/newsfirstlive-kannada/media/post_attachments/wp-content/uploads/2025/07/MYSORE-CITY-2.jpg)
ದೇಶದಲ್ಲಿ ಮತ್ತೊಮ್ಮೆ ಸ್ವಚ್ಛ ನಗರವಾಗಿ ಇಂದೋರ್ ಸಿಟಿ (Indore city) ಹೊರಹೊಮ್ಮಿದೆ. ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛಾ ಸರ್ವೇಕ್ಷಣಾ 2024-25ನೇ ಸಾಲಿನ ಸಮೀಕ್ಷೆಯಲ್ಲಿ ಇಂದೋರ್ ದೇಶದ ನಂಬರ್ ಒನ್ ಕ್ಲೀನ್ ಸಿಟಿ ಅವಾರ್ಡ್ (Super Swachh League Cities) ಪಡೆದಿದೆ. ಸತತ ಎಂಟನೇ ವರ್ಷವೂ ಇಂದೋರ್ ದೇಶದ ನಂಬರ್ ಒನ್ ಕ್ಲೀನ್ ಸಿಟಿಯಾಗಿ ಪ್ರಶಸ್ತಿ ಪಡೆದಿರುವುದು ವಿಶೇಷ.
ಈ ಹಿಂದೆ ಒಂದು ವರ್ಷ ಮಾತ್ರ ಕರ್ನಾಟಕದ ಮೈಸೂರು ನಗರವು ಸ್ವಚ್ಛತೆಯಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದಿತ್ತು. ಬಳಿಕ ಮೈಸೂರು ನಗರಕ್ಕೆ ನಂಬರ್ ಒನ್ ಕ್ಲೀನ್ ಸಿಟಿ ಪಟ್ಟ ಪಡೆಯಲು ಸಾಧ್ಯವಾಗಿಲ್ಲ. ಇತ್ತ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಸ್ಮಾರ್ಟ್ ಸಿಟಿಗಳೂ ಕೂಡ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿವೆ.
ಇಂದೋರ್ ಬಳಿಕ ಸೂರತ್ ಮತ್ತು ನವೀ ಮುಂಬೈ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಇನ್ನೂ 3- 10 ಲಕ್ಷ ಜನಸಂಖ್ಯೆಯ ನಗರಗಳ ಕೆಟಗರಿಯಲ್ಲಿ ನೋಯ್ಡಾ ದೇಶದ ನಂಬರ್ ಒನ್ ಕ್ಲೀನ್ ಸಿಟಿಯಾಗಿ ಆಯ್ಕೆಯಾಗಿದೆ. ಈ ಕೆಟಗರಿಯಲ್ಲಿ ಚಂಢೀಗಡ ಎರಡನೇ ಸ್ಥಾನ ಪಡೆದರೆ, ಮೈಸೂರು ಮೂರನೇ ಱಂಕ್ ಪಡೆದಿದೆ.
/newsfirstlive-kannada/media/post_attachments/wp-content/uploads/2025/07/MYSORE-CITY-1.jpg)
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕ ಸ್ವಚ್ಛಾ ಸರ್ವೇಕ್ಷಣಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಕೇಂದ್ರದ ವಸತಿ ಮತ್ತು ನಗರಾಭಿವೃದ್ದಿ ಇಲಾಖೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಟಿ ಮತ್ತು ನಗರ ಸ್ಢಳೀಯ ಸಂಸ್ಥೆಗಳಿಗೆ ನಗರಗಳ ಸ್ವಚ್ಛತೆ ಕಾಪಾಡಿದ್ದಕ್ಕಾಗಿ ಸ್ವಚ್ಛಾ ಭಾರತ್ ಮಿಷನ್ ಆರ್ಬನ್ ಯೋಜನೆಯಡಿ ಪ್ರಶಸ್ತಿ ನೀಡಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/07/MYSORE-CITY-3.jpg)
ಸ್ವಚ್ಛಾ ಸರ್ವೇಕ್ಷಣಾ 2024-25 ರಲ್ಲೂ ಇಂದೋರ್ ಸಿಟಿಗೆ ಸ್ವಚ್ಛತೆಯಲ್ಲಿ ನಂಬರ್ ಒನ್ ಸ್ಥಾನ ಸಿಗುವ ವಿಶ್ವಾಸವನ್ನು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ವ್ಯಕ್ತಪಡಿಸಿದ್ದರು. ಇಂದೋರ್ ಈ ಸ್ಥಾನಕ್ಕೆ ಅರ್ಹವಾಗಿದೆ. ಈ ಪ್ರಶಸ್ತಿಯು ಈ ಹಿಂದಿನ ಸಾಧನೆ, ಭವಿಷ್ಯದ ಸಾಮರ್ಥ್ಯವನ್ನು ಗುರುತಿಸಿದೆ ಎಂದು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಹೇಳಿದ್ದಾರೆ.
ನಗರಗಳು ಉತ್ತಮ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಸ್ವಚ್ಛತೆಯ ಱಂಕಿಂಗ್ ಅನ್ನು ಕೇಂದ್ರದ ನಗರಾಭಿವೃದ್ದಿ ಇಲಾಖೆಯು ಪ್ರತಿ ವರ್ಷ ನೀಡುತ್ತಿದೆ. ನಗರಗಳ ನಡುವೆ ಸ್ವಚ್ಛತೆಯ ವಿಷಯದಲ್ಲಿ ಸ್ಪರ್ಧೆಯನ್ನು ಏರ್ಪಡಿಸಿದಂತೆ ಆಗಿದೆ.
ಇದನ್ನೂ ಓದಿ: ಬೆಟ್ಟಿಂಗ್ ಗೀಳಿಗೆ ಬಿದ್ದು ಪೊಲೀಸಪ್ಪ ದುರಂತ ಅಂತ್ಯ; ಹೆಂಡತಿ, ಇಬ್ಬರು ಮಕ್ಕಳು ಅನಾಥ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us