49 ಕೆಜಿ ತೂಕದ ಮಹಿಳೆ ಹೊಟ್ಟೆಯಲ್ಲಿ 15KG ತೂಕದ ಗಡ್ಡೆ ಪತ್ತೆ
ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆ ಜೀವಕ್ಕೆ ಕುತ್ತು
ವೈದ್ಯಕೀಯ ಲೋಕಕ್ಕೆ ಸವಾಲಾದ ಅಪರೂಪದ ಕಾಯಿಲೆ ಇದು
ಇಂದೋರ್: ಮಹಿಳೆಯ ಹೊಟ್ಟೆಯಲ್ಲಿದ್ದ 15 ಕೆ.ಜಿ ಗಡ್ಡೆಯನ್ನ ಯಶಸ್ವಿಯಾಗಿ ಹೊರ ತೆಗೆದು ವೈದ್ಯರು ಅವರಿಗೆ ಮರುಜನ್ಮ ನೀಡಿರೋ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 41 ವರ್ಷದ ಮಹಿಳೆಯೊಬ್ಬರು ಹೊಟ್ಟೆನೋವು ಎಂದು ಇಂದೋರ್ ನಗರದ ಇಂಡೆಕ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅತೀವ ನೋವಿನಿಂದ ಬಳಲುತ್ತಿದ್ದ ಮಹಿಳೆಯ ಹೊಟ್ಟೆಯನ್ನು ವೈದ್ಯರು ಸ್ಕ್ಯಾನ್ ಮಾಡಿದ್ದಾರೆ. ಈ ವೇಳೆ ಸ್ಕ್ಯಾನಿಂಗ್ ಮಾಡಿಸಿದಾಗ ಅವರ ಹೊಟ್ಟೆಯಲ್ಲಿ ಬರೋಬ್ಬರಿ 15 ಕೆ.ಜಿ ಗಡ್ಡೆ ಇರುವುದು ಪತ್ತೆಯಾಗಿದೆ. ಇದನ್ನು ನೋಡಿದ ವೈದ್ಯರಿಗೆ ನಿಜವಾಗಿಯೂ ಶಾಕ್ ಆಗಿದೆ.
ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ 49 ಕೆಜಿ ತೂಕವನ್ನು ಹೊಂದಿದ್ದರು. ಅವರ ದೇಹದಲ್ಲಿ ಸರಿ ಸುಮಾರು 15 ಕೆಜಿ ತೂಕದ ಗಡ್ಡೆ ಬೆಳೆದಿರೋದು ಬೆಳಕಿಗೆ ಬಂದಿದೆ. ಇದು ಮಹಿಳೆಯ ಹೊಟ್ಟೆಯಲ್ಲಿದ್ದು ಪ್ರಾಣಕ್ಕೆ ಅಪಾಯ ತಂದಿತ್ತು. ಈ ಗಡ್ಡೆಯು ದಿನ ಕಳೆದಂತೆ ಸಿಡಿಯುವ ಹಂತಕ್ಕೆ ಬಂದು ತಲುಪಿತ್ತು. ಈ ಊತವು ರೋಗಿಯ ಜೀವಕ್ಕೆ ಅಪಾಯಕಾರಿ ಎಂದು ತಿಳಿದ ಕೂಡಲೇ ಆಪರೇಷನ್ಗೆ ಮುಂದಾದ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರತೆಗೆದಿದ್ದಾರೆ. ಸದ್ಯ ಮಹಿಳೆ ಚೇತರಿಸಿಕೊಳ್ಳುತ್ತಿದ್ದು ಹೊಟ್ಟೆ ನೋವಿನಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಇಂತಹ ದೊಡ್ಡ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿರುವ ಇಂಡೆಕ್ಸ್ ಆಸ್ಪತ್ರೆಯ ಅಧ್ಯಕ್ಷ ಸುರೇಶ್‌ಸಿಂಗ್ ಬದೌರಿಯಾ ಹಾಗೂ ಉಪಾಧ್ಯಕ್ಷ ಮಯಾಂಕ್‌ರಾಜ್ ಸಿಂಗ್ ಭದೌರಿಯಾ ಮತ್ತು ಅವರ ತಂಡದ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ