/newsfirstlive-kannada/media/post_attachments/wp-content/uploads/2025/06/PLANE-CRASH.jpg)
ವಿಮಾನ ದುರಂತ ಒಂದು.. ವಿಮಾನದೊಳಗಿದ್ದವರ ಸಾವಿನ ಸಂಖ್ಯೆ 241.. ಅದೆಷ್ಟೋ ಕನಸುಗಳನ್ನ ಹೊತ್ತು ಲೋಹದ ಹಕ್ಕಿಯ ಬೆನ್ನೇರಿದ್ದ ಪ್ರಯಾಣಿಕರು ವಿಮಾನ ದುರಂತದಲ್ಲಿ ಸಜೀವ ದಹನವಾಗಿದ್ದಾರೆ. ಇದೀಗ ವಿಮಾನ ಪತನದಲ್ಲಿ ಮೃತಪಟ್ಟವರ ಕುಟುಂಬಗಳ ಕಣ್ಣೀರಿನ ಕಥೆಗಳು ಹೊರಬೀಳುತ್ತಿವೆ.
ವಿಮಾನ ಪತನದಲ್ಲಿ ಇಂದೋರ್​ ಮೂಲದ ಬೆಂಗಳೂರಿನ ಟೆಕ್ಕಿ ಸಾವು
ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಟೆಕ್ಕಿಯೊಬ್ಬರು ಸಾವನ್ನಪ್ಪಿರುವುದು ಖಚಿತವಾಗಿದೆ. ಇಂದೋರ್​ ಮೂಲದ ಹರ್ ಪ್ರೀತ್ ಹೊರಾ ಪತಿ ಲಂಡನ್​ನಲ್ಲಿ ಟೆಕ್ಕಿಯಾಗಿದ್ದಾರೆ. ಇದೇ ಜೂನ್​ 16ರಂದು ಪತಿಯ ಬರ್ತ್​ಡೇ ಇತ್ತು. ಈ ಹಿಂದೆ ಜೂನ್ 19 ರಂದು ಲಂಡನ್ ಗೆ ತೆರಳಲು ಆಕೆ ಯೋಜಿಸಿದ್ದರು. ಆದ್ರೆ ಪತಿಯ ಜನ್ಮ ದಿನವನ್ನು ಅವಿಸ್ಮರಣೀಯವಾಗಿಸುವ ಬಯಕೆಯಿಂದ ಹರ್​ ಪ್ರೀತ್​.. ಜೂನ್ 12ರಂದೇ ತೆರಳಲು ದಿನಾಂಕ ಬದಲಿಸಿದ್ದರಂತೆ.. ಆದ್ರೆ ವಿಧಿಯಾಟವೇ ಬೇರೆ ಇತ್ತು.. ಸದ್ಯ ಇಂಧೋರ್​ನಲ್ಲಿ ನೆಲೆಸಿರುವ ಅವರ ಕುಟುಂಬ ದುಖದ ಮಡುವಿನಲ್ಲಿ ಮುಳುಗಿದೆ.
ಇದನ್ನೂ ಓದಿ: ಅಹಮದಾಬಾದ್ ವಿಮಾನ ಅಪಘಾತದ ಬೆನ್ನಲ್ಲೇ ದೊಡ್ಡ ಆದೇಶ ಹೊರಡಿಸಿದ DGCA.. ಏನದು?
ಮಗಳಿಗೆ ಸರ್ಪೈಸ್​ ನೀಡಲು ಹೊರಟಿದ್ದ ಅಪ್ಪ-ಅಮ್ಮ
ಗುಜರಾತ್​ನ ವಸಾದ್​ ಮೂಲದ ರಜನಿಕಾಂತ್​ ಪಟೇಲ್​ ಮತ್ತು ದಿವ್ಯಾಬೇನ್​ ರಜನಿಕಾಂತ್ ಅವರ ಮಗಳು​ ಲಂಡನ್​ನಲ್ಲಿದ್ದಾರೆ. ಮಗಳ ಕಾನ್ವಕೇಷನ್​ ಸಮಾರಂಭದಲ್ಲಿ ಪಾಲ್ಗೊಳ್ಳಲು ಜೂನ್​ 17ರಂದು ಲಂಡನ್​ಗೆ ತೆರಳಲು ಪ್ಲಾನ್​ ಮಾಡಿದ್ರು.. ಮಗಳ ಜೊತೆ ಹೆಚ್ಚಿನ ಸಮಯ ಕಳೆಯಲು.. ಹಾಗೂ ಸರ್ಪೈಸ್​ ನೀಡಲು, ಜೂನ್​ 12ರಂದೇ ಲಂಡನ್​ಗೆ ಹೊರಟ್ಟಿದ್ದರು. ಇವರ ಜೊತೆ ಸಂಬಂಧಿರೊಬ್ಬರೂ ಕೂಡ ಇದ್ದರು.. ಆದ್ರೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.
ಇದನ್ನೂ ಓದಿ: 28 ಗಂಟೆಗಳ ಬಳಿಕ ಸಿಕ್ಕ ಕಪ್ಪು ಪೆಟ್ಟಿಗೆಯಲ್ಲಿ ಏನಿದೆ..? ಸಂಪೂರ್ಣ ಪರಿಶೀಲನೆಗೆ ಎಷ್ಟು ದಿನ ಬೇಕು ಗೊತ್ತಾ..?
ವಿಮಾನ ದುರಂತದ ಸ್ಥಳಕ್ಕೆ ಇಂದು ಎಐಸಿಸಿ ಅಧ್ಯಕ್ಷ ಭೇಟಿ
ಭೀಕರ ವಿಮಾನ ದುರಂತದಲ್ಲಿ 245 ಇದರ ಜೊತೆಗೆ ಹಾಸ್ಟೆಲ್​ನಲ್ಲಿ 24 ಜನರು ಒಟ್ಟು 265 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ, ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಜೊತೆಗೆ ಗಾಯಾಳುಗಳನ್ನು ಭೇಟಿ ಆಗಿ ಧೈರ್ಯ ತುಂಬಿದ್ರು. ಇದರ ಬೆನ್ನಲ್ಲೇ ಇವತ್ತು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದುರಂತದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಇದರ ಜೊತೆಗೆ ಮೃತರು ಮತ್ತು ಗಾಯಾಳುಗಳ ಕುಟುಂಬಕ್ಕೂ ಸಾಂತ್ವನ ಹೇಳಲಿದ್ದಾರೆ.
ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್​ನ ಮಾಜಿ ಸಿಎಂ ವಿಜಯ್​ ರೂಪಾನಿ ದುರ್ಮರಣಕ್ಕೀಡಾಗಿದ್ದಾರೆ. ಲಂಡನ್​ನಲ್ಲಿದ್ದ ಪತ್ನಿಯನ್ನು ಕರೆತರಲು ಹೊರಟ್ಟಿದ್ದವರು ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ರು.. ಮಾಜಿ ಸಿಎಂ ನಿಧನಕ್ಕೆ ಪ್ರಧಾನಿಯಾದಿಯಾಗಿ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಇವತ್ತು ವಿಜಯ್​ ರೂಪಾನಿಯವರ ಅಂತ್ಯಸಂಸ್ಕಾರ ನೆರವೇರಲಿದೆ.
ಇದನ್ನೂ ಓದಿ: ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದು ಏಕೆ..? ಮತ್ತೆ ಮಧ್ಯಪ್ರಾಚ್ಯದಲ್ಲಿ ಆಗ್ತಿರೋದು ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ