/newsfirstlive-kannada/media/post_attachments/wp-content/uploads/2025/06/Indore-Couple.jpg)
ಮೇಘಾಲಯದ ಚಿರಾಪುಂಜಿ ಬಳಿ ಮಧ್ಯಪ್ರದೇಶದ ಇಂದೋರ್​ ದಂಪತಿ ಹನಿಮೂನ್​​ಗೆ ಬಂದು ಏಕಾಏಕಿ ನಾಪತ್ತೆ ಆಗಿರೋದು ಭಾರೀ ಸಂಚಲನ ಮೂಡಿಸಿತ್ತು. ಇದೀಗ ನಾಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.
ಏನಿದು ಪ್ರಕರಣ..?
ಸೋನಂ ಮತ್ತು ರಾಜಾ ರಘುವಂಶಿ ಹನಿಮೂನ್​ಗೆ ಬಂದು ನಾಪತ್ತೆ ಆಗಿದ್ದ ದಂಪತಿ. ಇವರು ಮಧ್ಯ ಪ್ರದೇಶದ ಇಂಧೋರ್ ಮೂಲದವರು. ನವವಿವಾಹಿತ ಈ ಜೋಡಿ ಹನಿಮೂನ್‌ಗಾಗಿ ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಿಗೆ ಬಂದಿತ್ತು. ಮೇ 23 ರಂದು ದಿಢೀರ್ ನಾಪತ್ತೆಯಾಗಿತ್ತು. ಅಂದಿನಿಂದ ಅವರಿಗಾಗಿ ಹುಡುಕಾಟ ಶುರುವಾಗಿತ್ತು. ಅಲ್ಲದೇ ರಾಜಾ ರಘುವಂಶಿ ಕುಟುಂಬ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿತ್ತು. ಇದೀಗ ಅಸಲಿ ವಿಚಾರ ಬಯಲಾಗಿದೆ.
ಇದನ್ನೂ ಓದಿ: IPL​-2025 ಮೂಲಕ ಬಿಸಿಸಿಐ ಆದಾಯದಲ್ಲಿ ಭಾರೀ ಏರಿಕೆ.. ಈ ವರ್ಷ ಎಷ್ಟು ಸಾವಿರ ಕೋಟಿ ಗಳಿಸಿದೆ..?
ತೀವ್ರ ಹುಡುಕಾಟ ನಂತರ ಜೂನ್ 2 ರಂದು ರಾಜಾ ರಘುವಂಶಿಯ ಛಿದ್ರಗೊಂಡ ಮೃತದೇಹ ಹಳ್ಳದಲ್ಲಿ ಪತ್ತೆಯಾಗಿತ್ತು. ಆದರೆ ಅವರ ಪತ್ನಿ ಸೋನಂ ಪತ್ತೆ ಆಗಿರಲಿಲ್ಲ. ಹೀಗಾಗಿ ಪೊಲೀಸರು ಸ್ಥಳೀಯರು ಹಾಗೂ ಪ್ರವಾಸಿ ಗೈಡ್​​ಗಳ ವಿಚಾರಣೆಯನ್ನು ಮುಂದುವರಿಸಿದ್ದರು.
ಟ್ವಿಸ್ಟ್​ ಏನು..?
ಹನಿಮೂನ್​ಗೆ ಬಂದ ಜೋಡಿಗಳನ್ನು ಯಾರೂ ಅಪಹರಿಸಿದ್ದಲ್ಲ. ದುಷ್ಕರ್ಮಿಗಳೂ ಜೀವ ತೆಗೆದು ಬಿಸಾಡಿಲ್ಲ. ಬದಲಾಗಿ ರಾಜಾ ರಂಘುವಂಶಿಯ ಪತ್ನಿಯೇ ಮಾಡಿದ ಮಾಸ್ಟರ್ ಪ್ಲಾನ್ ಎಂದು ಗೊತ್ತಾಗಿದೆ. ಇದೀಗ ಮೇಘಾಲಯದ ಪೊಲೀಸರಿಗೆ ಪತ್ನಿ ಸೋನಂ ಶರಣಾಗಿದ್ದಾಳೆ. ಪತಿಯನ್ನು ತಾನೇ ಮುಗಿಸಿರೋದಾಗಿ ಆಕೆ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಚೆನಾಬ್ ಬ್ರಿಡ್ಜ್ ಯಶಸ್ಸಿನ ಹಿಂದೆ ಬೆಂಗಳೂರು ಪ್ರಾಧ್ಯಾಪಕಿಯ ಶ್ರಮ.. ಯಾರು ಈ ಮಾಧವಿ ಲತಾ..?
ಮಧ್ಯಪ್ರದೇಶದಿಂದ 4 ಮಂದಿ ಹಂತಕರು ಮೇಘಾಲಯಕ್ಕೆ ಬಂದು ಕೃತ್ಯ ನಡೆಸಲಾಗಿದೆ. ಈ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾ ರಘುವಂಶಿ ಮುಗಿಸಿ ಬಳಿಕ ಆರೋಪಿ ಸೋನಂ ನಾಪತ್ತೆಯಾಗಿದ್ದಳು. ಜೂನ್, 2 ರಂದು ಮೃತದೇಹ ಸಿಕ್ಕಿದ ಮೇಲೆ, ಪೊಲೀಸರಿಗೆ ಸೋನಂ ಮೇಲೆ ಅನುಮಾನ ಕಾಡಿತ್ತು. ಅಲ್ಲದೇ ಪ್ರವಾಸಿ ಗೈಡ್​​ಗಳ ವಿಚಾರಣೆಯಲ್ಲಿ ಈ ಜೋಡಿ ಮೂವರು ಪುರುಷರ ಜೊತೆ ಇರೋದಾಗಿ ತಿಳಿದುಬಂದಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಚುರುಕು.. ರೈತರ ಮೊಗದಲ್ಲಿ ಮಂದಹಾಸ.. ಮಳೆಯ ಅಬ್ಬರ ಹೆಂಗಿದೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ