/newsfirstlive-kannada/media/post_attachments/wp-content/uploads/2025/02/BIKE-RIDER.jpg)
ಭಿಕ್ಷಾಟನೆಗೆ ನಿಷೇಧವಿದ್ದರೂ ಭಿಕ್ಷೆ ಬೇಡಿದ ವ್ಯಕ್ತಿಗೆ 10 ರೂಪಾಯಿ ನೀಡಿದ ಮಧ್ಯಪ್ರದೇಶದ ಇಂಧೋರ್‌ನ ಬೈಕ್ ಸವಾರನಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ಬೀಳುವ ಭೀತಿ ಎದುರಾಗಿದೆ.
2 ವಾರದಲ್ಲಿ ಇಂದೋರ್ನಲ್ಲಿ ದಾಖಲಾದ 2ನೇ ಪ್ರಕರಣ ಇದಾಗಿದೆ. ಸೋಮವಾರ ಲಸುಡಿಯಾ (Lasudia) ಠಾಣಾ ವ್ಯಾಪ್ತಿಯ ದೇವಾಲಯದ ಬಳಿ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿದ್ದ. ಆ ವ್ಯಕ್ತಿಗೆ ಅಪರಿಚಿತ ಬೈಕ್ ಸವಾರ 10 ರೂಪಾಯಿ ನೀಡಿದ್ದ.
ಇದನ್ನೂ ಓದಿ: ಯುವಿಗೆ ಗುರುವಂದನೆ ಸಲ್ಲಿಸಿದ ಅಭಿ.. ಬೆನ್ನು ತಟ್ಟೋರೂ ಬೇಕು ಗುರು ಎಂದ ಕ್ರಿಕೆಟ್ ಜಗತ್ತು..!
ಹೀಗಾಗಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಎನ್ಎಸ್ ಸೆಕ್ಸನ್ 223 ಅಡಿಯಲ್ಲಿ ಹಣ ನೀಡಿದ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪ ಸಾಬೀತಾದರೆ 1 ವರ್ಷ ಜೈಲು ಶಿಕ್ಷೆ ಅಥವಾ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು. ಅಥವಾ ಎರಡನ್ನೂ ವಿಧಿಸಬಹುದು. ಜ.23ರಂದು ಇದೇ ರೀತಿ ಘಟನೆ ನಡೆದಿತ್ತು. ಖಾಂಡ್ವಾ ರಸ್ತೆಯ ದೇವಾಲಯದ ಮುಂದೆ ಭಿಕ್ಷುಕನಿಗೆ ಭಿಕ್ಷೆ ನೀಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಭಿಕ್ಷುಕ ನಿರ್ಮೂಲಾ ತಂಡದ ಅಧಿಕಾರಿ ಫೂಲ್ ಸಿಂಗ್ ಅನ್ನೋರು ಕಾರ್ಯಾಚರಣೆ ನಡೆಸ್ತಿದ್ದಾರೆ. ಕಳೆದ 6 ತಿಂಗಳಲ್ಲಿ 600 ಮಂದಿ ಭಿಕ್ಷಕರನ್ನು ಪತ್ತೆ ಮಾಡಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ನೂರು ಮಕ್ಕಳನ್ನು ಹುಡುಕಿ, ಅವರನ್ನು ವಿವಿಧ ಸಂಸ್ಥೆಗಳಿಗೆ ಕಳುಹಿಸಿದ್ದಾರೆ. ಟ್ರಾಫಿಕ್ ಸಿಗ್ನಲ್, ದೇವಾಲಯ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಕಂಡುಬರುವ ಭಿಕ್ಷುಕರನ್ನು ಪತ್ತೆ ಹಚ್ಚುತ್ತಿದ್ದಾರೆ.
ಇದನ್ನೂ ಓದಿ: ಒಂದೊಳ್ಳೆ ಕೆಲ್ಸಕ್ಕೆ ಮುಂದಾದ ನಮ್ಮ ಮೆಟ್ರೋ; ಗೌರವ ಮತ್ತಷ್ಟು ಹೆಚ್ಚಾಯ್ತು ಎಂದ ಪ್ರಯಾಣಿಕರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ