಪತಿ ರಘುವಂಶಿಯನ್ನು ಮುಗಿಸಲು 20 ಲಕ್ಷಕ್ಕೆ ಸುಪಾರಿ ನೀಡಿದ್ದ ಸೋನಂ, ಪ್ಲಾನ್​ಬಿಗಾಗಿ ಊಟದಲ್ಲಿ ವಿಷ ನೀಡಲು ನಿರ್ಧರಿಸಿದ್ದಳಂತೆ. ಆದರೆ, ಸುಪಾರಿ ಕಿಲ್ಲರ್ಸ್​, ರಘುವಂಶಿಯನ್ನು ಮೇಘಾಲಯದ ಈಸ್ಟ್ ಕಾಶಿ ಹಿಲ್ಸ್​ನಲ್ಲಿ ಮುಗಿಸಿದ್ದಾರೆ. ಆ ದೃಶ್ಯವನ್ನು ಸೋನಂ ಕಣ್ಣಾರೆ ನೋಡಿರೋದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಹೆಂಡ್ತಿ ಅಲ್ಲ ರಾಕ್ಷಸಿ; ಸೋನಮ್, ಲವರ್‌ ಸೇರಿ ಮಾಡಿದ್ದ ಪ್ಲಾನ್​.. ಇಂಚಿಂಚೂ ಮಾಹಿತಿಯೂ ಬೆಚ್ಚಿ ಬೀಳಿಸುತ್ತೆ!​

publive-image

ಆರೋಪಿಗಳ ಬಟ್ಟೆ ಮೇಲೆ ರಾಜು ರಘುವಂಶಿ ರಕ್ತದ ಕಲೆಗಳು ಪತ್ತೆಯಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ವೇಳೆ ಆರೋಪಿಗಳ ಬಟ್ಟೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಆರೋಪಿಗಳಾದ ಆಕಾಶ್, ಆನಂದ್ ಬಟ್ಟೆಯಲ್ಲಿ ಮತ್ತು ಸೋನಂ ರೈನ್​ಕೋಟ್​ನಲ್ಲಿ ಹಾಗೂ ಮತ್ತೊಬ್ಬ ಆರೋಪಿಯ ಬಟ್ಟೆ ಮೇಲೆ ರಕ್ತದ ಕಲೆಗಳು ಇರೋದು ದೃಢವಾಗಿದೆ.

ಇನ್ನು ಕೃತ್ಯದ ವೇಳೆ ಬಳಸಿದ್ದ ಬಟ್ಟೆ, ಮಚ್ಚಿನ ಮೇಲೆ ಆರೋಪಿಗಳ ಬೆರಳಚ್ಚು ಪತ್ತೆಯಾಗಿದೆ. ಇನ್ನು ಆರೋಪಿಗಳ ಮೊಬೈಲ್​ ಫೋನ್ ಕಾಲ್ ಡೀಟೈಲ್ಸ್ ಪರಿಶೀಲನೆ ಮಾಡಲಾಗಿದೆ. ಅದರಲ್ಲಿ ಎಲ್ಲಾ ಆರೋಪಿಗಳು ಪರಸ್ಪರ ಸಂಪರ್ಕದಲ್ಲಿರೋದು ಗೊತ್ತಾಗಿದೆ. ಮೇಘಾಲಯ ಸೇರಿದಂತೆ ಉಳಿದೆಡೆ 42 ಸಿಸಿಟಿವಿ ವಿಡಿಯೋ ಸಾಕ್ಷ್ಯ ಸಂಗ್ರಹ ಮಾಡಲಾಗಿದೆ. ಮಚ್ಚು ಖರೀದಿಸಿದ ಅಂಗಡಿ ಮಾಲೀಕರಿಂದಲೂ ಹೇಳಿಕೆ ಪಡೆಯಲಾಗಿದೆ. ಮೇಘಾಲಯದ ಲಾಡ್ಜ್​ಗಳಲ್ಲಿ ತಂಗಿದ್ದ ಆರೋಪಿಗಳು ತಮ್ಮ ನಿಜವಾದ ಹೆಸರು, ಆಧಾರ್ ಕಾರ್ಡ್ ನೀಡಿದ್ದಾರೆ.

ಇದನ್ನೂ ಓದಿ: ಹೆಂಡ್ತಿ ಅಲ್ಲ ರಾಕ್ಷಸಿ!.. ತಾನೇ ಮದುವೆ ಆಗಿದ್ದ ಸೋನಮ್‌, ಗಂಡನಿಗೆ ಸುಪಾರಿ ಕೊಟ್ಟಿದ್ದು ಯಾಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment